ಹಾಸನ

ಭೂ ಗುತ್ತಿಗೆ ವಿರೋಧಿಸಿ ಕರವೇ ಪ್ರತಿಭಟನೆ

Published On :

ಬೇಲೂರು: ಯಗಚಿ ಜಲಾಶಯದ ಡಣನಾಯಕ್ಕನಹಳ್ಳಿ ಬಳಿ ಇರುವ ಯಗಚಿ ನೀರಾವರಿ ಇಲಾಖೆಗೆ ಒಳಪಟ್ಟ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಉಳುಮೆ ಮಾಡಲು ಬಿಟ್ಟ ಯಗಚಿ ನೀರಾವರಿ ಇಲಾಖೆ ಸಹಾಯಕ ಅಧಿಕಾರಿ ಪುಟ್ಟೇಗೌಡ ಅವರನ್ನು ಕೂಡಲೇ ಕರ್ತವ್ಯದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕು ಘಟಕದ ಉಪಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಯಗಚಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನೂರಾರು ಜನರು ತಮ್ಮ  ಜಮೀನು ಕಳೆದುಕೊಂಡಿದ್ದಾರೆ, ಅಲ್ಲದೆ ಅಣೇಕಟ್ಟೆಯಲ್ಲಿ ಹೆಚ್ಚುವರಿ ನೀರು ನಿಂತ ಸಂದರ್ಭದಲ್ಲಿ ಅನುಕೂಲವಾಗಲಿ ಎಂದು ಸಾಕಷ್ಟು ಭೂಮಿಯನ್ನು ರೈತರಿಂದ ಪಡೆಯಲಾಗಿದೆ. ಈ ಜಾಗದಲ್ಲಿ ಶುಂಠಿ ಬೆಳೆಯಲು ಅಧಿಕಾರಿ ಪುಟ್ಟೇಗೌಡ ಗುತ್ತಿಗೆ ನೀಡಿದ್ದಾರೆ. ಪ್ರಮುಖವಾಗಿ ಡಣನಾಯಕ್ಕನಹಳ್ಳಿ ಬಳಿ ಸರ್ಕಾರಿ ಅಸ್ತಿಯಲ್ಲಿ ಈ ಕೃತ್ಯ ಎಸಗಿದ್ದಾರೆ, ಸರಿ ಸುಮಾರು 3 ಎಕ್ಕರೆ ಜಮೀನನ್ನು ನಮ್ಮ ಗ್ರಾಮದ ಯಲ್ಲಯ್ಯ ಎಂಬುವರಿಗೆ ಕಳೆದ ಐದು ವರ್ಷದಿಂದ ಗುತ್ತಿಗೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ ಎಂದರು.
ಈ ಬಗ್ಗೆ ನಮ್ಮ ಗ್ರಾಮಸ್ಥರು ಕೇಳಿದರೆ ಉಡಾಫೆಯಿಂದ ನೀವು ಜಮೀನು ನೀಡಿರಬಹುದು, ಅದರೆ ಈಗ ನಮ್ಮ ಯಗಚಿ ಇಲಾಖೆ ವ್ಯಾಪ್ತಿಗೆ ಬರುತ್ತದೆ, ನಾವು ಯಾರಿಗೆ ಬೇಕೋ ಅವರಿಗೆ ಉಳುಮೆ ಮಾಡಲು ಬಿಡುತ್ತೇವೆ, ಏನು ಮಾಡುತ್ತಿರಾ? ಎಂದು ಗದರಿಸುತ್ತಾರೆ. ಪುಟ್ಟೇಗೌಡನ ಅವಾಂತರ ನೂರಾರಿವೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಉದ್ಯಮಿ ಸಿದ್ದಾರ್ಥ ಅವರಿಗೆ ಸೇರಿದ 180 ಎಕ್ಕರೆ ಜಮೀನಿಗೆ ಒಳ ಒಪ್ಪಂದ ಮಾಡಿಕೊಂಡು ಯಗಚಿ ನೀರು ನೀಡುವಲ್ಲಿ ಎಲ್ಲಾ ಅಧಿಕಾರಿಗಳು ಶಾಮೀಲು ಆಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು, ಇಲ್ಲವಾದರೆ ಸಂಬಂಧಪಟ್ಟ ಇಲಾಖೆ ಬಳಿ ಕರವೇ ಉಗ್ರ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.  ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಹಾಗೂ ಗ್ರಾಮದ ಯುವಕರು ಭಾಗಿಯಾಗಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.