ಹಾಸನ

ವಿದ್ಯುತ್ ಅವಘಡ: ಮಹಿಳೆ ಸಾವು

Published On :

ಜಾವಗಲ್:  ವಿದ್ಯುತ್ ಸ್ಪರ್ಶದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಾವಗಲ್ ಹೋಬಳಿ, ಉಂಡಿಗನಾಳು ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ನಿರ್ಮಲಾ (30) ಮೃತ ದುರ್ದೈವಿ. ಬಟ್ಟೆ ಒಣಹಾಕಲು ಹೋದಾಗ ಮನೆಯ ಪಕ್ಕದ ಮನೆಯಾದ ಶಿವಯ್ಯ ಬಾವಿಗೆ ಎಳೆದಿರುವ 4 ತಂತಿ ಲೈನ್ ಒಂದು ತಂತಿ ಹರಿದು ಮುಳ್ಳು ತಂತಿಯ ಮೇಲೆ ಬಿದಿದ್ದು, ನಿರ್ಮಲಾ ಅವರಿಗೆ ವಿದ್ಯುತ್ ತಂತಿ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತಳ ಪತಿ ಸೋಮಶೇಖರ್ ಜಾವಗಲ್ ಠಾಣೆಗೆ ದೂರು ನೀಡಿದ್ದು,  ಪ್ರಕರಣ ದಾಖಲಾಗಿದೆ.


ಅಕ್ರಮ ಮದ್ಯ: ವ್ಯಕ್ತಿ ಬಂಧನ
ಜಾವಗಲ್: ಹೋಬಳಿಯ ದೇಶಾಣಿ ರಸ್ತೆಯ ಗೇರುಮರದ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ  ಘಟನೆ ಬುಧವಾರ ನಡೆದಿದೆ. ಹಾರನಹಳ್ಳಿ ಗ್ರಾಮದ  ಬೀರಪ್ಪ (45) ಎಂಬವರೇ  ಬಂಧಿತ ಆರೋಪಿ. ಮಾರಾಟಕ್ಕಿಟ್ಟಿದ್ದ ರು. 400 ಮೌಲ್ಯದ 180 ಎಂಎಲ್‌ನ ನಂ-01 ಹೈವೇ ವಿಸ್ಕಿಯ 10 ಬಾಟಲಿಗಳನ್ನು ವಶಪಡಿಸಿಕೊಂಡಿರುವ ಜಾವಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಯುವತಿ ನಾಪತ್ತೆ
ಜಾವಗಲ್: ಹೋಬಳಿಯ ಬೆಳುವಳ್ಳಿ ಗ್ರಾಮದ ಬಸಲಿಂಗಪ್ಪ ಎಂಬುವರ ಪುತ್ರಿ ಪಾವನ (20) ಚೆಲುವನಹಳ್ಳಿ ಗ್ರಾಮದ ದೊಡ್ಡಮ್ಮನ ಮೆನೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. 5 ಅಡಿ ಎತ್ತರ, ಗೋಧಿ ಬಣ್ಣ, ಕೋಲುಮುಖ ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಕೆಂಪುಕಪ್ಪು ಮಿಶ್ರಿತ ಚೂಡಿದಾರ ಧರಿಸಿದ್ದರು ಎಂದು ಆಕೆಯ ತಂದೆ ಬಸವಲಿಂಗಪ್ಪ ಜಾವಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.