ಹುಣಸೂರಿನಲ್ಲಿ ಗ್ರಾಮೀಣ ವಿವಿ
ಹುಣಸೂರು: ಸರ್ಕಾರವು ಗ್ರಾಮೀಣ ವಿಶ್ವವಿದ್ಯಾಲಯವನ್ನು ಹುಣಸೂರಿನಲ್ಲಿ ಸ್ಥಾಪಿಸಬೇಕೆಂದು ಡೀಡ್ ಸಂಸ್ಥೆಯ ಎಸ್. ಶ್ರೀಕಾಂತ್ ಹಾಗೂ ಜಿ.ಪಿ.ರಾಜು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರಲ್ಲಿ ಮನವಿ ಮಾಡಿದ್ದಾರೆ.ಇತ್ತೀಚೆಗೆ ಪಟ್ಟಣದ ನಾಗರಿಕರು ಡೀಡ್ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣ ವಿವಿ ಸ್ಥಾಪಿಸಲು ಹುಣಸೂರೇ ಉತ್ತಮ ಸ್ಥಳ. ದೇವರಾಜ ಅರಸರ ಅಥವಾ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಹೆಸರನ್ನು ವಿವಿಗೆ ಇಡುವುದು ಸೂಕ್ತ ಎಂದು ತೀರ್ಮಾನಿಸಿದ್ದಾರೆ.
ಪಟ್ಟಣದ ಸಮೀಪದಲ್ಲಿರುವ ಕಲ್ಬೆಟ್ಟ ಅರಣ್ಯ ಪ್ರದೇಶ, ರಂಗನತಿಟ್ಟು ಅರಣ್ಯದ ಉತ್ತರ ಭಾಗ, ಹೊಸೂರು ಗೇಟ್ನ ಹತ್ತಿರದ ಸಿಟಿಆರ್ಐ ಸಂಶೋಧನಾ ಕೇಂದ್ರಕ್ಕೆ ಗುತ್ತಿಗೆಗೆ ನೀಡಿರುವ ಅರಣ್ಯ ಪ್ರದೇಶ ವಿವಿ ಸ್ಥಾಪನೆಗೆ ಉತ್ತಮ ಸ್ಥಳವಾಗಿದೆ ಎಂದು ಅಭಿಪ್ರಾಯಪಟ್ಟರು.
ಕುಶಲತೆಗೆ ಸೋತ ಮೈಸೂರು
ಮೈಸೂರು: ರಾಜಸ್ಥಾನ್ ಆರ್ಟ್ ಆ್ಯಂಡ್ ಕ್ರಾಫ್ಟ್ ಸಂಸ್ಥೆಯು ನಗರದ ನಂಜರಾಜ ಬಹದ್ಧೂರ್ ಛತ್ರದಲ್ಲಿ ಏರ್ಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನವು ಮೆರಗು ಪಡೆದುಕೊಂಡಿದೆ. ಮೇ 9 ರಿಂದ 25 ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಅಂಕೋಲಾ ಪ್ರಿಂಟೆಡ್ ಸ್ಯಾರೀಸ್, ಅಜಾರಕ್ ಪ್ರಿಂಟೆಡ್ ಸ್ಯಾರೀಸ್, ಕಾಟನ್ ಮತ್ತು ಸಿಲ್ಕ್ ಸ್ಯಾರೀಸ್, ಕಟ್ವರ್ಕ್ ಸ್ಯಾರೀಸ್, ಫುಲ್ಕಾರಿ ಸ್ಯಾಂಪ್ ಚಿಕೆನ್ ಎಂಬ್ರಾಯಿಡರಿ, ದಖಾಯ್ ಮತ್ತು ಜಮ್ಧಾನಿ ಸ್ಯಾರೀಸ್, ಏಕತ್, ಮಹೇಶ್ವರಿ ಸ್ಯಾರೀಸ್, ಕಸೂತಿ ಎಂಬ್ರಾಯಿಡರಿ ಮತ್ತು ಕೋಟಾ ಸ್ಯಾರೀಸ್, ಕಂಚಿನ ವಿಗ್ರಹಗಳು, ಪಿಂಗಾಣಿ ವಸ್ತುಗಳು ಕಣ್ಮನ ಸೆಳೆಯುತ್ತಿವೆ. ಹಾಗೆ ಬಾಟಿಕ್ ಬಂದನಿ ಸ್ಯಾರೀಸ್, ಭಗಲ್ಪುರ್, ಪೂನಾ ಸ್ಯಾರೀಸ್, ಇಳಕಲ್ ಮತ್ತು ಕಾಂಚೀಪುರಂ ಸಿಲ್ಕ್ ಸ್ಯಾರೀಸ್, ಗದ್ವಾಲ್, ಪಟೋಲಾ ಸ್ಯಾರೀಸ್, ಸೆಮಿ ಪ್ರೀಸಿಯಸ್ ಸ್ಟೋನ್ ಜ್ಯುವೆಲ್ಲರಿ, ಸಿಲ್ವರ್ ಜ್ಯುವೆಲ್ಲರಿ, ಡಿಸೈನರ್ ಜ್ಯುವೆಲ್ಲರಿ ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ರೇಷ್ಮೆ ಉದ್ಯಮಗಳು ಪ್ರದರ್ಶನದಲ್ಲಿ ಭಾಗವಹಿಸಿವೆ.
ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಆಗ್ರಹ
ಭೇರ್ಯ: ತಾಲೂಕಿನ ರೈತರ ಜೀವನಾಡಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಲು ಹಾಗೂ ತಾಲೂಕಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವಂತೆ ಗಂಧನಹಳ್ಳಿ ನೀರು ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಜಿ.ಎಚ್. ನಾಗರಾಜ್ ಒತ್ತಾಯಿಸಿದ್ದಾರೆ. ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಅಡವಿಟ್ಟ ಕೀರ್ತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಶಾಸಕ ಸಾ.ರಾ. ಮಹೇಶ್ಗೆ ಸಲ್ಲುತ್ತದೆ. ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸುವಂತೆ ಶಾಸಕರು ಪಾದಯಾತ್ರೆ ಮಾಡಿ ಗಿಮಿಕ್ ರಾಜಕೀಯ ಮಾಡುತ್ತಿರುವುದು ನಾಚಿಗೇಡು ಎಂದು ಅವರು ಟೀಕಿಸಿದ್ದಾರೆ.
ನೀರಿಗೆ ತೊಂದರೆಆದ್ರೆ ಅಮಾನತು
ಮೈಸೂರು: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾದರೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರನ್ನೇ ಹೊಣೆಗಾರರನ್ನಾಗಿ ಮಾಡಿ, ಅಮಾನತುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಕುಡಿಯುವ ನೀರಿಗೆ ಯಾವುದೇ ಹಣದ ಕೊರತೆ ಇಲ್ಲ. ಮುಂಜಾಗ್ರತೆ ವಹಿಸಿ ಸಮರ್ಪಕವಾಗಿ ಪ್ರತಿಯೊಬ್ಬರಿಗೂ ಕುಡಿಯುವ ನೀರನ್ನು ಒದಗಿಸಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಪಿ.ಎ.ಗೋಪಾಲ್ ಮಾತನಾಡಿ, ಜಿಲ್ಲೆಯಲ್ಲಿ ಮತ್ತು ಚಾಮುಂಡೇಶ್ವರಿ, ವರುಣ ಕ್ಷೇತ್ರದಲ್ಲಿ ಕುಡಿಯುವ ನೀರು ಒದಗಿಸಲು ಕೈಗೊಂಡಿರುವ ಕ್ರಮದ ಬಗ್ಗೆ ವಿವರಿಸಿದರು.
ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಎಂಡಿಎ ಆಯುಕ್ತ ಎಸ್.ಪಾಲಯ್ಯ, ಎಸ್ಪಿ ಅಭಿನವ್ ಖರೆ, ಎಂಜಿನಿಯರುಗಳಾದ ಶಿವಕುಮಾರ್, ಸತ್ಯನಾರಾಯಣ್, ಭಾಸ್ಕರ್, ಜಯರಾಂ, ರಾಜು, ಸೋಮಶೇಖರ್, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

