ಹೈನುಗಾರಿಕೆಯೇ ಕುಟುಂಬದ ವೃತ್ತಿ!
ಕ.ಪ್ರ.ವಾರ್ತೆ, ರಾಮನಾಥಪುರ, ಮೇ 20
ಎಲ್ಲರೂ ಹಣದ ಬೆನ್ನು ಬಿದ್ದು ವಿದೇಶದತ್ತ ಹಾಗೂ ಹಣ ಸಿಗುವ ಕಡೆಗೆ ಮುಖ ಮಾಡುತ್ತಿರುವ ಈ ಕಾಲದಲ್ಲಿ ಇದ್ದ ನೌಕರಿಯನ್ನು ತೊರೆದು ತಮ್ಮ ಭೂಮಿಯಲ್ಲಿ ಕೃಷಿ ಚಟುವಟಿಕೆ ಹಾಗೂ ಹಾಲಿನ ಡೇರಿ ಮಾಡಿ ಮನಸ್ಸು ಮಾಡಿದರೆ ಇಲ್ಲೇ ಸಾಕಷ್ಟು ಆದಾಯ ಗಳಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಸಮಾಜ ಸೇವಕ ಹಾಗೂ ಡೇರಿಯ ಮಾಲೀಕ ತಟ್ಟವಾಳು ಟಿ.ಟಿ. ಮಹೇಶ್. ಸಾಧಾರಣ ನೀರಿರುವ 10 ಎಕರೆ ಪ್ರದೇಶದ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗೂ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ರಾಮನಾಥಪುರ ಹತ್ತಿರವಿರುವ ದೊಡ್ಡಮಗ್ಗೆ ಹೋಬಳಿ ತಟ್ಟವಾಳು ಗ್ರಾಮದ ಮಹಾಮನೆ, ಸಮಾಜ ಸೇವಕ ಟಿ.ಡಿ. ತಮ್ಮಯ್ಯಶೆಟ್ಟಿ ಗಂಗಮ್ಮ ಅವರ ಪುತ್ರರಿವರು.
ರಾಮನಾಥಪುರ ಹೋಬಳಿ ಬಸವಾಪಟ್ಟಣ ಪ್ರಾಥಮಿಕ ಶಾಲೆ, ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿ.ಎ. (ಎಲ್ಎಲ್ಬಿ) ವರೆಗೆ ವ್ಯಾಸಂಗ ಮಾಡಿ ಕೆಲ ಕಾಲ ಮೈಸೂರು ಡಿಸಿಸಿ ಬ್ಯಾಂಕ್ನಲ್ಲಿ ನೌಕರಿ ಮಾಡಿದ ಜೊತೆಗೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸಿದರು.
ಮಾಡುತ್ತಿದ್ದ ಕೆಲಸದಲ್ಲಿ ನೆಮ್ಮದಿ ಕಾಣಲು ಅಸಾಧ್ಯವೆಂದು ಗೊತ್ತಾಗುತ್ತಿದ್ದಂತೆ, ಕೃಷಿ ಕಡೆಗೆ ಆಕರ್ಷಿತರಾಗಿ ನೌಕರಿಗೆ ರಾಜೀನಾಮೆ ನೀಡಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರು.
ವ್ಯಾಪಾರಿ ಮನೋಭಾವದ, ಹಣವೇ ಪ್ರಧಾನವೆನ್ನುವ ನಗರ ಜೀವನದ ಬಗ್ಗೆ ಜಿಗುಪ್ಸೆ ಮೂಡಿದ್ದರಿಂದ ಟಿ.ಟಿ. ಮಹೇಶ್ 2007ರಲ್ಲಿ ಕೃಷಿ ಭೂಮಿ ಖರೀದಿಸಲು ಹುಡುಕಾಟ ನಡೆಸಿದಾಗ ಕಂಡಿದ್ದು ಇದೇ ಮೈಸೂರು ತಾಲ್ಲೂಕು ದಂಡಿಕೆರೆ ಗ್ರಾಮದ ಸುತ್ತೂರು ರಸ್ತೆಯಲ್ಲಿರುವ 10 ಎಕರೆ ಜಮೀನು. ಪ್ರಾರಂಭದಲ್ಲಿ ಸರ್ವಶ್ರೀ ಡೈರಿ ಫಾರಂ ಪ್ರಾರಂಭ ಮಾಡಿ ಗ್ರಾಮೀಣ ಪ್ರದೇಶದಿಂದ ರಾಸುಗಳನ್ನು ತಂದು ಚಿಕ್ಕದಾಗಿ ಡೈರಿ ಪ್ರಾರಂಭಿಸಿದೆವು.
