ಹಾವೇರಿ

ಹುಲಗಿನಕೊಪ್ಪ: 50 ಲೀ. ಕಳ್ಳಭಟ್ಟಿ ಸಾರಾಯಿ ವಶ

Published On :

ಹಾನಗಲ್ಲ: ತಾಲೂಕಿನ ಹುಲಗಿನಕೊಪ್ಪ  ತಿರುವಿನಲ್ಲಿ ಅಬಕಾರಿ ಸಿಬ್ಬಂದಿ ದಾಳಿ ನಡೆಸಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 50 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡ ಘಟನೆ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ನಡೆದಿದೆ. ಇದರ ಮೌಲ್ಯ ರು. 33 ಸಾವಿರಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಮಂಜು ಕವಿದ ವಾತಾವರಣದಲ್ಲಿ ಆರೋಪಿಗಳು ಅಧಿಕಾರಿಗಳ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ. ಸಾರಾಯಿ ಸಾಗಿಸಲು ಬಳಸುತ್ತಿದ್ದ ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಹಾನಗಲ್ಲ ವಲಯ ಅಬಕಾರಿ ಉಪನೀರಿಕ್ಷಕ ಬಿ.ಎಂ. ಮೋಹನ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.
ಅಬಕಾರಿ ಉಪ ಆಯುಕ್ತ ಟಿ. ನಾಗರಾಜಪ್ಪ ಮಾರ್ಗದರ್ಶನದಲ್ಲಿ, ಉಪ ಅಧೀಕ್ಷಕ ವಿ. ಜಯಪ್ಪ ಹಾಗೂ ಹಾನಗಲ್ಲ ವಲಯ ನಿರೀಕ್ಷಕ ಹೊನ್ನಪ್ಪ ಓಲೇಕಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಧಿಕಾರಿಗಳಾದ ಐ.ಆರ್.ಅಗಸಿಬಾಗಿಲ, ಬಿ.ಎಂ. ಮೋಹನ, ಎಂ.ಕೆ. ಅಖಂಡ, ಸಿಬ್ಬಂದಿ ಎನ್.ಆರ್. ದಾಮೋದರ, ರಾಘವೇಂದ್ರ ಮಸಾಲಜಿ, ಎನ್.ಎಫ್. ಚಿನಿವಾಲ, ರಬ್ಬಾನಿ ಚಿನಿವಾಲ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.