ಹಾಸನ

ರುದ್ರಪಟ್ಟಣದಲ್ಲಿ ಸಂಗೀತ ಜಾತ್ರೆ ಇಂದಿನಿಂದ

Published On :

ಕನ್ನಡಪ್ರಭ ವಾರ್ತೆ, ರಾಮನಾಥಪುರ, ಮೇ 22
ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಮೇ 23 ರಿಂದ 25ರವರೆಗೆ 13ನೇ ವರ್ಷದ ಸಂಗೀತ ಜಾತ್ರೆ ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯೂ ಸುಮಾರು 100ಕ್ಕೂ ಹೆಚ್ಚು ಸಂಗೀತ ವಿದ್ವಾಂಸರು ಮತ್ತು ಸ್ಥಳೀಯ ಸಂಗೀತಗಾರ ಪಾಲ್ಗೊಳ್ಳಲಿದ್ದಾರೆ.
ಶಾಸ್ತ್ರೀಯ ಸಂಗೀತದ ತವರೂರು ಎನಿಸಿರುವ ರುದ್ರಪಟ್ಟಣದಲ್ಲಿ ಕಳೆದ 12 ವರ್ಷಗಳಿಂದಲೂ ನಿರಂತರವಾಗಿ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ವ್ವತಿಯಿಂದ ದೇಶ, ವಿದೇಶಗಳಲ್ಲಿ ನೆಲಸಿರುವ ಸಂಗೀತ ವಿದ್ವಾಂಸರನ್ನು ಕರೆಸಿ ಸಂಗೀತೋತ್ಸವ ಕಾರ್ಯಕ್ರಮ ನಡೆಸುಯುತ್ತಿದೆ. ಜೊತೆಗೆ ಕರ್ನಾಟಕದ ಅನೇಕ ಕಲಾವಿದರ ಗಾಯನಕ್ಕೆ ಆದ್ಯತೆ ಕಲ್ಪಿಸಲಾಗಿದೆ.
ಮೇ23ರಂದು ಸಂಜೆ 5 ಕ್ಕೆ  ವಿ.ಕುಮಾರಿ ವೈಷ್ಣವಿ ದತ್ತ ಗಾಯನ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.
ಸಂಜೆ 6 ರಿಂದ 6.30ರವರೆಗೆ ರುದ್ರಪಟ್ಟಣ ವೀಣಾ ಸಹೋದರರಾದ ಅರ್.ಪಿ. ಪ್ರಶಾಂತ್ ಮತ್ತು ಅರ್.ಪಿ. ಪ್ರಮೇದ್ ಅವರಿಂದ ದ್ವಂದ್ವ ವೀಣಾವಾದನ. 6.45ಕ್ಕೆ ಕು.ಬಿಂಧು, ಸಿಂಧು, ವಿಭಶ್ರೀಅವರಿಂದ ಗಾಯನ. 7.30 ರಿಂದ 8 ಗಂಟೆಯವರೆವಿಗೆ ಬೆಂಗಳೂರಿನ ಅಪೂರ್ಣ ಅವರಿಂದ ಗಾಯನ. 8.15ರಿಂದ 8.45 ರವರೆಗೆ ಹಾಸನದ  ಹಂಸಾ ನಟರಾಜ್ ನೃತ್ಯ ಪ್ರದರ್ಶನ ನೀಡುವರು.  ಮೇ 24ರಂದು ಬೆಳಗ್ಗೆ ಕಾವೇರಿ ಪೂಜೆ ಬಳಿಕ 10.15ರಿಂದ 11.15 ರವರೆಗೆ ವಿದುಷಿ. ಎಚ್.ಎಮ್. ಸ್ಮಿತಾ ಮತ್ತು ಎಚ್.ಎಮ್. ಸಿಂಧು ಯುಗಳ ವೈಲಿನ್ ವಾದನಕ್ಕೆ ತುಮಕೂರು ಬಿ. ರವಿಶಂಕರ್ ಮೃದಂಗ, ಬಿ ಶಶಿಶೇಖರ್ ಘಟ ನುಡಿಸುವರು. 11.30ರಿಂದ 12.30 ರವರೆಗೆ ವಿ.ಎಸ್.ಸೌಮ್ಯ ಶರ್ಮಾ ಗಾಯನ, ನಳಿನಾ ಮೋಹನ್ ಪಿಟೀಲು, ದಯಾನಂದ ಮೊಹಿತೆ ಘಟ ನುಡಿಸುವರು.  12.45ರಿಂದ 1.45 ರವರೆಗೆ ವಿದ್ವಾನ್. ಅರ್.ಕೆ. ಪ್ರಸನ್ನಕುಮಾರ್ ಗಾಯನ, ಬಿ. ರಘುರಾಮ ಪಿಟೀಲು, ಎ. ರೇಣುಕಾ ಪ್ರಸಾದ್ ಮೃದಂಗ, ಎ.ಎಸ್. ಸ್ವಾಮಿ ಖಂಜರಿ ಹಾಗೂ 2.45ರಿಂದ 3.45 ರವರೆಗೆ ವಿ. ಚಂದನ್ಕುಮಾರ್ ಕೊಳಲು, ನಳಿನಾಮೋಹನ್ ಪಿಟೀಲು, ಎ. ರೇಣುಕಾ ಪ್ರಸಾದ್ಮೃದಂಗ, ಎ.ಎಸ್. ಸ್ವಾಮಿ ಖಂಜರಿ ನುಡಿಸುವರು.
ರಾತ್ರಿ 8 ರಿಂದ 9 ಗಂಟೆಯವರೆಗೆ ವಿದ್ವಾನ್ ಟಿ.ಎ.ಎಸ್. ಮಣಿ ಅವರಿಗೆ ನಾಚರಮ್ಮ ಪ್ರಶಸ್ತಿ ಮತ್ತು ಲಯವಾದ್ಯ ಸ್ವರ ಬಿರುದು ನೀಡಲಾಗುವುದು. ಹಾಸನ ಅದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ, ಸಾನ್ನಿಧ್ಯ ವಹಿಸಲಿದ್ದು ಬೆಂಗಳೂರು ಎಂ.ಎಸ್. ರಾಮಯ್ಯ ಯೂನಿವರ್ಸಿಟಿ ಅಫ್ ಅಪ್ಲೈಡೆ ಸೈನ್ಸಸ್ ಕುಲಪತಿ ಡಾ. ಎಂ.ಆರ್. ಜಯರಾಕ್, ಕ್ಷೇತ್ರದ ಶಾಸಕ ಮಂಜು ಭಾಗವಹಿಸುವರು. ಮೇ 25ರಂದು ಭಾನುವಾರ ಬೆಳಗ್ಗೆ 9ಕ್ಕೆ  ಸಂಕೀರ್ತನೆ ನಂತರ 10.30ಕ್ಕೆ ಮೈಸೂರು ಸಹೋದರರಾದ ವಿದ್ವಾನ್. ಎಂ. ನಾಗರಾಜ್ ಮತ್ತು ಡಾ ಎಂ. ಮಂಜುನಾಥ್ ವೈಲಿನ್ ವಾದನ, ತಿರುಚಿ ಬಿ. ಹರಿಕುಮಾರ್ ಮೃದಂಗ, ಯು.ಎನ್.ಗಿರಿಧರ ಉಡುಪ ಘಟ ನುಡಿಸಲಿದ್ದಾರೆ ಎಂದು ಗಾನ ಕಲಾಭೂಷಣ ಸಂಗೀತ ವಿದ್ವಾನ್ ಅರ್.ಕೆ. ಪದ್ಮನಾಭ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.