ಹಾಸನ

ಕೆರೆಗೆ ನೀರು ತುಂಬಿಸಲು ಸಿಗುವುದೇ ದೋಣೆ ನಾಯಕರ ಅಪ್ಪಣೆ?

Published On :

ಕನ್ನಡಪ್ರಭ ವಾರ್ತೆ ಜಾವಗಲ್ ಮೇ 19
ರೈತರು ಸಂಘಟಿತರಾಗಿ ಹೋರಾಡಿ ಯಗಚಿ ನೀರನ್ನು ಕೆರೆಗಳಿಗೆ ತುಂಬಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ನೆರೆಯ ನೀರು ಕೆರೆಗೆ ತುಂಬಿಸಿ ಹೋರಾಟ ಸಮಿತಿಯ (ಬೇಲೂರು, ಅರಸೀಕೆರೆ, ತಿಪಟೂರು ತಾಲೂಕುಗಳು) ಸಂಚಾಲಕ ಕೆ.ಆರ್. ಬಸವರಾಜು ಹೇಳಿದರು.
ಜಾವಗಲ್ ರಂಗಮಂದಿರದಲ್ಲಿ ಭಾನುವಾರ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು. ಯಗಚಿ ಜಲಾಶಯವು ರಾಜ್ಯದಲ್ಲಿ ಅತಿ ಎತ್ತರದಲ್ಲಿದ್ದು, ಬೇಲೂರು, ಅರಸೀಕೆರೆ, ತಿಪಟೂರು ತಾಲೂಕುಗಳು ಜಲಾಶಯ ಮಟ್ಟಕ್ಕಿಂತ ತಗ್ಗು ಪ್ರದೇಶದಲ್ಲಿದೆ. ಕಡಿಮೆ ವೆಚ್ಚದಲ್ಲಿ ಗುರುತ್ವಾಕರ್ಷಣೆ ಮೂಲಕ 64 ಕೆರೆಗಳಿಗೆ ನೀರು ತುಂಬಿಸಬಹುದಾಗಿದ್ದು, ಜನ ಜಾನುವಾರುಗಳಿಗೆ ಶುದ್ದ ಕುಡಿಯುವ ನೀರು ಒದಗಿಸಬಹುದು ಎಂದರು.
ಸುಮಾರು 20-30 ವರ್ಷಗಳಿಂದ ಈ ಭಾಗಗಳಲ್ಲಿ ಮಳೆಯ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದ್ದು ಅಂತರ್ಜಲ ಕುಸಿಯುತ್ತಿದೆ. ತೋಟಗಾರಿಕಾ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.  ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಇಲ್ಲದಿರುವುದರಿಂದ ರೈತರು ಸಂಕಷ್ಟ ಪರಿಸ್ಥಿತಿ ಅನುಭವಿಸುವಂತಾಗಿದೆ.
ಹೊನ್ನವಳ್ಳಿ, ಅರಸೀಕೆರೆ, ತಿಪಟೂರು ಕುಡಿಯುವ ನೀರಿನ ಏತನೀರಾವರಿ ಯೋಜನೆಗಳಿಗೆ ವಾರ್ಷಿಕ ವಿದ್ಯುತ್, ಯಂತ್ರೋಪಕರಣ ವೆಚ್ಚಕ್ಕಿಂತಲೂ (ಸುಮಾರು 20 ಕೋಟಿ)ಯಗಚಿ ನೆರೆ ನೀರನ್ನು ಕೆರೆಗಳಿಗೆ ತುಂಬಿಸುವ ಯೋಜನೆಯು ಅತಿಕಡಿಮೆ ವೆಚ್ಚ ಮತ್ತು ಹೆಚ್ಚು ಉಪಯುಕ್ತವಾಗಿದೆ ಎಂದದರು.  ತಿಪಟೂರು ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ಯೋಗೀಶ್ವರಸ್ವಾವು ಮಾತನಾಡಿ, ಎತ್ತಿನಹೊಳೆ ಯೋಜನೆ  ಮತ್ತು ನೇತ್ರಾವತಿ ಯೋಜನೆಗಳಿಗೆ ಅಧಿಕ ವೆಚ್ಚ ತಗಲಲಿದ್ದು ಉಪಯುಕ್ತತೆ ಕಡಿಮೆ ಪ್ರಮಾಣದ್ದಾಗಿದೆ ಎಂದರು.
ತಿಪಟೂರು ಸಾವಯವ ಕೃಷಿ ಅಧ್ಯಕ್ಷ ಪ್ರೊ. ಎನ್.ನಂಜುಂಡಪ್ಪ, ಹಳೇಬೀಡು ಹೋಬಳಿ ರೈತ ಸಂಘದ ಅಧ್ಯಕ್ಷ ಚನ್ನೇಗೌಡ, ಅರಸೀಕೆರೆ ಪಿ.ಎಲ್.ಡಿ. ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಜೆ.ಎಸ್.ಸೋಮೇಗೌಡ, ಕರವೇ ಹೋಬಳಿ ಘಟಕದ ಅಧ್ಯಕ್ಷ ದಯಾನಂದ, ಕಾರ್ಯದರ್ಶಿ ಭಾನುಪ್ರಕಾಶ್, ಕೋಳಗುಂದ ನಾಗಭೂಷಣಸ್ವಾಮಿ,ಮಂಜುನಾಥ ಶೆಟ್ಟಿ, ಕರುಣಾಕರ, ಧನಂಜಯ, ವೆಂಕಟೇಶ್ ಇದ್ದರು.

ಯಗಚಿ ಜಲಾಶಯವು ರಾಜ್ಯದಲ್ಲಿ ಅತಿ ಎತ್ತರದಲ್ಲಿದ್ದು, ಬೇಲೂರು, ಅರಸೀಕೆರೆ, ತಿಪಟೂರು ತಾಲೂಕುಗಳು ಜಲಾಶಯ ಮಟ್ಟಕ್ಕಿಂತ ತಗ್ಗು ಪ್ರದೇಶದಲ್ಲಿದೆ. ಕಡಿಮೆ ವೆಚ್ಚದಲ್ಲಿ ಗುರುತ್ವಾಕರ್ಷಣೆ ಮೂಲಕ 64 ಕೆರೆಗಳಿಗೆ ನೀರು ತುಂಬಿಸಬಹುದಾಗಿದ್ದು, ಜನ ಜಾನುವಾರುಗಳಿಗೆ ಶುದ್ದ ಕುಡಿಯುವ ನೀರು ಒದಗಿಸಬಹುದು
-ಕೆ.ಆರ್. ಬಸವರಾಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.