ಹಾಸನ

ಚಿಕ್ಕಮ್ಮ- ದೊಡ್ಡಮ್ಮ ಹಬ್ಬ ಸಂಭ್ರಮದ ಆಚರಣೆ

Published On :

    ಹೊಳೆನರಸೀಪುರ: ಪಟ್ಟಣದ ಸಮೀಪವಿರುವ ಮಂಗಲಾಪುರ ಗ್ರಾಮದಲ್ಲಿ ಮಂಗಳವಾರ ಇಲ್ಲಿನ ಗ್ರಾಮಸ್ಥರು  ಚಿಕ್ಕಮ್ಮ-ದೊಡ್ಡಮ್ಮ ದೇವರ ಹಬ್ಬವನ್ನು ಶ್ರದ್ಧಾ-ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಯರುಗಳು 101ಕಳಸಗಳನ್ನು ಹೊತ್ತು, ದೇವರ ಪೂಜೆಗಾಗಿ ವ್ರತವನ್ನು ಆಚರಿಸಿದ ಬಾಲಕಿಯರೊಂದಿಗೆ ಮೆರವಣಿಗೆಯಲ್ಲಿ ಗ್ರಾಮದಿಂದ ಸುಮಾರು 3 ಕಿ.ಮೀಗಳ ದೂರದವರೆಗೂ ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಚಿಕ್ಕಮ್ಮ-ದೊಡ್ಡಮ್ಮ ದೇವರ ದೇಗುಲಕ್ಕೆ ನಡೆದು ಬಂದರು.
ನಾನಾ ವಾದ್ಯಗಳೊಂದಿಗೆ ಗ್ರಾಮದ ಯುವಕರು ಬಣ್ಣದ ಓಕುಳಿಯೊಡನೆ ಕುಣಿಯುತ್ತ ಸಾಗಿ ಬಂದ ಮೆರವಣಿಗೆಯು ಪಟ್ಟಣದ ಪೇಟೆ ಮುಖ್ಯ ರಸ್ತೆಯ ಮೂಲಕ ಹಾದು ಕೋಟೆ ಮುಖ್ಯ ರಸ್ತೆ ನಂತರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿನ ಚಿಕ್ಕಮ್ಮ-ದೊಡ್ಡಮ್ಮ ದೇವರ ದೇವಸ್ಥಾನವನ್ನು ತಲುಪಿತು. ಪ್ರತೀ ವರ್ಷವೂ ಮಂಗಲಾಪುರ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿನ ಜನ-ಜಾನುವಾರುಗಳ ಸುಖ-ಸಮೃದ್ಧಿಗಾಗಿ ಹರಕೆ ಹೊತ್ತು ಈ ಹಬ್ಬವನ್ನು ಸಡಗರ ಸಂಭ್ರದೊಂದಿಗೆ ಆಚರಿಸುತ್ತಾರೆ.
ಹಬ್ಬದ ಅಂಗವಾಗಿ ದೇವರಿಗೆ ಹರಕೆಯಾಗಿ ಬಲಿ ನೀಡಲಾಗುತ್ತದೆ. ಅಲ್ಲದೇ ಈ ಹಬ್ಬವನ್ನು ಗ್ರಾಮದ ಎಲ್ಲ ಒಟ್ಟುಗೂಡಿ ಗ್ರಾಮದ ಒಳಿತಿಗಾಗಿ ಹಬ್ಬ ಆಚರಿಸುವುದು ವಿಶೇಷ.
ಈ ಹಬ್ಬದ ಉಸ್ತುವಾರಿಯನ್ನು ಗ್ರಾಮದ ಯುವಕರಾದ  ಮಹಲಿಂಗ, ಚಂದ್ರು, ಅಣ್ಣಾಜಿಗೌಡ, ಶ್ರೀನಿವಾಸ್, ಅಣ್ಣಪ್ಪ, ನಿಂಗರಾಜು, ಗಣೇಶ್ ಮೊದಲಾದವರು ಹೊತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.