ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳು ವಶ
ಹೊಳೆನರಸೀಪುರ: ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಲಾರಿಯೊಂದರಲ್ಲಿ ತುಂಬಿಕೊಂಡು ಕಸಾಯಿ ಖಾನೆಗೆ ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ರಾಸುಗಳನ್ನು ಗ್ರಾಮಾಂತರ ಠಾಣೆಯ ಪಿಎಸ್ಐ ಲೋಕೇಶ್, ತಮ್ಮ ಸಿಬ್ಬಂದಿಯೊಂಗೆ ಮಿಂಚಿನ ದಾಳಿ ನಡೆಸಿ ಲಾರಿ ಹಾಗೂ ರಾಸುಗಳನ್ನು ವಶಕ್ಕೆ ತೆಗೆದುಕೊಂಡಿರುವ ಘಟನೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವರದಿಯಾಗಿದೆ.
ತಾಲೂಕಿನ ಸಂತೆಗಳಿಗೆ ಮಾರಾಟಕ್ಕೆ ಬರುವ ರಾಸುಗಳನ್ನು ಕೆಲವರು ಖರೀದಿಸಿ ಅವುಗಳನ್ನು ಪಕ್ಕದ ಕೇರಳ ರಾಜ್ಯಕ್ಕೆ ಹಾಗೂ ಹೊರ ಜಿಲ್ಲೆಗಳಿಗೆ ರಾತ್ರೋರಾತ್ರಿ ವಾಹನಗಳಲ್ಲಿ ತುಂಬಿ ರವಾನೆ ಮಾಡುತ್ತಿದ್ದರು.
ಇದರ ಬಗ್ಗೆ ಮಾಹಿತಿ ಪಡೆದ ಇಲ್ಲಿನ ಗ್ರಾಮಾಂತರ ಠಾಣೆ ಪಿಎಸ್ಐ ಲೋಕೇಶ್, ತಾಲೂಕಿನಲ್ಲಿ ನಡೆಯುವ ಸಂತೆಗಳ ಮೇಲೆ ಕಣ್ಣಿಟ್ಟಿದ್ದರು. ಈ ವೇಳೆಗೆ ರಾಸುಗಳು ಕಸಾಯಿಖಾನೆಗೆ ತೆರಳುತ್ತಿದ್ದ ವ್ಯವಹಾರ ಏಕಾಏಕಿ ಬಂದ್ ಆಗಿತ್ತು.
ಆದರೆ ರಾಸುಗಳನ್ನು ಕಸಾಯಿ ಖಾನೆಗೆ ಕೊಂಡೊಯ್ಯುವ ಮಂದಿ ತಮ್ಮ ವ್ಯವಹಾರದ ಮೂಲ ಬದಲಿಸಿದ್ದಲ್ಲದೇ, ಸಂತೆಗೆ ರಾಸುಗಳು ಬರುವ ಮೊದಲೇ ಅವುಗಳನ್ನು ಗ್ರಾಮಗಳಲ್ಲಿಯೇ ಖರೀದಿಸಿ ಅಲ್ಲಿಯೇ ಒಂದೆಡೆ ಶೇಖರಿಸಿ ನಂತರ ದೊಡ್ಡ ಲಾರಿಗಳಲ್ಲಿ ಮೂವತ್ತು ನಲವತ್ತು ರಾಸುಗಳನ್ನು ಒಂದೇ ಬಾರಿಗೆ ಕೊಂಡೊಯ್ಯುವ ದಾರಿ ಕಂಡುಕೊಂಡಿದ್ದರು.
ಈ ಬಗ್ಗೆಯೂ ಮಾಹಿತಿ ಸಿಕ್ಕಿದ್ದರಿಂದ ಲೋಕೇಶ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಗೋಪನಹಳ್ಳಿ ಗ್ರಾಮದ ದೇವಾಲಯದ ಹಿಂಭಾಗದಲ್ಲಿನ ಮನೆಯ ಬಳಿ ವಾಹನಕ್ಕೆ ರಾಸುಗಳನ್ನು ತುಂಬಿದ್ದ ವೇಳೆ ದಾಳಿ ನಡೆಸಿ 12 ದೊಡ್ಡಗಾತ್ರದ ಹಸುಗಳು, 8 ಎಮ್ಮೆಗಳು ಹಾಗು 12 ಕರುಗಳನ್ನು ತುಂಬಿದ್ದ ಕೆ.ಎ. 13-ಬಿ-1911 ಸಂಖ್ಯೆಯ ಲಾರಿ ಮತ್ತು ಚಾಲಕನ್ನು ತಮ್ಮ ವಶಕ್ಕೆ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

