ಹಾವೇರಿ

15ರೊಳಗೆ ವೇತನ ಪಡೆಯಿರಿ: ಎಚ್.ಎನ್. ಹೊನ್ನೂರು

Published On :

ಹಾವೇರಿ: ಗಣಕಯಂತ್ರದಲ್ಲಿ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಯಿಂದ ನಿಯಂತ್ರಣಾಧಿಕಾರಿಗಳ ಮೂಲಕ ಬಟವಡೆ ಅಧಿಕಾರಿಗಳಿಗೆ ವೇತನ ಅನುದಾನ ಅಪ್,ಲೋಡ್ ಆಗದೇ ಇದ್ದರೂ ಸಹ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅಧೀನದಲ್ಲಿ ಬರುವ ಇಲಾಖೆಗಳಿಗೆ ಸಂಬಂಧಪಟ್ಟಂತೆ ಮಾರ್ಚ್ ತಿಂಗಳ ವೇತನ ಬಿಲ್,ಗಳಿಗೆ ಮಾತ್ರ ಏಪ್ರಿಲ್ 15, 2013ರೊಳಗಾಗಿ ಖಜಾನೆಗಳಲ್ಲಿ ಬಿಲ್ಲು ಸಲ್ಲಿಸಿ ವೇತನ ಪಡೆಯಲು ಆವಕಾಶ ಕಲ್ಪಿಸಿದೆ ಎಂದು ಹಾವೇರಿ ಜಿಲ್ಲಾ ಖಜಾನಾಧಿಕಾರಿ ಎಚ್.ಎನ್. ಹೊನ್ನೂರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯೊಂದನ್ನು ನೀಡಿರುವ ಅವರು, ಈ ಅವಕಾಶ ಮಾರ್ಚ್ ತಿಂಗಳಿಗೆ ಸಂಬಂಧಿಸಿದ ವೇತನ ಬಿಲ್ಲುಗಳಿಗೆ ಮಾತ್ರ ಅವಕಾಶವಿದ್ದು, ಪೂರಕ ವೇತನ, ಹಳೆ ಬಿಲ್ಲುಗಳು, ಸಾದಿಲ್ವಾರು ಬಿಲ್ಲುಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಅನುದಾನ ಬಿಡುಗಡೆ ಖಜಾನೆ ಗಣಕಯಂತ್ರದಲ್ಲಿ ಕ್ರಮಬದ್ಧಗೊಳಿಸಲು ಇಲಾಖಾ ಅಧಿಕಾರಿಗಳಿಗೆ ಸಮಯಾವಕಾಶಬೇಕಾಗಿರುವ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ವೇತನವನ್ನು ಮಾತ್ರ ಹೆಚ್,ಆರ್,ಎಂಎಸ್,ನಿಂದ ಸಿದ್ದಪಡಿಸಿದ ಬಿಲ್ಲಿನೊಂದಿಗೆ ಖಜಾನೆಗೆ ಸಲ್ಲಿಸಬಹುದಾಗಿದೆ.
ಇಲ್ಲವಾದಲ್ಲಿ ಏ. 15ರ ನಂತರ ಬಂದ ಬಿಲ್ಲುಗಳಿಗೆ ಗಣಕಯಂತ್ರದಲ್ಲಿ ಇಲಾಖಾ ಅಧಿಕಾರಿಗಳು ಅನುದಾನ ಬಿಡುಗಡೆಗೊಳಿಸಿದ ನಂತರ ಬಿಲ್ಲನ್ನು ಪೂರ್ಣಗೊಳಿಸುವ ಅನಿವಾರ್ಯತೆ ಬರುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.