ಹಾವೇರಿ

ವಿದ್ಯುತ್‌ಗೆ ಆಗ್ರಹಿಸಿ ಹೆದ್ದಾರಿ ತಡೆ

Published On :

ಹಾನಗಲ್ಲ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಬಸವಣ್ಣ ದೇವರ ರಥೋತ್ಸವ ಹಾಗೂ ವೀರಭದ್ರೇಶ್ವರ ದೇವರ ಗುಗ್ಗಳ ಕಾರ್ಯಕ್ರಮ ಏ. 2ರಿಂದ 8ರ ವರೆಗೆ ನಡೆಯಲಿವೆ.
ಏ. 2ರಂದು ಬೆಳಗ್ಗೆ 8ಕ್ಕೆ ಪುಷ್ಪರಥೋತ್ಸವ, 3ರಂದು ಬೆಳಗ್ಗೆ ವೀರಭದ್ರ ದೇವರ ಮಹಾರುದ್ರಾಭಿಷೇಕ, ಗುಗ್ಗಳದೊಂದಿಗೆ ಮಹಾರಥೋತ್ಸವ ಆರಂಭಗೊಂಡು, ಅಗ್ನಿಕುಂಡ ಹಾಯುವ ಕಾರ್ಯಕ್ರಮ ನಡೆಯಲಿದೆ. 3ರಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಸಂಜೆ 6ಕ್ಕೆ ನಡೆಯಲಿವೆ. ನಂಜುಂಡೇಶ್ವರ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
ಷಣ್ಮುಖಯ್ಯ ಹಿರೇಮಠ ಅಧ್ಯಕ್ಷತೆ ವಹಿಸುವರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಎಚ್.ಜಿ. ಶೋಭಾ, ಎಂ.ಕೆ. ಸೊಲಭೇಶ್ವರಪ್ಪ, ಗಣೇಶಪ್ಪ ಕೊಪ್ಪದ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭ ಗ್ರಾಪ ಅಧ್ಯಕ್ಷೆ ವಿನೋದಾ ಬಡಿಗೇರ, ಉಪಾಧ್ಯಕ್ಷೆ ಶಾಂತವ್ವ ತಳವಾರ, ಹಿರಿಯರಾದ ಸಿದ್ದಪ್ಪ ಹಳ್ಳೂರ, ಗಂಗಮಾಳವ್ವ ಗೋರೆಗೌಡ್ರ, ಎಂ.ಕೆ. ಸೊಲಭೇಶ್ವರಪ್ಪ, ವಿಶ್ರಾಂತ ಶಿಕ್ಷಕರಾದ ಎಚ್.ಎಸ್. ಹಿರೇಮಠ, ಎಚ್.ಬಿ. ಸೈದಣ್ಣನವರ, ಬಿ.ಎಂ. ಕುಳೇನೂರ, ಸಿ.ಪಿ. ಬಾಸೂರ, ಎಸ್.ಬಿ. ಮಳಿಯಣ್ಣನವರ, ಬಿ.ಸಿ. ದೊಡ್ಡಮನಿ, ಪಿ.ಸಿ. ನಾಗನಗೌಡ್ರ, ಧರ್ಮಗೌಡ್ರ ಪಾಟೀಲ ಅವರನ್ನು ಸನ್ಮಾನಿಸಲಾಗುವುದು.
ರಾತ್ರಿ 9ಕ್ಕೆ ಹಾವೇರಿಯ ಕೆ.ಆರ್. ಹಿರೇಮಠ ತಂಡ ಹಾಗೂ ಬೆಂಗಳೂರಿನ ಜಾನಪದ ಕಲಾವಿದ ಹರೀಶ ಕುಣಿಗಲ್ಲ ಇವರಿಂದ ಜಾನಪದ, ಕ್ರಾಂತಿಗೀತೆ ಹಾಗೂ ಹಾಸ್ಯ ಕಾರ್ಯಕ್ರಮಗಳು ಜರುಗುವವು. 4ರಂದು ಮಧ್ಯಾಹ್ನ 3ರಿಂದ ಓಕಳಿ ಬಂಡಿಗಳ ಮೆರವಣಿಗೆ ನಡೆಯುವುದು. 5ರಂದು ರಾತ್ರಿ ಬಸವೇಶ್ವರ ನಾಟ್ಯ ಸಂಘದ ಕಲಾವಿದರಿಂದ 'ಸಿಡಿದೆದ್ದ ಸೂರ್ಯಟ ಚಂದ್ರ' ನಾಟಕ ಪ್ರದರ್ಶನಗೊಳ್ಳಲಿದೆ. 7ರಂದು ರಾತ್ರಿ ಬಸವೇಸ್ವರ ಆಟದ ಮಂಡಳಿ ಕಲಾವಿದರಿಂದ 'ಸಂಗ್ಯಾಟ ಬಾಳ್ಯಾ' ಸಣ್ಣಾಟ ಪ್ರದರ್ಶನಗೊಳ್ಳಲಿದೆ. ಏ. 2ರಿಂದ 8ರ ವರೆಗೆ ಗ್ರಾಮದ ನಿಂಗನಗೌಡ ಪಾಟೀಲ ಅವರ ಹೊಲದಲ್ಲಿ ರೈತರಿಗಾಗಿ ದನಗಳಟ ಜಾತ್ರೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.