ಎಡಿಜಿಪಿ ವರ್ಗ: ಬಿಎಸ್ಪಿ ಪ್ರತಿಭಟನೆ
ಹಾಸನ: ಹಿರಿಯ ಪೊಲೀಸ್ ಅಧಿಕಾರಿ ಎಡಿಜಿಪಿ ಡಾ.ರವೀಂದ್ರನಾಥ್ ಅವರ ವಿರುದ್ಧ ಪಿತೂರಿ ನಡೆಸಿ ಅವರ ಮೇಲೆ ಸುಳ್ಳು ಆರೋಗಳನ್ನು ಹೊರಸಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಅವಮಾನ ಮಾಡಿರುವುದನ್ನು ಖಂಡಿಸಿ ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ಹಿರಿಯ ಅಧಿಕಾರಿ ರವೀಂದ್ರನಾಥ್ ಅವರ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪದಕ ದೊರಕಿದೆ. ಅಂತಹ ವ್ಯಕ್ತಿಯ ವಿರುದ್ಧ ಪಿತೂರಿ ಮಾಡಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಅವಮಾನ ಮಾಡಲಾಗಿದೆ. ಅವರ ತಪ್ಪು ಇಲ್ಲದಿದ್ದರೂ ಈ ರೀತಿ ಹಿರಿಯ ಪೊಲೀಸ್ ಅಧಿಕಾರ ಮೇಲೆ ಎಸ್ಐ ನಡೆದುಕೊಂಡಿರುವ ರೀತಿ ಸರಿಯಲ್ಲ ಎಂದು ಆರೋಪಿಸಿದರು.
ರವೀಂದ್ರನಾಥ್ ಬಹಳ ಉತ್ತಮ ಹಾಗೂ ಒಳ್ಳೆಯ ಅಧಿಕಾರಿಯಾಗಿದ್ದು, ಅವರು ಈ ರೀತಿಯ ಕೃತ್ಯವನ್ನು ಎಸಗುವಂತಹ ವ್ಯಕ್ತಿಯಲ್ಲ. ಪೊಲೀಸ್ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿ ಇರುವಂತಹ ರವೀಂದ್ರನಾಥ್ ಅವರ ಏಳಿಗೆಯನ್ನು ಸಹಿಸಲಾರದಂತಹವರು ಈ ರೀತಿಯ ಪಿತೂರಿ ಅಪಪ್ರಚಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಳೆಯ ಸೇಡಿನಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಈ ಪಿತೂರಿ ನಡೆಸಿದ್ದು, ಇವರೊಂದಿಗೆ ಡಿಸಿಪಿ ರವಿಕಾಂತೇಗೌಡ ಹಾಗೂ ಹೈಗ್ರೌಂಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿ ಅವರ ಪಾತ್ರಗಳ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದ ಪ್ರತಿಭಟನಕಾರರು, ಕಾಫಿ ಶಾಪ್ ನಲ್ಲಿ ಹುಡುಗಿಯ ಪೋಟೊ ತೆಗೆದಿದ್ದಾರೆ ಎಂಬ ಕಾರಣ ವೊಡ್ಡಿ ಅವರ ವಿರುದ್ಧ ಹುಡುಗಿಯರ ಕೈಯಲ್ಲಿ ದೂರು ಕೊಡಿಸಿದ್ದಾರೆ. ಆ ಹುಡುಗಿಯವರು ಘಟನೆ ನಡೆದಾಗ ದೂರು ನೀಡದೆ, ಸಂಜೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಇದರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರ ಕೈವಾಡವಿದೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಬಿ.ಸಿ.ರಾಜೇಶ್, ಎ.ಪಿ.ಅಹಮದ್, ಸಮತ ಸೈನಿಕದಳದ ಸತೀಶ್, ಹೆತ್ತೂರು ನಾಗರಾಜು ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

