ಹಾಸನ

ಯಾವಾಗ ಕರೆದರೂ ಕಾರ್ಯಕ್ರಮ ನೀಡುತ್ತೇನೆ: ಟಿ.ಎಸ್.ಆರ್. ಮಣಿ

Published On :

ರಾಮನಾಥಪುರ: ರುದ್ರಪಟ್ಟಣದಲ್ಲಿ ಬಂದು ಸಂಗೀತ ಕಾರ್ಯಕ್ರಮ ನೀಡುವುದು ಮತ್ತು ಇಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ತಮ್ಮ ಜೀವನದ ಅವಿಸ್ಮರಣೀಯ ಸಂಗತಿಯಾಗಿದೆ, ಯಾವ ಸಂದರ್ಭದಲ್ಲಿ ಕರೆದರೂ ನಾನು ಇಲ್ಲಿಗೆ ಬಂದು ಕಾರ್ಯಕ್ರಮ ನೀಡಲು ಸಿದ್ಧವಿರುವುದಾಗಿ ಖ್ಯಾತ ಮೃದಂಗ ವಿದ್ವಾನ್ ಟಿ. ಎಸ್. ಆರ್. ಮಣಿ ಹೇಳಿದರು.
ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ನೀಡುವ ಪ್ರತಿಷ್ಠಿತ ಶ್ರೀ ನಾಚಾರಮ್ಮ ವಾರ್ಷಿಕ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕ ಶಾಸ್ತ್ರಿಯ ಸಂಗೀತ ಪರಂಪರೆಗೆ ರುದ್ರಪಟ್ಟಣದ ಕೊಡುಗೆ ಮಹತ್ವದ್ದು ಗತಕಾಲದ ವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಆರ್.ಕೆ.ಪದ್ಮನಾಭ ಮಹತ್ವದ ಕೆಲಸವನ್ನು ಹುಟ್ಟೂರಿನಲ್ಲಿ ಮಾಡುತ್ತಿದ್ದಾರೆ, ಅವರ ಸಂಗೀತೋಪಾಸನೆ ಮತ್ತು ಚಿಂತನೆ ಮಾದರಿಯಾದ್ದಾಗಿದೆ ಎಂದರು.
ವಿದ್ವಾಂಸರಾದ ಆರ್.ಕೆ. ಪದ್ಮನಾಭ ಮಾತನಾಡಿ, ಟಿ. ಎಸ್. ಆರ್. ಮಣಿಗೆ ನಾಚಾರಮ್ಮ ಪ್ರಶಸ್ತಿ ನೀಡುತ್ತಿರುವುದು ನಮಗೆ ಹೆಮ್ಮೆ ತಂದಿದೆ, ಅವರು ಸಂಗೀತ ಕ್ಷೇತ್ರಕ್ಕೆ  ಸಲ್ಲಿಸಿರುವ ಕೊಡುಗೆ ಅವಿಸ್ಮರಣೀಯವಾದುದು, ದೇಶ ವಿದೇಶಗಳಲ್ಲಿ ಅವರು ಕರ್ನಾಟಕ ಶಾಸ್ತ್ರಿಯ ಸಂಗೀತ ಪರಂಪರೆಯನ್ನು ಬೆಳೆಸಲು ನೆರವಾಗಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.