ಸಂಚಾರಿದಳ ಕಿರುಕುಳ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ , ಹಾಸನ , ಮೇ 5
ಜಿಲ್ಲಾ ಅರಣ್ಯ ಸಂಚಾರಿದಳದವರು ನೀಡುವರ ಕಿರುಕುಳ ಖಂಡಿಸಿ ರೈತರು, ಕಾಫಿ ಬೆಳೆಗಾರರು ಹಾಗೂ ಇತರರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಅರಣ್ಯ ಭವನದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಅರಣ್ಯ ಸಂಚಾರಿದಳವರ ವಿರುದ್ಧ ಘೋಷಣೆ ಕೂಗಿ ಮನವಿ ನೀಡಿದರು.
ಜಿಲ್ಲೆಯು ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಿಂದ ಕೂಡಿದ್ದು, ಹೆಚ್ಚನವರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು, ಜೀವನ ನಿರ್ವಹಣೆಗೆ ಮುಖ್ಯವಾಗಿ ಕೃಷಿಯನ್ನೇ ಅವಲಂಣಜಿಸಿಲಾಗಿದೆ. ಇಲ್ಲಿನ ಪರಿಸರ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಲು ಅನುಕೂಲಕರವಾಗಿದೆ. ಆದರೆ ಸಂದರ್ಭಕ್ಕನುಗುಣವಾಗಿ ಬಾಳೆ, ಶುಂಠಿ ಕೃಷಿ ಕೈಗೊಳ್ಳಬೇಕಾದ ಸಂದರ್ಭದಲ್ಲಿ ಅನಿವಾರ್ಯವಾಗಿ ಹಿಡುವಳಿ ಪ್ರದೇಶದಲ್ಲಿ ಸ್ವಂತವಾಗಿ ಬೆಳೆಸಿದ ಕೆಲವು ಮರಗಳನ್ನು ಕಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ರೋಗಗ್ರಸ್ತ ಮತ್ತು ಸತ್ತ ಮರಗಳನ್ನು ಬುಡಸಮೇತ ಕಡಿಯಬೇಕಾಗುತ್ತದೆ.
ದಬ್ಬಾಳಿಕೆ: ಕಂದಾಯ ಇಲಾಖೆಯ ಅನುಮತಿ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮರ ಕಡಿದು ಸೌದೆ ತಯಾರಿಸಲು ಅನುಮತಿ ಕೋರಿದರೆ ಕಾನೂನನ್ನು ದುರಪಯೋಗಪಡಿಸಿಕೊಂಡು ಅನುಮತಿ ನಿರಾಕರಿಸುತ್ತಾರೆ ಮತ್ತು ಗಾಳಿ ಮಳೆಗೆ ಬಿದ್ದ ಮರಗಳನ್ನು ಕಡಿದು ಸೌದೆಗಳನ್ನು ತಯಾರಿಸಿದವರ ಮೇಲೆ ಅರಣ್ಯ ಮೊಕದ್ದಮೆ ದಾಖಲಿಸಿ, ಹೆಚ್ಚಿನ ಮೊತ್ತದ ದಂಡ ವಿಧಿಸುವುದಾಗಿ ಬೆದರಿಸುತ್ತಾರೆ. ಅಲ್ಲದೇ, ಒತ್ತಾಯ ಪೂರ್ವಕವಾಗಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಇದರಿಂದಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಹೊಂದುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಅಕ್ರಮವಾಗಿ ಮರಗಳನ್ನು ಸಾಗಿಸುವ ಬಿಲ್ಲೆಟ್ಸ್ಗಳ ಆಮಿಷಕ್ಕೊಳಗಾಗಿ ತಪಾಸಣೆ ನಡೆಸದೆ ಅಕ್ರಮ ಮರ ಸಾಗಾಣಿಕೆಗೆ ಅನುಕೂಲ ಮಾಡುತ್ತಿದ್ದಾರೆ ಎಂದು ದೂರಿದರು.
ಮನವಿಗೆ ಪುರಸ್ಕಾರವಿಲ್ಲ: ಅಧಿಕಾರಿಗಳ ಈ ಅಕ್ರಮ ಎಲ್ಲೆಡೆ ಪ್ರಚಾರಗೊಂಡಿದ್ದರೂ, ಈವರೆಗೆ ಇವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಲಿಖಿತ ಮನವಿ ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದರು.ಅಲ್ಲದೇ, ಅರಣ್ಯ ಸಂಚಾರಿ ದಳಕ್ಕೆ ಸೇರದ ಖಾಸಗಿ ವ್ಯಕ್ತಿಗಳನ್ನು ಲಂಚ ವಸೂಲಿಗಾಗಿ ನಿಯೋಜಿಸಿದ್ದು, ಅವರು ಇಲಾಖೆಯ ವಾಹನದಲ್ಲಿ ಬೇಕಾಬಿಟ್ಟಿ ತಿರುಗಲು ಅನುಕೂಲ ಅನುವು ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಅಲ್ಲದೇ, ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ ಸೂಕ್ತ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಆಗ್ರಹ: ಹಿಡುವಳಿದಾರರು ಸ್ವಂತ ಉಪಯೋಗಕ್ಕಾಗಿ ಮನ್ನಾ ಜಾತಿಯ ಮತ್ತು ಬೀಟೆ ಮರಗಳನ್ನು ಕಡಿಯಲು ಅನುಮತಿ ನೀಡಲು ಸರ್ಕಾರಿ ಸುತ್ತೋಲೆ ಇದ್ದು, ಇದನ್ನು ಪರಿಶೀಲಿಸಿ ಅನುಮತಿ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ್, ಆಶ್ರಯ, ಮಂಜುನಾಥ್, ಸೋಮಶೇಖರ್, ಮೋಹನ್ ಕುಮಾರ್, ಸಂತೋಷ್, ಪ್ರವೀಣ್ ಕುಮಾರ್, ಮಂಜಯ್ಯ, ನಾಗೇಶ್, ಕಾಂತರಾಜು, ಕುಮಾರ್, ರಾಜು, ಚಂದ್ರಕುಮಾರ್, ಮನೋಜ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

