ಸಕಲೇಶಪುರದಲ್ಲಿ ಜೆಡಿಎಸ್‌ಗೆ ಹಿನ್ನಡೆ
ಸಕಲೇಶಪುರ: ಸಕಲೇಶಪುರ ವಿಧಾನಸಭೆ ಕ್ಷೇತ್ರಕ್ಕೆ ಒಳಪಡುವ ಆಲೂರು ಮತ್ತು ಕಟ್ಟಾಯ ಕ್ಷೇತ್ರ ಹೊರತುಪಡಿಸಿದರೆ ಸಕಲೇಶಪುರ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ 6789 ಮತಗಳ ಹಿನ್ನಡೆ ಅನುಭವಿಸಿದೆ.
ಕಳೆದ ಎರಡು ದಶಕಗಳಿಂದ ಕ್ಷೇತ್ರದಲ್ಲಿ ನೆಲೆ ಕಳೆದುಕೊಂಡಿದ್ದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಗಣನೀಯ ಸಾಧನೆ ಮಾಡಿದೆ. ಶಾಸಕ ಎಚ್.ಕೆ ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಜೆಡಿಎಸ್ ಸಾಧನೆ ತೀರಾ ಕಳಪೆಯಾಗಿದೆ. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ 25,088 ಮತಗಳು ಲಭಿಸಿದರೆ, ಬಿಜೆಪಿ 19,300 ಹಾಗೂ ಜೆಡಿಎಸ್‌ಗೆ 18,299 ಮತಗಳು ಲಭಿಸಿವೆ. ತಾಲೂಕಿನ ಮೂರು ಹೋಬಳಿಗಳಲ್ಲಿ ಒಂದೊಂದು ಹೋಬಳಿಯು ಒಂದೂಂದು ಪಕ್ಷಕ್ಕೆ ಮುನ್ನಡೆ ದೊರಕಿಸಿಕೊಟ್ಟಿರುವುದು ವಿಶೇಷವಾಗಿದೆ. ಹಾನುಬಾಳ್ ಹೋಬಳಿಯಲ್ಲಿ ಬಿಜೆಪಿ ಪಕ್ಷ ಕಾಂಗ್ರೆಸ್‌ಗಿಂತ 151 ಮತಗಳ ಮುನ್ನಡೆಗಳಿಸಿದ್ದು ಇಲ್ಲಿ ಬಿಜೆಪಿ 6,839 ಮತ ಹಾಗೂ ಕಾಂಗ್ರೆಸ್ 6,688 ಮತ ಹಾಗೂ ಜೆಡಿಎಸ್ 4,797 ಮತಗಳಿಸಿದೆ. ಬೆಳಗೋಡು ಹೋಬಳಿಯಲ್ಲಿ ಕಾಂಗ್ರೆಸ್ ಮುನ್ನಡೆಗಳಿಸಿದ್ದು ಇಲ್ಲಿ 7,961 ಮತಪಡೆದರೆ. ಜೆಡಿಎಸ್ 5,078 ಹಾಗೂ ಬಿಜೆಪಿ 4,709 ಮತ ಗಳಿಸಿವೆ. ಯಸಳೂರು ಹೋಬಳಿಯಲ್ಲಿ ಜೆಡಿಎಸ್ ಮುನ್ನಡೆಗಳಿಸಿದ್ದು ಇಲ್ಲಿ 7,635 ಮತಗಳಿಸಿದ್ದರೆ, ಕಾಂಗ್ರೆಸ್ 6,211 ಹಾಗೂ ಬಿಜೆಪಿ 4,061 ಮತಗಳಿಸುವಲ್ಲಿ ಶಕ್ತವಾಗಿದೆ. ಪಟ್ಟಣದ 20 ಮತಗಟ್ಟೆಗಳಲ್ಲಿ ಕಾಂಗ್ರೆಸ್ ಪಕ್ಷ ಮುಂದಿದ್ದು 4,231 ಮತಗಳಿಸಿದ್ದರೆ, ಬಿಜೆಪಿ 3,691 ಹಾಗೂ ಜೆಡಿಎಸ್ 3215 ಮತಪಡೆದಿದೆ.
ಕ್ಷೇತ್ರದಲ್ಲಿ ಒಟ್ಟು 142 ಮತಗಟ್ಟೆಗಳಿದ್ದು ಇದರಲ್ಲಿ ಬಾಳ್ಳುಪೇಟೆ ಹಾಗೂ ಕುಂಬ್ರಹಳ್ಳಿ ಗ್ರಾಮಗಳಲ್ಲಿ ಬಿಜೆಪಿ ಮಾಜಿ ಶಾಸಕರಿದ್ದರೆ.
ಎಸ್.ಎಂ ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

