ಹಾಸನ

ಫ್ಯೂಚರ್ ಟ್ರೇಡಿಂಗ್: ಆಲೂ ಬೆಳೆಗಾರರಿಗೆ ಹೆಚ್ಚು ಲಾಭ

Published On :

ಹಾಸನ: ಫ್ಯೂಚರ ಟ್ರೇಡಿಂಗ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಆಲೂಗಡ್ಡೆ ಬೆಳೆಯುವ ರೈತರು ಹಾಗೂ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಸಂಘ ಸಂಸ್ಥೆಗಳು ಹೆಚ್ಚಿನ ಲಾಭ ಗಳಿಸಬಹುದು ಎಂದು ಎನ್.ಕೆ.ಮುತ್ತಪ್ಪ ಹೇಳಿದರು. ನಗರದ ಅಕ್ಷಯ ವಿವಿದೋದ್ದೇಶ ಸಹಕಾರ ಸಂಘ ಹಾಗೂ ಎಂಸಿಎಕ್ಸ್ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಅವೇರ್‌ನೇಸ್ ಪ್ರೋಗ್ರಾಂ ಆನ್ ಪೊಟಾಟೋ ಫ್ಯೂಚರ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ರು ಫ್ಯೂಚರ್ಸ್ ಟ್ರೇಡಿಂಗ್ ಎಂದರೆ ಒಬ್ಬ ಮಾರಾಟಗಾರ ಹಾಗೂ ಖರೀದಿದಾರನ ಮಧ್ಯೆ ಭವಿಷ್ಯದ ದಿನಗಳಿಗೆ ಮಾಡಿಕೊಳ್ಳುವ ಕರಾರು. ಹಾಸನದ ಪ್ರಮುಖ ಆಲೂಗಡ್ಡೆ ಬೆಳೆಯ ಕೋಲ್ಡ್ ಸ್ಟೋರೇಜ್ ಮೂಲಕ ಸಂರಕ್ಷಿ ಸಬಹುದಾದ ಸರ್ಕಾರದಿಂದ ವಿನಿಮಯ ಯೋಗ್ಯ ಸರಕೆಂದು ಪರಿಗಣಿಸಲಾಗಿದೆ. ಹಿಂದೆ ಬೆಳೆಗೆ ಸರಿಯಾದ ಬೆಲೆ ನಿಗದಿ ಆಗದೆ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ರೈತರು ಬಹಳ ನಷ್ಟ ಅನುಭವಿಸುತ್ತಿದ್ದರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.