ಹಾವೇರಿ

ಬೆಳಗಾಲಪೇಟದಲ್ಲಿ ನಾಳೆ ಗಾಡಾ ಓಡಿಸುವ ಸ್ಪರ್ಧೆ

Published On :

ಹಾನಗಲ್ಲ: ತಾಲೂಕಿನ ಬೆಳಗಾಲಪೇಟದಲ್ಲಿ ಭಾರಿ ಗಾಡಾ ಓಡಿಸುವ ಸ್ಪರ್ಧೆ ಏ. 7ರಂದು ಭಾನುವಾರ ಆಯೋಜಿಸಲಾಗಿದೆ.
ಗ್ರಾಮದ ಈಸೂಪಸಾಬ ಎಲಿಗಾರ, ಶಿವಣ್ಣ ಶಿಗ್ಗಾವಿ ಅವರ ಹೊಲದ ಬೆಳಗಾಲ ಕೆರೆಯ ಆವರಣದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 6ರ ವರೆಗೆ ನಡೆಯಲಿರುವ ಗಾಡಾ ಓಡಿಸುವ ಸ್ಪರ್ಧೆಯನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಉದ್ಘಾಟಿಸುವರು. ಮಾಜಿ ಸಚಿವ ಸಿ.ಎಂ. ಉದಾಸಿ ಅಧ್ಯಕ್ಷತೆ ವಹಿಸುವರು.
ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ಅಭಿದಾಬಿ ನದಾಫ್, ಮಾಜಿ ಸದಸ್ಯ ಎಂ.ಆರ್. ಪಾಟೀಲ, ತಾಪಂ ಸದಸ್ಯೆ ಲಲಿತವ್ವ ಹಿರೇಮಠ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಭಜಂತ್ರಿ, ಉಪಾಧ್ಯಕ್ಷ ಅಜ್ಜಪ್ಪ ಪಾಟೀಲ, ಸಿ.ಪಿ. ಕೋರಿಶೆಟ್ಟರ್, ಎಪಿಎಂಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ನಿರ್ದೇಶಕ ರಾಜಣ್ಣ ಪಟ್ಟಣದ, ಜೆಇಕೋ ಅಧ್ಯಕ್ಷ ಎ.ಎಸ್. ಬಳ್ಳಾರಿ, ಉದ್ಯಮಿ ಶಂಭಣ್ಣ ಕಮಡೊಳ್ಳಿ, ಪ್ರಕಾಶ ಕೋರಿಶೆಟ್ಟರ್, ಎಸ್.ಎನ್. ಕಾರಡಗಿ, ಶಿದ್ಲಿಂಗಪ್ಪ ಶಂಕ್ರಿಕೊಪ್ಪ, ಯಲ್ಲಪ್ಪ ನಾಗಪ್ಪನವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಪ್ರಥಮ ಬಹುಮಾನ ರು. 30 ಸಾವಿರ, ದ್ವಿತೀಯ ರು. 20 ಸಾವಿರ, ತೃತೀಯ ರು. 10 ಸಾವಿರ ಸೇರಿ 30ಕ್ಕೂ ಅಧಿಕ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಸಂಜೆ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಬಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮಿಗಳು ವಹಿಸುವರು. ವಾಸುದೇವ ಉರಣಕರ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಉಪ ಸಭಾಪತಿ ಮನೋಹರ ತಹಸೀಲ್ದಾರ್, ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಎಸ್.ಟಿ. ಉರಣಕರ, ರಾಜಣ್ಣ ಹಿರೇಮಠ, ಚನ್ನಬಸಪ್ಪ ಶಿಗ್ಗಾಂವಿ, ಶಿವಯೋಗಿ ಹಿರೇಮಠ, ಪುಟ್ಟಯ್ಯ ಹಿರೇಮಠ, ಉದಯ ಉರಣಕರ, ಮಲ್ಲಿಕಾರ್ಜುನ ದೇವಣ್ಣನವರ, ಗಂಗಾಧರ ಪ್ಯಾಟಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ- 9448443780, 9901519352, 9740874318 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.