ಹೆಗ್ಗತ್ತೂರು ಗ್ರಾಮ ದೇವತೆ ದೇಗುಲ ಲೋಕಾರ್ಪಣೆ
ರಾಮನಾಥಪುರ: ಕೊಣನೂರು ಹೋಬಳಿ ಹೆಗ್ಗತ್ತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮದೇವತೆ ಮತ್ತು ಬಸವೇಶ್ವರಸ್ವಾಮಿ ದೇವಸ್ಥಾನಗಳು ಶುಕ್ರವಾರ ಲೋಕಾರ್ಪಣೆಯಾಯಿತು.
ನೂತನ ಗ್ರಾಮದೇವತೆ ಮತ್ತು ಬಸವೇಶ್ವರಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆಯಲ್ಲಿ ಅದಿಚುಂಚನಗಿರಿ ಮಹಾ ಸಂಸ್ಥಾನ ಮಠ ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಅರಕಲಗೂಡು ಚಿಲುಮೆ ಮಠದ ಜಯದೇವಸ್ವಾಮೀಜಿ, ಅದಿಚುಂಚನಗಿರಿ ಶಾಖಾ ಮಠ ಹಾಸನ ಶಂಭುನಾಥಸ್ವಾಮೀಜಿ, ತಮಿಳುನಾಡು ದ್ರೋಣಗಿರಿ ಮಠ ಪಟ್ಟದ ಅಶೋಕರಾಜೇಂದ್ರ ಸ್ವಾಮೀಜಿ, ಬೆಟ್ಟದಪುರ ಚನ್ನಬಸವದೇಶಿ ಕೇಂದ್ರ ಮಹಾಸ್ವಾಮೀಜಿ, ದೊಡ್ಡಮಠ ಮಲ್ಲಿಕಾರ್ಜುನ ಸ್ವಾಮೀಜಿ, ಅರೇಮಾದನಹಳ್ಳಿ ಗುರುಶಿವಸುಜ್ಞಾನಮೂರ್ತಿ ಮಹಾಸ್ವಾಮೀಜಿ, ಕೆಸವತ್ತೂರು ಮಠ ಶ್ರೀ ಬಸವರಾಜೇಂದ್ರಸ್ವಾಮೀಜಿ, ತೊರೆನೂರು ಮಠ ಮಲ್ಲೇಶಸ್ವಾಮೀಜಿ, ತೇಜೂರು ಮಠ ಕಲ್ಯಾಣಸ್ವಾಮೀಜಿ, ಟಿ. ಮಾಯಗೌಡನಹಳ್ಳಿ ಸೋಮಶೇಖರ ಶಿವಚಾರ್ಯಸ್ವಾಮೀಜಿ, ತಮಿಳುನಾಡು ಸುಬ್ರಹ್ಮಣ್ಯಸ್ವಾಮೀಜಿ, ಶಿರದನಹಳ್ಳಿ ಸಿದ್ದಲಿಂಗಸ್ವಾಮೀಜಿ ಹಾಗೂ ಇತರರು ಇದ್ದರು.
ಹೆಗ್ಗತ್ತೂರು ಗ್ರಾಮದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ನಿರ್ಮಾಣವಾಗಿರುವ ನೂತನ ಗ್ರಾಮದೇವತೆ ಮತ್ತು ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ನವಗ್ರಹ ಪೂಜೆ ಮತ್ತು ರುದ್ರಹೋಮಗಳು, ಸ್ವಾಮಿಯವರ ಪ್ರಪುರ ಪ್ರವೇಶ, ಪುಣ್ಯಹ ನಾಂದಿ, ನವಗ್ರಹ, ಮೃತ್ಯುಂಜಯ, ಸಪ್ತಸಬಾಧ್ಯತಾ, ಪೂಜೆ, ಅಷ್ಠ ಲಕ್ಷ್ಮಿ ಪೂಜೆ, ದಶ ದಿಕ್ಷರಿಕ ಪೂಜೆ, ವಾಸ್ತು, ಅಷ್ಠೋತ್ರ, ತತ್ವಋಷಿ ಶಿವಪಾರ್ವತಿ ಪೂಜೆ ಗ್ರಾಮದ ದಿಗ್ಭಂಧನ ಕಾರ್ಯಕ್ರಮಗಳನ್ನು ಅಗಮೀಕ ಮೈಸೂರು ವೇ. ದಿನೇಶ್ ಶಾಸ್ತ್ರಿ ಮತ್ತು ತಂಡ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