ಇದರ ಜೊತೆಗೆ ಕೃಷಿ ಪದ್ದತಿಯಲ್ಲಿ ಬಾಳೆ. ತೆಂಗು, ಹೂ ಮುಂತಾದವನ್ನು ಬೆಳೆಯಲಾಗುತಿತ್ತು. ಅದರೆ, ಅದಾಯ ಹೇಳಿಕೊಳ್ಳುವಂತಿರಲಿಲ್ಲ. ಅದರೆ ಈ ರೈತನನ್ನು ಕೈ ಹಿಡಿದಿದ್ದು ಹೈನುಗಾರಿಕೆ.
5 ಹಸುಗಳನ್ನು ನಮ್ಮ ಗ್ರಾಮೀಣ ಭಾಗದಿಂದ ತಂದು ಪ್ರಾರಂಭವಾದ ಇವರ ಹಾಲಿನ ಹರಿವಿನ ಡೇರಿ ಇಂದು ಸುಮಾರು 140 ರಿಂದ 150 ಹಸುಗಳನ್ನು ಒಳಗೊಂಡಿದೆ. 10 ಲೀಟರ್ ಹಾಲಿನಿಂದ ಪ್ರಾರಂಭವಾದ ಹಾಲು ಮಾರಾಟ ಇಂದು ಪ್ರತಿ ನಿತ್ಯ ಸುಮಾರು 800 ಲೀಟರ್ಗೆ ಹೆಚ್ಚಳವಾಗಿದೆ.
ಪ್ರತಿ ನಿತ್ಯ 70ರಿಂದ 80 ರಾಸುಗಳ ಹಾಲು ಹಿಂಡಲು ಯಂತ್ರಗಳಿವೆ. ಪತ್ನಿ ಸರ್ವಮಂಗಳ, ಪುತ್ರ ಚಂದ್ರಶೇಖರ್, ಸೊಸೆ ನಿಕೀತಚಂದ್ರಶೇಖರ್ ಮೊಮ್ಮಗನೊಂದಿಗೆ ಸದಾ ಡೇರಿ ಕೆಲಸಕ್ಕೆ ಸಿದ್ದ ಎನ್ನುತ್ತಾರೆ ಟಿ.ಟಿ. ಮಹೇಶ್.
ಬೆನ್ನೆಲುಬಾಗಿರುವ ಮಗ ಸೊಸೆ!
ತಂದೆ ಟಿ.ಟಿ. ಮಹೇಶ್ ಹಾಗೂ ತಾಯಿ ನಗರದ ಯಾಂತ್ರಿಕ ಜೀವನಕ್ಕೆ ಬೇಸತ್ತು ಸಾಫ್ಟ್ವೇರ್ ಎಂಜಿನಿಯರ್ ಮಾಸಿಕ ಲಕಾಂತರ ರೂ ಸಂಪಾದಿಸುತ್ತಿದ್ದ ಮಗ ಚಂದ್ರಶೇಖರ್ ಸೊಸೆ ನಿಕೀತಚಂದ್ರಶೇಖರ್ ಸಹ ಹಳ್ಳಿಯ ಬದುಕಿಗೆ ಹೊಂದಿಕೊಂಡು ಹಿರಿಯರಿಗೆ ಬೆನ್ನೆಲುಬಾಗಿ ನಿಂತಿರುವುದು ಅಧುನಿಕ ಜೀವನ ಶೈಲಿಗೆ ಒಂದು ರೀತಿಯ ಸವಾಲೇ ಅಗಿದೆ.
ಗಂಜಲ, ಸಗಣಿ ಸಮರ್ಪಕ ಬಳಕೆ
ಮನೆಯವರ ಜೊತೆಗೆ ಸುಮಾರು 12ರಿಂದ 15 ಜನರು ಕಾಯಂ ಕೆಲಸಗಾರರು ಕೈ ಜೋಡಿಸಿದ್ದಾರೆ. ಹಸುಗಳ ಗಂಜಲ ಕೊಟ್ಟಿಗೆಯಿಂದ ನೇರವಾಗಿ ಒಳ ಚರಂಡಿ ಮೂಲಕ ಜಮೀನಿನ ಒಂದು ಭಾಗದಲ್ಲಿರುವ ಹೊಂಡದಲ್ಲಿ ಶೇಖರಣೆಯಾಗುತ್ತದೆ. ಹಸುಗಳ ಗೊಬ್ಬರದಿಂದ ಅಡುಗೆ ಇಂದನ ತಯಾರಿಸಿ, ಉಳಿದ ಗೊಬ್ಬರದಿಂದ ಎರೆಹುಳು ಗೊಬ್ಬರವನ್ನು ಸಿದ್ದಪಡಿಸಿ ಮಾರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

