ಹಾವೇರಿ

ಬಿಎಸ್ಸಾರ್ ಅಭ್ಯರ್ಥಿ ಅಶೋಕ್ ಪ್ರಚಾರ

Published On :

ಹಿರೇಕೆರೂರು: ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಎಂ. ಅಶೋಕ ಸೋಮವಾರ ತಾಲೂಕಿನ ಹಳ್ಳೂರು ಗ್ರಾಮದ ಶ್ರೀ ರಂಗನಾಥ ದೇವರಿಗೆ ಪೂಜೆ ಸಲ್ಲಿಸಿ, ಪಾದಯಾತ್ರೆ ಮೂಲಕ ಚಿಕ್ಕಬ್ಬಾರ, ಹಿರೇಕಬ್ಬಾರ, ವರಹ, ನಿಡನೇಗಿಲು, ಗುಂಡಗಟ್ಟಿ, ಗ್ರಾಮಗಳಲ್ಲಿ ಮತ ಯಾಚನೆ ಮಾಡಿದರು. ಒಡೆಯನಪುರ ಗ್ರಾಮದ ಪರಮೇಶಪ್ಪ ಭೋಗಸಮುದ್ರ, ರಾಜು ಮಳವಳ್ಳಿ, ಹಿರೇಕೆರೂರಿನ ನ್ಯಾಯವಾದಿ ಎಸ್.ಎಸ್. ಒಡೆಯನಪುರ, ಚಿಕ್ಕೇರೂರು ಗ್ರಾಮದ ಅರುಣಕುಮಾರ ಮಡಿವಾಳರ, ಗುಡ್ಡೇಶ ಮಡಿವಾಳರ, ರೇವಣೇಶ, ಮಹೇಶ ಹಾಗೂ ಮಹಾಂತೇಶ ಬಿಎಸ್ಸಾರ್ ಸೇರಿದರು.
ಬಳಿಕ ಅವರು ತಾಲೂಕಿನ ಅಬಲೂರು, ಹೊಸಕಟ್ಟಿ, ನಾಗವಂದ, ಅಣಜಿ, ಹಳ್ಳೂರ ಮುಂತಾದ ಹಳ್ಳಿಗಳಲ್ಲೂ ಮತ ಯಾಚಿಸಿದರು. ಅಬಲೂರು ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮುಖಂಡರಾದ ಎ.ವಿ. ರಾಘವೇಂದ್ರ, ಹೇಮಾ ಬೆಳ್ಳೂರು, ನಟರಾಜ ನಂದೀಹಳ್ಳಿ, ಅಶೋಕ ಬುದ್ನಿ, ರಾಜು ಮಡಿವಾಳವರ, ಮಂಜು ನಿಂಗಮ್ಮನವರ, ಹೊನ್ನಪ್ಪ ಹಂಚಿನಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.