ಪ್ರಾದೇಶಿಕ ಪಕ್ಷ ಬೆಂಬಲಿಸಿ: ಶಿವರಾಜ ಸಜ್ಜನರ
ಬ್ಯಾಡಗಿ: ಸಮರ್ಥ ನಾಯಕತ್ವವಿಲ್ಲದ ಕಾಂಗ್ರೆಸ್, ನಾವಿಕನಿಲ್ಲದ ಹಡಗಿನಂತಾಗಿದೆ. ಟಿಕೆಟ್ ಹಂಚಿಕೆ ಬಳಿಕ ಭಿನ್ನಮತದ ಬಿಸಿ ಎದುರಿಸಬೇಕಾಗುತ್ತದೆ. ಸುಭದ್ರ ಸರ್ಕಾರಕ್ಕಾಗಿ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಎದುರಾಗಿದ್ದು, ಬಿಎಸ್,ವೈ ನೇತೃತ್ವದ ಕೆಜೆಪಿ ಬೆಂಬಲಿಸುವಂತೆ ಶಿವರಾಜ ಸಜ್ಜನರ ಮನವಿ ಮಾಡಿದರು.
ಬುಧವಾರ ತಾಲೂಕಿನ ಹೆಡಿಗ್ಗೊಂಡ, ಕಾಗಿನೆಲೆ ಗ್ರಾಮಗಳಲ್ಲಿ ಕೆಜೆಪಿ ಚುನಾವಣಾ ಪ್ರಚಾರ ಸಮಯದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಪರ್ವ ಆರಂಭವಾಗಿದ್ದು, ಇತ್ತೀಚೆಗೆ ಜರುಗಿದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಜೆಪಿ ಬ್ಯಾಡಗಿ ಪುರಸಭೆಯಲ್ಲಿ ಬಹುಮತ ಸಾಧಿಸಿದೆ. ಹೀಗಾಗಿ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿಯೂ ಕೆಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ 125ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕೆಜೆಪಿ ಗೆಲವು ಸಾಧಿಸುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಮಾಜಿ ಸಿಎಂ ಬಿಎಸ್,ವೈ ಜಾತ್ಯಾತೀತ ತಳಹದಿಯಲ್ಲಿ ಅಧಿಕಾರ ನಡೆಸಿದ್ದಾರೆ. ಆದರೆ, ಬಿಜೆಪಿಯ ಕೆಲ ನಾಯಕರ ಕುತಂತ್ರಕ್ಕೆ ಬಲಿಯಾಗಿ ಅಧಿಕಾರದಿಂದ ಕೆಳಗಿಳಿಯುವಂತಾಯಿತು. ಆದರೆ, ಬಿಎಸ್,ವೈ ಕೇವಲ ತಮ್ಮ ಅಭಿವೃದ್ಧಿ ಚಿಂತನೆಗಳ ಮೂಲಕ ಜನಮನ ಗೆದ್ದಿದ್ದಾರೆ. ಇಂತವರ ನಾಯಕತ್ವದಲ್ಲಿ ಕೆಜೆಪಿ ಬರುವ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲಿದೆ ಎಂದರು. ಸುರೇಶ ಯತ್ನಳ್ಳಿ, ಚಂದ್ರಣ್ಣ ಶೆಟ್ಟರ್, ರಾಜೇಂದ್ರ ಹಾವೇರಣ್ಣನವರ, ನಾಗರಾಜ ಬಳ್ಳಾರಿ, ಮಂಜಪ್ಪ ಬಿಳಿಯಣ್ಣನವರ, ಮುತ್ತಪ್ಪ ಕಡೆಮನಿ ಶೇಖರಪ್ಪ ಕಲ್ಮನಿ, ಚನ್ನವೀರಗೌಡ್ರ ಬುಡನಗೌಡ್ರ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

