ಹಾಸನ

ಮಗು ಚಿಕಿತ್ಸೆಗೆ ನೆರವು ನೀಡಲು ಮನವಿ

Published On :

ಹಾಸನ: ಬಿಟಾ ತಲಸಿಮಿಯ ಎಂಬ ರೋಗದಿಂದ ಬಳಲುತ್ತಿರುವ ತಮ್ಮ ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಬೇಲೂರಿನ ಸನ್ಯಾಸಿಹಳ್ಳಿ ವಾಸಿ ಶ್ರೀನಿವಾಸ್ ಮನವಿ ಮಾಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ರ ಮುರಳಿ (4)ಗೆ ಎರಡುವರೆ ತಿಂಗಳಿನಿಂದ ದೇಹದಲ್ಲಿ ಇರುವ ರಕ್ತ ಖಾಲಿಯಾಗುತ್ತಿರುತ್ತದೆ. ಈ ಬಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ತೋರಿಸಿದಾಗ ರೋಗ ಇರುವುದು ಪತ್ತೆಯಾಗಿದೆ. ಈ ರೋಗದಿಂದ ಗುಣಮುಖವಾಗಲು ಕನಿಷ್ಠ ರು.22 ಲಕ್ಷ  ಹಣದ ಅವಶ್ಯಕತೆ ಇದೆ. ಆರ್ಥಿಕವಾಗಿ ಕಷ್ಟದಲ್ಲಿ ಇರುವ ನಮಗೆ ಹಣವನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಮಗುವಿನ ರೋಗ ನಿವಾರಣೆ ಮಾಡಲು ನನ್ನ ಪತ್ನಿ ಶ್ವೇತಾ ಇನ್ನೊಂದು ಮಗುವಿಗೆ ಜನ್ಮ ನೀಡಿದರೆ ಆ ಮಗುವಿನಲ್ಲಿ ಇರುವಂತಹ ಕೆಲಮೊಂದು ಅಂಶಗಳನ್ನು ತೆಗೆದು ಮುರಳಿಗೆ ನೀಡುವುದರಿಂದ ರೋಗ ಗುಣಮುಖವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಸಹಾಯ ಮಾಡುವಂತೆ ಮನವಿ ಮಾಡಿದರು. ಸಹಾಯ ಮಾಡುವವರು ಶ್ವೇತಾ, ಎಸ್‌ಬಿಐ ಬ್ಯಾಂಕ್, ಬೇಲೂರು ಬ್ರಾಂಚ್, ಅಕೌಂಟ್ ನಂ-33794029599, ಐಎಫ್‌ಎಸ್‌ಸಿ ನಂ-ಎಸ್‌ಬಿಎನ್ 0013440 ಗೆ ಹಣವನ್ನು ಹಾಕಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.