ಹಾವೇರಿ

ಶಾಂತಿಯುತ ಚುನಾವಣೆ: ಕಟ್ಟುನಿಟ್ಟಿನ ಕ್ರಮ

Published On :

ಹಿರೇಕೆರೂರು:  86ನೇ ವಿಧಾನಸಭಾ ಮತಕ್ಷೇತ್ರವಾದ ಹಿರೇಕೆರೂರು ತಾಲೂಕಿನಲ್ಲಿ ಶಾಂತಿ, ಸುವ್ಯವಸ್ಥೆಯಿಂದ ಹಾಗೂ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ವೈ. ಬಸವರಾಜಪ್ಪ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
200 ಮತ ಕೇಂದ್ರಗಳು: ತಾಲೂಕಿನಲ್ಲಿ ಒಟ್ಟು 1,56,172 ಮತದಾರರಿದ್ದು, ಇವರಲ್ಲಿ 82,666 ಪುರುಷರು, 73,306 ಮಹಿಳಾ ಮತದಾರರಿದ್ದಾರೆ. ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಲು ಇಲ್ಲಿಯವರೆಗೆ 4,587 ಜನ ಅರ್ಜಿ ಸಲ್ಲಿಸಿದ್ದಾರೆ. ಮತದಾನಕ್ಕಾಗಿ ಒಟ್ಟು 207, ಇವುಗಳಲ್ಲಿ ಮಾಸೂರು, ಮೇದೂರು ಮತ್ತು ಇಂಗಳಗೊಂದಿ ಗ್ರಾಮದಲ್ಲಿ ಮೂರು ಹೆಚ್ಚುವರಿ ಮತಗಟ್ಟೆಗಳನ್ನು ಸೇರಿ ಒಟ್ಟು 200 ಮತ ಕೇಂದ್ರಗಳನ್ನು  ಸ್ಥಾಪಿಸಲಾಗಿದೆ.
ಪ್ಲಾಯಿಂಗ್ ತಂಡ ರಚನೆ: ಚುನಾವಣೆ ವ್ಯವಸ್ಥಿತ ಹಾಗೂ ಸುಭದ್ರತೆಗಾಗಿ ಕಾರ್ಯನಿರ್ವಹಿಸಲು 15 ಮತಗಟ್ಟೆಗಳಿಗೆ ಒಬ್ಬರಂತೆ ತಾಲೂಕು ಮಟ್ಟದ ನೇತೃತ್ವದಲ್ಲಿ 15 ತಂಡಗಳನ್ನು ನೇಮಿಸಲಾಗಿದೆ. ಮಾದರಿ ನೀತಿ ಸಂಹಿತೆಯು ಮಾ. 21ರಿಂದ ಜಾರಿಗೆ ಬಂದಿದ್ದು, ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ಮೂರು ಎಂಸಿಸಿ ತಂಡ ಹಾಗೂ ತಾಲೂಕು ಮಟ್ಟದ 2 ಪ್ಲಾಯಿಂಗ್(ಹಾರುವ) ತಂಡಗಳನ್ನು ರಚಿಸಲಾಗಿದೆ. ಹಿರೇಕೆರೂರಿಗೆ ಎಪಿಎಂಸಿ ಕಾರ್ಯದರ್ಶಿ ಪಿ. ರಾಮಪ್ಪ, ಹಂಸಭಾವಿ ಹೋಬಳಿ ಮಟ್ಟದ ತಂಡಕ್ಕೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರೀಯಾಜ್ ಅಹ್ಮದ್, ರಟ್ಟೀಹಳ್ಳಿ ಹೋಬಳಿಗೆ ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಚ್. ಶ್ರೀಧರ, ತಾಲೂಕು ಮಟ್ಟದ ಪ್ಲಾಯಿಂಗ್ ತಂಡಕ್ಕೆ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋಪಿನಾಥ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ್ ಆಲದಾರ್ತಿ ಇವರನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳೆಂದು ನೇಮಿಸಲಾಗಿದೆ.
  ಈ ತಂಡಗಳು ಸತತವಾಗಿ ಕ್ಷೇತ್ರವಾರು ಸಂಚರಿಸುತ್ತ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳನ್ನು ದಾಖಲಿಸುವ ಅಧಿಕಾರ ನೀಡಲಾಗಿದೆ.
ಅಧಿಕೃತ ಅಧಿಸೂಚನೆ ಏ. 10ರಿಂದ ಮೆ. 11ರ ವರೆಗೆ ನೀತಿ ಸಂಹಿತೆ ಜಾರಿಗೆಯಲ್ಲಿರುತ್ತದೆ. 17ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜರುಗಲಿದೆ. 18ರಂದು ಪರಿಶೀಲನೆ, ನಾಮಪತ್ರ ಹಿಂಪಡೆಯಲು ಏ. 20 ಕೊನೆಯ ದಿನಾಂಕವಾಗಿದೆ. ಮತದಾನ ಮೆ 5ರಂದು ಜರುಗಲಿದ್ದು, 8ರಂದು ಜಿಲ್ಲಾ ಕೇಂದ್ರದಲ್ಲಿ ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಚುನಾವಣೆ ಅಕ್ರಮ ತಡೆಗೆ ಹಿರೇಕೆರೂರು ಕೇಂದ್ರ ಮಟ್ಟದಲ್ಲಿ-9440806177, ಹಂಸಭಾವಿ ಹೋಬಳಿಗಾಗಿ-9444872937, ರಟ್ಟೀಹಳ್ಳಿ- 9740054117, ತಾಲೂಕು ಮಟ್ಟಕ್ಕಾಗಿ 9448961500, 8971333353ಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ತಿಳಿಸಬೇಕು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು. ತಹಸೀಲ್ದಾರ್ ತುಷಾರ್ ಹೊಸೂರ, ಚುನಾವಣಾಧಿಕಾರಿಗಳಾದ ಪಿ. ರಾಮಪ್ಪ, ಆರ್.ಜೆ. ಗೋಖಲೆ, ಅಶೋಕ ಪಡುವಳ್ಳಿ, ಮಲ್ಲಿಕಾರ್ಜುನ ಸಿ.ಎಸ್,  ಡಾ.ಗೋಪಿನಾಥ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.