ಹಾವೇರಿ

ಅಂಬೇಡ್ಕರ್ ತತ್ವಾದರ್ಶದಿಂದ ರಾಷ್ಟ್ರ ಸದೃಢ

Published On :

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಏ. 14
ದೇಶದ ಆಡಳಿತ ನಡೆಸಲು ಉತ್ತಮ ಸಂವಿಧಾನ ರಚಿಸುವ ಮೂಲಕ ಹಾಗೂ ದೇಶದಲ್ಲಿರುವ ಅಸ್ಪೃಶ್ಯತೆ ಹೋಗಲಾಡಿಸುವಲ್ಲಿ ಅವಿರತವಾಗಿ ಹೋರಾಡಿದ ಧೀಮಂತ ನಾಯಕ ಡಾ೤ ಬಿ.ಆರ್. ಅಂಬೇಡ್ಕರ ಅವರ ಆದರ್ಶಗಳು ಎಂದೆಂದಿಗೂ ಜಗತ್ತಿಗೆ ಸರ್ವಕಾಲಿಕ ಸತ್ಯ. ಅವುಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಅಳವಡಿಸಿಕೊಂಡಾಗ ಮಾತ್ರ ದೇಶ ಸದೃಢ ರಾಷ್ಟ್ರವಾಗಬಲ್ಲದು ಎಂದು ತಹಸೀಲ್ದಾರ್ ತುಷಾರ ಬಿ. ಹೊಸೂರ ಕರೆ ನೀಡಿದರು.
ಪಟ್ಟಣದ ತಹಸೀಲ್ದಾರ್ ಕೆಚೇರಿಯಲ್ಲಿ ತಾಲೂಕು ಆಡಳಿತದಿಂದ ಜರುಗಿದ ಡಾ೤ ಬಿ.ಆರ್. ಆಂಬೇಡ್ಕರ್ ಅವರ 122ನೇ ಜನ್ಮದಿನಾಚರಣೆಯಲ್ಲಿ ಡಾ೤ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಜಾಗೃತಗೊಳ್ಳಿ: ಕಳೆದ ಹಲವಾರು ವರ್ಷಗಳಿಂದ ದೇಶಕ್ಕೆ ಶಾಪವಾಗಿರುವ ಅಸ್ಪೃಶ್ಯತೆ ಹೋಗಲಾಡಿಸುವುದು ಅತಿ ಅವಶ್ಯವಾಗಿದೆ. 21ನೇ ಶತಮಾನ ಬಂದರೂ ಅಸ್ಪೃಶ್ಯತೆ ಹಾಗೂ ಅಸಮಾನತೆಗಳು ಸಮಾಜದಿಂದ ದೂರವಾಗಿಲ್ಲ. ಇದರಿಂದಾಗಿ ಸಮಾಜದಲ್ಲಿ ಅಶಾಂತಿ ತಾಂಡವಾಡುತ್ತಿದೆ. ಇದಕ್ಕೆ ಸಮುದಾಯ ಜಾಗೃತಗೊಳ್ಳಬೇಕು.
ತತ್ವಾದರ್ಶ ಪಾಲಿಸಿ: ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ಅಂಶಗಳು ಅಂಬೇಡ್ಕರ ಅವರ ಆದರ್ಶ ಗುಣಗಳಾಗಿದ್ದವು. ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸುವ ಮೂಲಕ ಸಂವಿಧಾನಲ್ಲಿರುವ ಹಕ್ಕು ಹಾಗೂ ಕರ್ತವ್ಯಗಳನ್ನು  ಪ್ರತಿಯೊಬ್ಬ ಭಾರತೀಯರು ತಪ್ಪದೆ ಪರಿಪಾಲಿಸಬೇಕು. ಅಂದಾಗ ಮಾತ್ರ ದೇಶ ಜಗತ್ತಿನಲ್ಲಿ ಬಲಿಷ್ಠವಾಗುವುದರಲ್ಲಿ ಸಂದೇಹವಿಲ್ಲ. ನಾವು ಹಕ್ಕು ಹೇಗೆ ಪಡೆಯುತ್ತೇವೆಯೋ ಅದರಂತೆ ಕರ್ತವ್ಯಗಳನ್ನು ಸಹ ತಪ್ಪದೆ  ನಿರ್ವಹಿಸಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣಾಧಿಕಾರಿ ಡಿ. ಮಂಜಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಶ್ರೀನಿವಾಸ ಅಲದರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಅಧಿಕಾರಿಗಳಾದ ಎಚ್.ವೈ. ಕೊಪ್ಪದ, ಕೆ.ಪಿ. ಕಾಂಬ್ಳೆ, ಜಿ.ಎಫ್. ಪಾಟೀಲ, ಭೀಮಪ್ಪ ಬಿ. ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.