ಆರೋಗ್ಯ ಶಿಬಿರ ಸದುಪಯೋಗಪಡಿಸಿಕೊಳ್ಳಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಏ. 2
ಗ್ರಾಮೀಣ ಭಾಗದ ಜನತೆ ಅನಾರೋಗ್ಯ, ವಿವಿಧ ರೋಗಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರೂ ನುರಿತ ಹಾಗೂ ತಜ್ಞ ವೈದ್ಯರಲ್ಲಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸುವಲ್ಲಿ ವಿಫಲರಾಗುತ್ತಿರುವುದನ್ನು ಗಮನಿಸಿ ಲಯನ್ಸ್ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದ್ದು, ಕಾರಣ ತಾಲೂಕಿನ ಜನತೆ ಶಿಬಿರದ ಸದುಪಯೋಗಪಡೆದುಕೊಳ್ಳಬೇಕೆಂದು ರಟ್ಟಿಹಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಭಿನಂದನ ಭೋಗಾರ ಕರೆ ನೀಡಿದರು.
ತಾಲೂಕಿನ ರಟ್ಟಿಹಳ್ಳಿಯ ಲಯನ್ಸ್ ಶಾಲಾ ಆವರಣದಲ್ಲಿ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಲಯನ್ಸ್ ಕ್ಲಬ್ ರಟ್ಟಿಹಳ್ಳಿ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ದೇಶಿಸಿ ಮಾತನಾಡಿದರು.
ಶಿಬಿರದಲ್ಲಿ ದಾವಣಗೆರೆಯ ನುರಿತ ತಜ್ಞ ವೈದ್ಯರ ತಂಡ ಆಗಮಿಸಿರುವುದು ಸಂತಸ ತಂದಿದೆ. ಸಮಾಜದಲ್ಲಿರುವ ಬಡವ, ಬಲ್ಲಿದರೆಲ್ಲರೂ ಉತ್ತಮ ಆರೋಗ್ಯ ಪಡೆಯಬೇಕೆನ್ನುವುದು ಲಯನ್ಸ್ ಸಂಸ್ಥೆ ಗುರಿಯಾಗಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿ, ನುರಿತ ವೈದ್ಯರು ಹೃದಯರೋಗ, ಮಧುಮೇಹ, ಬೆನ್ನೆಲೆಬು, ಕೀಲು ಹಾಗೂ ಮೂಳೆ, ಮಕ್ಕಳಿಗೆ ಹಾಗೂ ಸ್ತ್ರೀಯರಿಗೆ ಉಚಿತವಾಗಿ ಪರೀಕ್ಷೆ ನಡೆಸುವ ಮೂಲಕ ಚಿಕಿತ್ಸೆ ನೀಡುವರು.
ವಿವಿಧ ಶಿಬಿರಗಳನ್ನು ನಡೆಸುವ ಮೂಲಕ ಸಮಾಜದ ಸೇವೆ, ಅರ್ಪಣಾ ಮನೋಭಾವನೆಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಿಬಿರದಲ್ಲಿ ಮಕ್ಕಳ ತಜ್ಞ ಡಾ. ಎಸ್.ಎಸ್. ಮಾಜಿಗೌಡರ, ಹೃದಯ ಮತ್ತು ಮಧುಮೇಹ ವೈದ್ಯ ಡಾ. ಮಾಲತೇಶ, ಬೆನ್ನೆಲುಬು, ಕೀಲು ಮೂಳೆ ತಜ್ಞ ಡಾ. ಸಚಿನ ಎಸ್. ನಿಂಬರಗಿ, ಸ್ತ್ರೀ-ರೋಗ ತಜ್ಞ ಡಾ. ನಿವೇದಿತಾ, ದಂತವೈದ್ಯ ಡಾ. ದೇವರಾಜ ಜಿ.ಎಚ್ ಮೊದಲಾದ ತಜ್ಞವೈದ್ಯರು ನೂರಾರು ರೋಗಿಗಳಿಗೆ ಉಚಿತ ತಪಾಸಣೆ ನಡೆಸಿ, ಸಲಹೆ ನೀಡಿದರು.
ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ಆರ್.ಎನ್. ಗಂಗೋಳ, ಸದಸ್ಯರಾದ ಎಂ.ಎಚ್. ಹರಿವಿಶೆಟ್ಟರ್, ಎಸ್.ಬಿ. ಗೂಳಪ್ಪನವರ, ಗಣೇಶ ವೆರ್ಣೇಕರ, ಎಸ್.ಬಿ. ಪಾಟೀಲ, ಎನ್.ಕೆ. ಮನ್ನೋಪಂತರ, ಟಿ. ಕೃಷ್ಣ ಶೆಟ್ಟರ್, ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಬಿ. ಬಳ್ಳೇರ ಹಾಗೂ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.
ರಟ್ಟಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನತೆ ಶಿಬಿರದ ಪ್ರಯೋಜನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

