'ಉರ್ದು ಭಾಷೇಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ'
ಹಾಸನ: ಉರ್ದು ಭಾಷೆಯಲ್ಲಿ ಶಿಕ್ಷಕರಿಗೆ ಕರ್ನಾಟಕ ಮಾನ್ಯತಾ ಪರೀಕ್ಷೆ-2014ನ್ನು ನಡೆಸಬೇಕೆಂದು ಹಾಗೂ ವಿದ್ಯಾರ್ಥಿಗಳಿಗೆ ಉರ್ದು ಭಾಷೆಯಲ್ಲಿ ಸುಲಲಿತವಾಗಿ ಪರೀಕ್ಷೆ ಬರೆಯುವಂತೆ ಮಾಡಿಕೊಡಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸರ್ಕಾರ ಹಾಗೂ ರಾಜ್ಯದ ಪ್ರಧಾನ ದಾಖಲಾತಿ (ಪ್ರವೇಶಾತಿ) ಕೇಂದ್ರವನ್ನು ಆಗ್ರಹಿಸಿದೆ.
ಎಸ್ಸೆಸ್ಸೆಲ್ಸಿ ನಂತರ ಉನ್ನತ ಶಿಕ್ಷಣ ಪಡೆಯುತ್ತಿರುವ ಕೊಳಗೇರಿ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಭಾರತದಲ್ಲಿ ಸುಮಾರು 36 ಮಿಲಿಯನ್ ಯುವಕರು ನಿರುದ್ಯೋಗಿ ಗಳಾಗಿದ್ದಾರೆ. ಅದರಲ್ಲಿ 24 ಮಿಲಿಯನ್ ಯುವಕರು ಗ್ರಾಮಗಳಲ್ಲಿ ಜೀವಿಸುತ್ತಿದ್ದಾರೆ. ಬಹುಸಂಖ್ಯಾತರು ಉದ್ಯೋಗ ಅರಸುತ್ತಾ ಪಟ್ಟಣಗಳಿಗೆ ಹೋಗುತ್ತಿದ್ದಾರೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ವಾಸಿಂ ತಿಳಿಸಿದ್ದಾರೆ.
ಭಾರತೀಯ ಮುಸ್ಲಿಮರ ಸ್ಥಾನ ಮಾನವು ಇಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪರಿಸ್ಥಿತಿಗಿಂತಲೂ ಕೀಳುಮಟ್ಟದಲ್ಲಿದೆ. ಹಾಗೂ ಕೇವಲ 2.5ರಷ್ಟು ಭಾಗವನ್ನು ಮಾತ್ರವೇ ಪ್ರತಿನಿಧಿಸುತ್ತಿದ್ದಾರೆ ಎಂದು ಸಾಚಾರ್ ಸಮಿತಿಯಲ್ಲಿ ತಿಳಿಸಲಾಗಿದೆ.
ಗ್ರಾಮೀಣಪ್ರದೇಶದ ಹಾಗೂ ಹಿಂದುಳಿದ ವರ್ಗದ ಬಹುತೇಕ ಮುಸ್ಲಿಂ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣವನ್ನು ಉರ್ದು ಭಾಷೆಯಲ್ಲಿ ಪಡೆಯುತ್ತಾರೆ ಹಾಗೂ ಅವರು ತಮ್ಮ ಪ್ರಾಥಮಿಕ ಅಥವಾ ಎಸ್ಸೆಸ್ಸೆಲ್ಸಿ ಶಿಕ್ಷಣ ಪೂರ್ಣಗೊಂಡ ನಂತರ ಉರ್ದು ಮಾಧ್ಯಮವನ್ನು ತಮ್ಮ ಮುಂದಿನ ಶಿಕ್ಷಣದ ಕಲಿಕೆಗಾಗಿ ಆಯ್ಕೆ ಮಾಡುತ್ತಾರೆ. ಆದರೆ ಉದ್ಯೋಗಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆ ಅಥವಾ ಆಯ್ಕೆ ಪರೀಕ್ಷೆಗಳು ಕನ್ನಡ ಅಥವಾ ಇಂಗ್ಲೀಷ್ ಗಳಲ್ಲಿ ನಡೆಸುವುದರಿಂದ ಇಂತಹ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅಲ್ಲದೇ, ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದವರು ವಿವರಿಸಿದರು.
ಆತಂಕ: ಉದ್ಯೋಗ ಆಯ್ಕೆ ಪ್ರಕ್ರಿಯೆಯಲ್ಲಿ ಕೇವಲ ಕನ್ನಡ ಅಥವಾ ಇಂಗ್ಲಿಷ್ ಭಾಷೆಯನ್ನು ಮಾತ್ರವೇ ಕಡ್ಡಾಯ ಮಾಡುವುದರಿಂದ ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ಮುಸ್ಲಿಂ ನಿರುದ್ಯೋಗಿ ವಿದ್ಯಾರ್ಥಿಗಳು ಸೃಷ್ಟಿಯಾಗುತ್ತಾರೆ ಎಂದವರು ಆತಂಕ ವ್ಯಕ್ತಪಡಿಸಿದರು.
ಆಗ್ರಹ: ಉರ್ದು ಭಾಷೆಯು ರಾಷ್ಟ್ರೀಯ, ಪುರಾತನ ಹಾಗೂ ಅತ್ಯಂತ ಗುರುತಿಸ ಲ್ಪಡುವಂತಹ ಭಾಷೆಯಾಗಿದ್ದು, ಮತ್ತು ಭಾರತದ 6 ರಾಜ್ಯಗಳ ವ್ಯಾವಹಾರಿಕ ಭಾಷೆ ಕೂಡ ಆಗಿದೆ. ಭಾರತೀಯ ಸಂವಿಧಾನದಲ್ಲಿ ತಿಳಿಸಿದ 22 ಭಾಷೆಗಳಲ್ಲಿ ಉರ್ದು ಭಾಷೆಯೂ ಕೂಡ ಒಂದಾಗಿರುವುದರಿಂದ, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೊಂದಿಗೆ ಉರ್ದು ಭಾಷೆಯಲ್ಲೂ ಶಿಕ್ಷಕರಿಗೆ ಕರ್ನಾಟಕ ಮಾನ್ಯತಾ ಪರೀಕ್ಷೆ- 2014ನ್ನು ನಡೆಸಲು ಬೇಕಾದಂತಹ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

