ಹಾಸನ

ಕಾಡಾನೆ ಹಾವಳಿ: ಅಪಾರ ಬೆಳೆ ನಷ್ಟ ಸ್ಥಳಾಂತರಿಸಲು ಗ್ರಾಮಸ್ಥರ ಆಗ್ರಹ

Published On :

ಸಕಲೇಶಪುರ: ತಾಲೂಕಿನ ಹಾನುಬಾಳ್ ಹೋಬಳಿಯಲ್ಲಿ ಕಾಡಾನೆ ಹಾವಳಿ ವ್ಯಾಪಕವಾಗಿ ಮುಂದುವರಿದಿದ್ದು, ಸ್ಥಳಾಂತರಿಸುವಂತೆ ನಾನಾ ಗ್ರಾಮಸ್ಥರು ಡಿ.ಎಫ್.ಒ ಗಣೇಶ್ ಭಟ್ ಅವರಿಗೆ ಮಂಗಳವಾರ ಮನವಿ ಮಾಡಿದರು.
ಹೋಬಳಿಯ ಕಾಡುಮನೆ, ನಡಹಳ್ಳಿ, ದೇಖ್ಲ, ಗುರ್ಜೆನಹಳ್ಳಿ, ಗುಡಾಣಕೆರೆ, ದಿಣ್ಣೇಕೆರೆ, ಮಲ್ಲೇಗದ್ದೆ ಸುತ್ತಮುತ್ತ ಸುಮಾರು 20ಕ್ಕೂ ಹೆಚ್ಚಿನ ಕಾಡಾನೆಗಳು ಸತತ ಒಂದುವಾರದಿಂದ ಬೀಡುಬಿಟ್ಟಿದ್ದು ನಿರಂತರ ಬೆಳೆಹಾನಿಯಲ್ಲಿ ತೊಡಗಿದೆ. ಇದರಿಂದಾಗಿ ಕಾಫಿ, ಅಡಿಕೆ, ಬಾಳೆ ಹಾಗೂ ಏಲಕ್ಕಿ ಬೆಳೆ ನಾಶವಾಗಿದ್ದು, ಈಗಾಗಲೇ ಲಕ್ಷಾಂತರ ಮೌಲ್ಯದ ಬೆಳೆಯನ್ನು ತುಳಿದು ತಿಂದು ಹಾಳುಮಾಡಿವೆ. ಆದ್ದರಿಂದ ಈ ಕಾಡಾನೆಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂಬ ಮನವಿ  ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎಫ್.ಒ ಗಣೇಶ್‌ಭಟ್, ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳವವರೆಗೆ ಗ್ರಾಮಸ್ಥರಿಗೆ ಪಟಾಕಿ ಪೂರೈಕೆಯನ್ನು ಇಲಾಖೆ ಮಾಡಲಿದ್ದು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಹೆಬ್ಬಸಾಲೆ ಗ್ರಾ.ಪಂ ಸದಸ್ಯ ಮೇಘರಾಜ ನೇತೃತ್ವದಲ್ಲಿ ಗ್ರಾಮಸ್ಥರಾದ ಮೋಹನ್ ಕುಮಾರ್, ಸೋಮಶೇಖರ್, ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು.

ಅಪಘಾತ: ಒಬ್ಬನ ಸಾವು, ಇಬ್ಬರಿಗೆ ಗಾಯ
ಕುಣಿಗಲ್: ಚಲಿಸುತ್ತಿದ್ದ ಕ್ಯಾಂಟರ್ ಸರಕು ವಾಹನಕ್ಕೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡಿಡ್ಡಿದ್ದಾರೆ. ಪೊಲೀಸರು ಗಾಯಾಳುಗಳನ್ನು ರಕ್ಷಿಸುವ ಜೊತೆಯಲ್ಲಿ ಹತ್ತಕ್ಕೂ ಹೆಚ್ಚು ಅಂಕದ ಕೊಳಿಗಳನ್ನು ಸಹ ರಕ್ಷಿಸಿದ್ದಾರೆ. ಮೃತನನ್ನು ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಭವಾನಿ ತಾಲೂಕಿನ ಸಿತ್ತೂರ್ ಗ್ರಾಮದ ರಾಜು (30) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಪಳನೀಸ್ವಾಮಿ, ಪೆರುಮಾಳ್ ಎಂದು ಗುರುತಿಸಲಾಗಿದೆ ಇವರೆಲ್ಲರೂ ಭವಾನಿ ತಾಲೂಕಿನ ಸುತ್ತಮುತ್ತಲ ಗ್ರಾಮಗಳವರಾಗಿದ್ದು, ಸ್ವಗ್ರಾಮದಿಂದ ಬೆಂಗಳೂರಿನ ಮೂಲಕ ಮಂಗಳೂರು ಕಡೆಗೆ ತೆರಳುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.