ಹಾಸನ

ವಧೆಗೆ ಸಾಗಿಸುತ್ತಿದ್ದ ಗೋವು ರಕ್ಷಣೆ

Published On :

ಬೇಲೂರು: ಪಟ್ಟಣದ ಪೊಲೀಸರು  ಬೊಲೇರೋ ವಾಹನದಲ್ಲಿ ಸಾಗಿಸುತ್ತಿದ್ದ  4 ಗೋವು ಹಾಗೂ ವಾಹನವನ್ನು ಬುಧವಾರ ವಶಪಡಿಸಿಕೊಂಡಿದ್ದು, 3 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಚೀಕನಹಳ್ಳಿ ರಸ್ತೆಯ ವೈಡಿಡಿ ಕಾಲೇಜು ಬಳಿ  ಬುಲೇರೋ ವಾಹನ ನಿಂತಿರುವ ಬಗ್ಗೆ ಅನುಮಾನ ಗೊಂಡ ಪೊಲೀಸರು ತಕ್ಷಣ ಅವರ ಬಳಿ ಬರುತ್ತಿದ್ದಂತೆ ವಾಹನದಲ್ಲಿದ್ದವರು ವೇಗವಾಗಿ ಅಲ್ಲಿಂದ ವಾಹನ ಓಡಿಸಿಕೊಂಡು ಪರಾರಿಯಾಗಲು ಯತ್ನಿಸಿದರು.
ಪೊಲೀಸರು ವಾಹನದ ಬೆನ್ನು ಹತ್ತಿ ಬಿಕ್ಕೋಡು ಸಮೀಪ ಬಾಗೆ ಗ್ರಾಮದಲ್ಲಿ ತಡೆದು ನಿಲ್ಲಿಸಿದ್ದಾರೆ. ಬೊಲೇರೋ ವಾಹನದಿಂದ ಇಳಿದ 3 ಮಂದಿ ಪಕ್ಕದಲ್ಲಿದ್ದ ಕಾಫಿ ತೋಟದೊಳಕ್ಕೆ ನುಗ್ಗಿ ಪರಾರಿಯಾಗಿದ್ದಾರೆ.
ಗಾಡಿ ಒಳಗೆ ಪರಿಶೀಲಿಸಿದಾಗ 2 ಹಸು, 2 ಎತ್ತುಗಳು ಕಂಡು ಬಂದಿವೆ. ಇಕ್ಕಿಟ್ಟಿನ ಜಾಗದಲ್ಲಿ ಗೋವುಗಳನ್ನು ತುಂಬಿದ್ದರಿಂದ 1 ಹಸು ಅಸು ನೀಗಿತ್ತು. ಪಿಎಸ್‌ಐ ಅಶ್ವಿನ್ ಮಾತನಾಡಿ, ಅಕ್ರಮವಾಗಿ ಗೋವುಗಳನ್ನು ಸಾಗಣೆ ಮಾಡುತ್ತಿದ್ದು ಅನುಮಾನಗೊಂಡು ಬೆನ್ನತ್ತಿದಾಗ ಬಾಗೆ ಬಳಿ ಗಾಡಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಬೊಲೇರೋದಂತಹ ಚಿಕ್ಕ  ವಾಹನದಲ್ಲಿ 4 ಗೋವುಗಳನ್ನು ತುಂಬಿದ್ದು ಉಸಿರಾಟ ತೊಂದರೆಯಿಂದ 1 ಎತ್ತು ಸಾವನ್ನಪ್ಪಿದೆ.  
ಬೊಲೇರೋ ವಾಹನಕ್ಕೆ ನಂಬರ್ ಪ್ಲೇಟ್ ಇಲ್ಲ. ವಾಹನದ ಒಳ ಭಾಗದ ಕಿಟಿಕಿಗಳಿಗೆ ಥರ್ಮಾಕೋಲ್‌ಗಳನ್ನು ಹಾಕಿ ಏನೂ ಕಾಣದಂತೆ ಮುಚ್ಚಿದ್ದಾರೆ. ಇವರು ವೃತ್ತಿಪರ ಜಾನುವಾರು ಕಳ್ಳರಾಗಿದ್ದು ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು, ಈಗ ಸಿಕ್ಕಿರುವ ಹಸುಗಳು ಕಾಣೆಯಾಗಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ. ತಾಲೂಕಿನ ಸುತ್ತಮುತ್ತ ಹಸು ಎತ್ತುಗಳನ್ನು ಕದ್ದು ಮಾರುವ ಬಗ್ಗೆ ದೂರುಗಳು ಬಂದಿದ್ದು ಪೊಲೀಸ್ ಇಲಾಖೆ ಅತಿ ಹೆಚ್ಚು ಗಮನವನ್ನು ನೀಡಿ ದಂಧೆಕೋರರನ್ನು ಬಂಧಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.