'10 ವರ್ಷ ಶಾಸಕರಾದರೂ ಅಭಿವೃದ್ಧಿ ಏನೂ ಮಾಡಿಲ್ಲ'
ಹಾಸನ: ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಎ. ಮಂಜು ಅರಕಲಗೂಡು ಕ್ಷೇತ್ರದ ಎಎಲ್ಎ ಆಗಿ 10 ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಆದರೂ ಆಡು ತಾಲೂಕಿಗೆ ರಸ್ತೆಗಳು ಅಭಿವೃದ್ಧಿ ಆಗಿಲ್ಲ. ಜನರಿಗೆ ಮೂಲಭೂತ ಸೌಕರ್ಯ ನೀಡಿಲ್ಲ. ಎಂದು ಜೆಡಿಎಸ್ ಯುವ ಮುಖಂಡ ವಕೀಲ ಚನ್ನಂಗೀಹಳ್ಳಿ ಶ್ರೀಕಾಂತ್ ಟೀಕಿಸಿದ್ದಾರೆ.
ಈ ವರ್ಷದ ರಾಜ್ಯ ಬಜೆಟ್ನಲ್ಲಿ ಹಾಸನ ಜಿಲ್ಲೆಗೆ ಹೊಸ ಯೋಜನೆಗಳು, ಹಳೇ ಯೋಜನೆಗಳಿಗೆ ಹಣ ಮಂಜೂರು ಮಾಡಲು ಶ್ರಮ ಪಡದೆ ಸುಮ್ಮನೆ ಕಾಂಗ್ರೆಸ್ ಮುಖಂಡರು ಸುಳ್ಳು ಹೇಳಿಕೆ ನೀಡಿ ತಮ್ಮ ಲೋಪದೋಷಗಳನ್ನು ಮುಚ್ಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಲೋಕಸಭೆ ಚುನಾವಣೆಗೆ ನಿಲ್ಲಲು ಮನಸ್ಸು ಮಾಡಿದ್ದರೆ ರೇಲ್ವೆ ಗೇಟ್ ಹತ್ತಿರ ಫ್ಲೈ ಓವರ್ ಮಾಡಲು ಮುಖ್ಯಮಂತ್ರಿಗೆ ಹೇಳಿ ರಾಜ್ಯದ ಪಾಲಿನ ಹಣ ಬಿಡುಗಡೆ ಮಾಡಿಸಲು ಏಕೆ ವಿಫಲರಾಗಿದ್ದೀರಿ ಎಂದು ಶ್ರೀಕಾಂತ್ ಟೀಕಿಸಿದರು.
ಶ್ರಮಪಟ್ಟಿಲ್ಲ: ಶಿಕ್ಷಣ, ಸಾಮಾಜಿಕ, ಆಸ್ಪತ್ರೆ ಸೌಲಭ್ಯಗಳನ್ನು ಕೊಡಿಸುವಲ್ಲಿ ವಿಫಲರಾಗಿದ್ದಾರೆ.
ತಮ್ಮ ತಾಲೂಕಿಗೆ ಮೂಲಭೂತ ಸೌಕರ್ಯಗಳನ್ನು ಮಂಜೂರು ಮಾಡಲು ಶ್ರಮಪಡದ ಎ. ಮಂಜು, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮಾತನಾಡಲು ಅರ್ಹರೇ ಎಂದು ಪ್ರಶ್ನಿಸಿದ್ದಾರೆ.
ಅದು ನಿರ್ನಾಮ ಕಾರ್ಯಕ್ರಮ: ಭಾರತ ನಿರ್ಮಾಣ ಕಾರ್ಯಕ್ರಮವನ್ನು ಎಲ್ಲಾ ತಾಲೂಕುಗಳಲ್ಲಿ ಆಯೋಜಿಸಲಾಯಿತು. ಆ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಮಂಜೂರಾಗಿ ಅನುಷ್ಠಾನಗೊಂಡಿವೆ.
ಆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಾಡಿದ್ದಾರೆ. ಭಾರತ ನಿರ್ಮಾಣ ಯೋಜನೆಗಳು ಹಾಸನ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿಲ್ಲ. ಅದು ನಿರ್ಮಾಣ ಕಾರ್ಯಕ್ರಮವಲ್ಲ. ಅದು ಭಾರತ ನಿರ್ನಾಮ ಕಾರ್ಯಕ್ರಮ ಎಂದು ಟೀಕಿಸಿದ್ದಾರೆ.
ಇನ್ನು, ಜಿಲ್ಲೆಗೆ ದೇವೇಗೌಡರ ಕೊಡುಗೆಗಳೇನು ಎಂದು ಟೀಕಿಸಬೇಕಿಲ್ಲ. ದೇವೇಗೌಡರು ಪ್ರಧಾನಿಯಾದಾಗ ಹಾಸನಕ್ಕೆ ರಿಂಗ್ ರಸ್ತೆಗಳು, ಕೈಗಾರಿಕಾ ಪ್ರದೇಶ ಅಭಿವೃದ್ಧಿ ನೆನೆಗುದಿಗೆ ಬಿದ್ದಿದ್ದವು. ಅವುಗಳನ್ನು ಮಂಜೂರು ಮಾಡಿಸಿ ಅಭಿವೃದ್ಧಿ ಮಾಡಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

