ಹಾಸನ

ದೇವೇಗೌಡರ ರೈತಪರ ಕಾಳಜಿಗೆ ಜನಬೆಂಬಲ: ಯೋಗಾ ರಮೇಶ್

Published On :

ಅರಕಲಗೂಡು: ಕಾಂಗೈನ ಲೋಕಸಭಾ ಅಭ್ಯರ್ಥಿ ಎ. ಮಂಜು ಅವರ ತಾಲೂಕಿನ ಅಭಿವೃದ್ಧಿ ವೈಫಲ್ಯ ಮತ್ತು ಕುಟುಂಬ ರಾಜಕಾರಣದಿಂದಾಗಿ ಜಿಲ್ಲೆಯ ಜನತೆ ಅವರನ್ನು ತಿರಸ್ಕರಿಸಿದ್ದಾರೆ ಎಂದು ಪೊಟ್ಯಾಟೋ ಕ್ಲಬ್‌ನ ಹೆಚ್. ೆಯೋಗಾರವುಶ್ ಹೇಳಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್‌ನ ಲೋಕಸಭಾ ಅಭ್ಯರ್ಥಿ ಎಚ್. ಡಿ. ದೇವೇಗೌಡರಿಗೆ ಪೊಟ್ಯಾಟೋ ಕ್ಲಬ್ ಬೆಂಬಲ ನೀಡಿದ್ದು, 77ಸಾವಿರಕ್ಕೂ ಅಧಿಕ ಮತ ಬಂದಿವೆ. ಸಂಸತ್‌ನಲ್ಲಿ ರೈತರ ಪರ ಪ್ರಾಮಾಣಿಕ ಹೋರಾಟದ ಕಾಳಜಿ ಇಟ್ಟುಕೊಂಡಿರುವ ದೇವೇಗೌಡರನ್ನು ಮತದಾರ ಪುರಸ್ಕರಿಸಿದ್ದಾನೆ ಎಂದರು.
ಕಳೆದ 30ವರ್ಷಗಳಿಂದ ರಾಜಕಾರಣದಲ್ಲಿರುವ ಕಾಂಗೈ ಅಭ್ಯರ್ಥಿ ದೇವೇಗೌಡರ ವಿರುದ್ಧ ಸ್ಪರ್ಧಿಸುವುದೇ ಹೆಗ್ಗಳಿಕೆ ಎಂಬ ಬಾಲಿಶ ಹೇಳಿಕೆ ನೀಡುತ್ತಾರೆ. ಇವರು ದೇವೇಗೌಡರ ಮುಂದೆ ಸಮರ್ಥ ಅಭ್ಯರ್ಥಿ ಅಲ್ಲ.  ಸ್ವಜನ ಪಕ್ಷಪಾತ ಮಾಡುತ್ತಾ ಪುತ್ರನನ್ನು ಜಿಲ್ಲಾ ಕಾಂಗ್ರೆಸ್ ಯುವ ಘಟಕ್ಕಕೆ ತರುವ ಮೂಲಕ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ತಾಲೂಕಿನಲ್ಲಿ ಮರಳು ಲೂಟಿ ಆಗುತ್ತಿದೆ. ರಸ್ತೆಗಳ ದುಸ್ಥಿತಿ ಹೇಳತೀರದಾಗಿದೆ. ಹೊಗೆಸೊಪ್ಪು ರೈತರು ಸಂಕಟದಲ್ಲಿದ್ದಾರೆ. ಕಳೆದ ಸಾಲಿನಲ್ಲಿ ತಾಲೂಕಿನ ವಸತಿ ಹಂಚಿಕೆಯನ್ನು ಮಾಡದೇ ಸುಮಾರು 3 ಸಾವಿರ ಮನೆಗಳು ವಾಪಸ್ಸಾಸಾಗಿವೆ. ಫಲಾನುಭವಿಗಳು ಅತಂತ್ರರಾಗಿದ್ದಾರೆ. ಆದರೆ ಶಾಸಕರು ವರ್ಷ ಕಳೆದರೂ ಮಂತ್ರಿಗಿರಿಯ ಕನವರಿಕೆಯಲ್ಲಿ ಜನಸಾಮಾನ್ಯರ ಹಿತವನ್ನ ಕಡೆಗಣಿಸಿದ್ದಾರೆ ಎಂದರು.
ಶಾಸಕರು ಸ್ವಜನ ಪಕ್ಷಪಾತ ಮಾಡುತ್ತಾರೆ. ಪಕ್ಷದ ಅಧ್ಯಕ್ಷರು ಅಳಿಯನನ್ನು ಕರೆತಂದು ಲೋಕೋಪಯೋಗಿ ಇಲಾಖೆಗೆ ಕೂರಿಸಿದ್ದಾರೆ. ಈ ಅಭಿಯಂತರ ಕೂಡ ಸಾರ್ವತ್ರಿಕ ಕೆಲಸ ಮಾಡದೇ ಶಾಸಕರ ಹಿಂಬಾಲಕರನ್ನು ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸುವುದಿಲ್ಲ, ತಾಲೂಕಿನ ಸಮಸ್ಯೆಗಳ ಕುರಿತು ನಮ್ಮ ಹೋರಾಟ ಮುಂದುವರೆಯುವುದು ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿದ್ದೇವೆ. ಪಕ್ಷ ರಾಜಕಾರಣದಲ್ಲಿ ನಂಬಿಕೆಯಿದೆ. ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಹೆಚ್. ಡಿ. ರೇವಣ್ಣ ಚುನಾವಣೆ ನಂತರ ಪಕ್ಷ ಸೇರ್ಪಡೆ ಕುರಿತು ನಿರ್ಧಾರ ಪ್ರಕಟಿಸುತ್ತೇವೆ ಎಂದಿದ್ದಾರೆ. ಅದನ್ನು ಕಾಯುತ್ತಿದ್ದೇವೆ, ಈಗಾಗಲೇ ಇತರೆ ಪಕ್ಷಗಳಿಂದಲೂ ಆಹ್ವಾನವಿದೆ. ಆದರೆ ಜೆಡಿಎಸ್ ನಮ್ಮ ಮೊದಲ ಆಧ್ಯತೆ ಆಗಿದೆ ಎಂದರು. ಸತ್ಯನಾರಾಯಣ, ಮಂಜುನಾಥ, ಚನ್ನಕೇಶವೇಗೌಡ, ರಾಜೀವ್, ರಮೇಶ ವಾಟಾಳ್, ಶಶಿಕುಮಾರ್, ಶಶಿಕುಮಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.