ಹಾಸನ

ಬುದ್ಧ-ಅಂಬೇಡ್ಕರ್ ಜಯಂತಿ ಆಚರಣೆ

Published On :

ಹೊಳೆನರಸೀಪುರ: ಮನುಷ್ಯನ ಮನಸ್ಸು, ಸಂಬಂಧಗಳಲ್ಲಿ ಮತ್ತು ಇಡೀ ಜಗತ್ತಿನಲ್ಲಿ ದ್ವೇಷ-ಅಸೂಯೆ-ಅಪ್ರಮಾಣಿಕತೆ ಹಾಗೂ ಸ್ವಾರ್ಥಗಳೇ ತುಂಬಿಕೊಂಡಿರುವ ಸಂದರ್ಭದಲ್ಲಿ ಬುದ್ಧ ಹಾಗೂ ಅಂಬೇಡ್ಕರ್ ಸಾರಿದ ತತ್ವಗಳ ಪಾಲನೆಯೊಂದೇ ದಾರಿದೀಪ ಎಂದು ದಸಂಸ ಸಂಚಾಲಕ ವೆಂಕಟಗಿರಿಯಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕವು ಶನಿವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ ಹಾಗೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಸಾಂಸ್ಕೃತಿಕ ನಾಯಕರಾಗಿ ಬುದ್ಧ ಹಾಗೂ ಅಂಬೇಡ್ಕರ್  ಹೊರಹೊಮ್ಮಿದ್ದಾರೆ. ಮಾತ್ರವಲ್ಲ, ಬುದ್ಧ ಹಾಗೂ ಅಂಬೇಡ್ಕರ್ ಬೋಧಿಸಿದ ಕಟು ಸತ್ಯದ ನುಡಿಗಳ ವಾಸ್ತವತೆಯನ್ನು ನಾವು ಇಂದಿಗೂ ಅರಿತಿಲ್ಲ ಎಂದು ವಿಷಾದಿಸಿದ ಅವರು, ನಮ್ಮ ಆದರ್ಶ-ಸಂಸ್ಕೃತಿ-ಆಚಾರ-ವಿಚಾರಗಳ ಸಾಂಸ್ಕೃತಿಕ ನಾಯಕ ಯಾರು? ಎಂಬುದನ್ನು ಗುರುತಿಸುವಲ್ಲಿ ಮತ್ತು ಆದರ್ಶ ಅನುಸರಿಸುವಲ್ಲಿ ನಾವು ಇಂದಿಗೂ ಎಡವುತ್ತಿದ್ದೇವೆ ಎಂದು ವಿಷಾದಿಸಿದರು. ನೈತಿಕ ಮೌಲ್ಯಗಳನ್ನು ಹೊಂದಿದ ಮನುಷ್ಯ ಮಾತ್ರವೇ ಉತ್ತಮ ಜೀವನವನ್ನು ನಡೆಸಬಲ್ಲ ಎಂದ ವೆಂಕಟಗಿರಿಯಯ್ಯ, ಯಾವ ಜಾತಿ-ಸಮುದಾಯಗಳಲ್ಲಿಯೂ ಆದರ್ಶ-ನಡವಳಿಕೆ ಮತ್ತು ಸಂಸ್ಕೃತಿ ಅನುಸರಿಸಿ ಪಾಲನೆ ಮಾಡುತ್ತಿಲ್ಲ ಎಂದು ವಿಷಾದಿಸಿದರು.
ಸಹ ಶಿಕ್ಷಕ  ಡಿ.ಆರ್.ರಂಗಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಎಂ. ಕೃಷ್ಣಮೂರ್ತಿ ಪ್ರಧಾನ ಭಾಷಣ ಮಾಡಿದರು. ಕೆಡಿಎಸ್‌ಎಸ್ ತಾಲೂಕು ಸಂಚಾಲಕ ಎಸ್.ಚಿನ್ನಸ್ವಾಮಿ, ಉಪನ್ಯಾಸಕ ಎನ್.ಆರ್.ಶಿವರಾಂ,  ಪ್ರಾಂಶುಪಾಲ ಎಂ.ಜೆ.ರತ್ನಾಕರ್, ಉಪನ್ಯಾಸಕ ಬಿ.ಕೆ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು. ದಸಂಸ ರಾಜ್ಯ ಸಂಚಾಲಕ ಎಂ.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಂಚಾಲಕ ಐ.ಜೆ.ಮಲ್ಲೇಶ್ ನಿರೂಪಿಸಿ, ಜಿಲ್ಲಾ ಸಂಚಾಲಕ ಎಚ್.ಸಿ.ಜಗದೀಶ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.