ಸಮುದಾಯಕ್ಕೆ ಅರ್ಥಿಕ ತಿಳಿವಳಿಕೆ ಅಗತ್ಯ
ಹಿರೇಕೆರೂರು: ದೇಶದ ಆರ್ಥಿಕತೆ ಮತ್ತು ಮಾನವನ ದೈನಂದಿನ ಬದುಕು ಹಸನಾಗಿರಲು ಅರ್ಥಶಾಸ್ತ್ರ ಅಧ್ಯಯನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅರ್ಥಶಾಸ್ತ್ರ ದಿನಾಚರಣೆ ಆಚರಿಸುವುದರೊಂದಿಗೆ ಅರ್ಥ ವ್ಯವಸ್ಥೆಯ ಕಲ್ಪನೆಯನ್ನು ಸಮುದಾಯದಲ್ಲಿ ಮೂಡಿಸಬೇಕೆಂದು ಸ್ಟೇಟ್ ಬ್ಯಾಂಕ್ ಇಂಡಿಯಾ ವ್ಯವಸ್ಥಾಪಕ ರಮೇಶ ಕುಲಕರ್ಣಿ ತಿಳಿಸಿದರು.
ರಟ್ಟಿಹಳ್ಳಿಯ ಪ್ರೀಯದರ್ಶಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಅರ್ಥಶಾಸ್ತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜೀವನದಲ್ಲಿ ಪ್ರತಿಯೊಬ್ಬರೂ ಸುಖ ಜೀವನ ನಡೆಸುವುದು ಎಲ್ಲರ ಗುರಿಯಾಗಿದೆ. ಆದರೆ, ಅದಕ್ಕೆ ತಕ್ಕಂತೆ ದುಡಿಮೆ ಇರಬೇಕು. ಹಾಗೆಯೇ ಉಳಿತಾಯ ಇರಬೇಕು, ಲೆಕ್ಕವಿದ್ದಲ್ಲಿ ರೊಕ್ಕ ಇರುತ್ತದೆ ಎನ್ನುವಂತೆ ಪ್ರತಿಯೊಬ್ಬರೂ ಆರ್ಥಿಕ ಜ್ಞಾನವನ್ನು ಸಂಪಾದಿಸಬೇಕು. ಅಂದಾಗ ಮಾತ್ರ ಸುಖ ಜೀವನ ಮಾಡಲು ಸಾಧ್ಯವಿದೆ. ದಿನದಲ್ಲಿ ಲಾಭಕ್ಕಿಂತ ಹಾನಿಯೇ ಹೆಚ್ಚಾದರೆ ನಷ್ಟ ಅನುಭವಿಸಿ ಕಷ್ಟದ ಜೀವನ ಮಾಡಬೇಕಾಗುತ್ತದೆ. ಆದ್ದರಿಂದ ಅರ್ಥಶಾಸ್ತ್ರ ಅಧ್ಯಯನ ಜೊತೆಗೆ ವ್ಯವಹಾರ ಜ್ಞಾನವನ್ನು ಸಂಪಾದಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎಂ.ಬಿ. ತಲ್ಲೂರ ಪ್ರಾಸ್ತಾವಿಕ ಮಾತನಾಡಿ, ಜೀವನ ಸಿಹಿ, ಕಹಿಗಳ ಸಮ್ಮಿಲನದ ವೇದಿಕೆ, ಪ್ರತಿಯೊಂದು ಸಂದರ್ಭದಲ್ಲಿ ಲೆಕ್ಕವಿಲ್ಲದೆ ಏನನ್ನೂ ಮಾಡಲಾಗದು. ಬರಿ ಹಣವಿದ್ದರೆ ಸಂತೋಷಪಡಲು ಸಾಧ್ಯವಿಲ್ಲ. ಅರ್ಥಶಾಸ್ತ್ರ ವಿಷಯ ಮನನ ಮಾಡಿಕೊಂಡು ವ್ಯವಸ್ಥಿತ ಜೀವನ ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ರಂಗಕಲಾವಿದ ರಾಜು ತಾಳಕೋಟಿ ಅವರ ಸುಪುತ್ರ ದಾವೂದ್ ತಾಳಿಕೋಟಿ, ಹಾಸ್ಯ ಕಲಾವಿದ ಲೋಕೇಶ ಹಾಸ್ಯ ಮನರಂಜಿಸಿತು. ಪ್ರಾಚಾರ್ಯ ಚಾಮರಾಜ ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾದ್ಯಾಪಕರಾದ ಎಚ್.ಬಿ. ಕೆಂಚಳ್ಳಿ, ಬಿ.ಸಿ. ತಿಮ್ಮೇನಹಳ್ಳಿ, ಶಶಿಧರ ತಾಂದಳೆ, ಡಾ.ಅರೋಣ ಕಲ್ಲೋಳಕರ, ಎ.ಜಿ. ರಾಘವೇಂದ್ರ, ಎಂ.ಎಂ. ಪ್ಯಾಟಿ, ಎಚ್. ಶಾಂತಮ್ಮ, ಸಿ.ಎನ್. ಸೊರಟೂರ, ಸಿ.ಆರ್. ಹಿತ್ತಲಮನಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಗೀತಾ ಮಟ್ಟಿ ಸ್ವಾಗತಿಸಿದರು. ಸುಮಾ ಬಾಗೋಡಿ ನಿರೂಪಿಸಿದರು. ಶಶಿಕುಮಾರ ಮಾಯಾಚಾರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

