ಹಾಸನ

ಚಿನ್ನಾಭರಣ ಖರೀದಿಯಲ್ಲಿ ನಾ ಮುಂದು, ತಾ ಮುಂದು...

Published On :

ಹಾಸನ: ಅಕ್ಷಯ ತೃತೀಯ ಅಂಗವಾಗಿ ಚಿನ್ನಾಭರಣ ಖರೀದಿ ಮಾಡಿದರೇ ವರ್ಷವೆಲ್ಲಾ ಕೈ ತುಂಬಾ ಚಿನ್ನಾ ಸಿಗುತ್ತೇ, ಬಾಳೆಲ್ಲಾ ಬಂಗಾರವಾಗುತ್ತೆ... ಎಂಬುದು ಪ್ರತೀತಿ. ಅದೇನೇ ಇರಲಿ. ಹಾಸನ ಜಿಲ್ಲಾದ್ಯಂತ ಶುಕ್ರವಾರ ಅಕ್ಷಯ ತೃತೀಯ ಪ್ರಯುಕ್ತ ಮಹಿಳೆಯರು ಮತ್ತು ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಚಿನ್ನ ಖರೀದಿಸಿದರು.
ಜಿಲ್ಲೆಯ ಪ್ರತಿಷ್ಠಿತ ಚಿನ್ನದಂಗಡಿಗಳಲ್ಲದೇ ಸಾಮಾನ್ಯ ಅಂಗಡಿಗಳಲ್ಲೂ ಜನ ಚಿನ್ನ ಖರೀದಿಸಿದರು. ಹಾಸನ ನಗರದ ನಗರದ ಭೀಮಾ ಜ್ಯುಯಲರ್ಸ್, ಎಸ್‌ಆರ್ ಎಸ್,  ಮಲಬಾರ್ ಗೋಲ್ಡ್, ಆಕಾಶ್ ಜ್ಯೂಯಲರಿ ಸೇರಿದಂತೆ ಇನ್ನಿತರೆ ಜ್ಯುಯಲರ್ಸ್  ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಮಂದಿ ಸಡಗರದಲ್ಲಿ ಚಿನ್ನಾಭರಣ ಖರೀದಿಸಿದರು.
ಅಕ್ಷಯ ತೃತೀಯ ದಿವಸ ಬಂಗಾರ ಖರೀದಿ ಮಾಡಿದರೇ ಐಶ್ವರ್ಯ ಲಕ್ಷ್ಮಿ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಮೇಲೆ ಖರೀದಿಯಲ್ಲಿ ಹೆಚ್ಚಳ ಆಗುತ್ತಿದೆ. ಯುವತಿಯರು, ಮಹಿಳೆಯರು, ಪುರುಷರು ಎಲ್ಲಾ ಆಕರ್ಷಿತರಾಗಿ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ವ್ಯಾಪಾರದಲ್ಲಿ ತೊಡಗಿದರು.
ನಗರದ ಬಹುತೇಕ ಚಿನ್ನಾಭರಣ ಮಳಿಗೆಗಳು ಸಂಜೆಯವರೆಗೆ ಹೌಸ್ ಫುಲ್ ಆಗಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.