ತುಕ್ಕು ಹಿಡಿಯುತ್ತಿರುವ ಕಂಟೈನರ್‌ಗಳು
ಸಕಲೇಶಪುರ: ಪೌರಕಾರ್ಮಿಕರ ಕೆಲಸವನ್ನು ಸುಲಭ ಮಾಡುವ ನಿಟ್ಟಿನಲ್ಲಿ ಪುರಸಭೆ ಖರೀದಿಸಿದ ಘನತ್ಯಾಜ್ಯ ಸಂಗ್ರಹ ಕಂಟೈನರ್‌ಗಳು ಈಗ ಪುರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ.
ಪುರಸಭೆಯ ಎಲ್ಲ ವಾರ್ಡ್‌ಗಳ ನಿಗದಿತ ಪ್ರದೇಶಗಳಲ್ಲಿ ಬೃಹತ್ ಕಂಟೈನರ್ ಇಡುವ ಮೂಲಕ ಆ ವಾರ್ಡ್‌ಗಳ ಮನೆ ಮನೆಗಳಲ್ಲಿ ಸಂಗ್ರಹಿಸಿದ ಕಸವನ್ನು ಈ ಕಂಟೈನರ್‌ಗಳಿಗೆ ತಂದು ಹಾಕವುದು ಹಾಗೂ ಕಂಟೈನರ್‌ಗಳಲ್ಲಿ ಭರ್ತಿಯಾದ ಕಸವನ್ನು ಡಂಪರ್‌ಪ್ಲಸರ್ ವಾಹನದ ಮೂಲಕ ಸಾಗಿಸುವ ಉದ್ದೇಶದಿಂದ 2011-12ನೇ ಸಾಲಿನಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ರಾಜ್ಯಹಣಕಾಸು ಮುಕ್ತ ನಿಧಿಯಿಂದ ಒಟ್ಟು 4.20 ಲಕ್ಷರು. ಗಳನ್ನು ವಿನಿಯೋಗಿಸಿ ಬೆಂಗಳೂರಿನ ಲಕ್ಷ್ಮಿವೇಂಕಟೇಶ್ವರ ಏಜೆನ್ಸಿ ಮೂಲಕ ಈ ಬೃಹತ್ ಕಂಟೈನರ್‌ಗಳನ್ನು ತರಿಸಿತ್ತು. ಆದರೆ ಡಂಪರ್‌ಪ್ಲಸರ್ ವಾಹನ ಸರಬರಾಜು ಮಾಡುವ ಟೆಂಡರ್ ಪಡೆದಿದ್ದ ಬೆಂಗಳೂರಿನ ಮೂಲದ ಕಂಪನಿಯೊಂದು ವಾಹನಗಳನ್ನು ಸರಬರಾಜು ಮಾಡಲು ವಿಫಲಗೊಂಡ ಕಾರಣ ಕಳೆದ 3 ವರ್ಷಗಳ ಹಿಂದೆ ತರಲಾಗಿರುವ ಬೃಹತ್ ಕಂಟೈನರ್‌ಗಳು ತುಕ್ಕು ಹಿಡಿಯುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

