ಮಹಾಪುರುಷರ ಆದರ್ಶ ಸಮುದಾಯದ ಹಿತಕ್ಕೆ ಬಳಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 14
ಮಹಾಪುರುಷರನ್ನು ಒಂದು ಜಾತಿ, ಮತಕ್ಕೆ ಕಟ್ಟುವ ಬದಲು ಇಡೀ ಸಮುದಾಯದ ಹಿತಕ್ಕೆ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸಾಹಿತಿ ಪ್ರೊ ಮಾರುತಿ ಶಿಡ್ಲಾಪುರ ತಿಳಿಸಿದರು.
ಹಾನಗಲ್ಲಿನ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಡಾ ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತ ದೇಶಕ್ಕೆ ಅಂಟಿದ ಜಾತಿ ವ್ಯವಸ್ಥೆ ದೂರ ಮಾಡಲು ಮತ್ತೊಬ್ಬ ಮಹಾತ್ಮ ಹುಟ್ಟಿ ಬಂದರೂ ಕೂಡ ಅವನಿಗೂ ಒಂದು ಜಾತಿಗೆ ಕಟ್ಟುವ ಕೆಲಸವೇ ಆದೀತು. ನಮ್ಮೊಳಗಿನ ಕಲಹ ಸ್ವಾರ್ಥ, ಸಂಕುಚಿತತೆ ದೂರ ಮಾಡಿಕೊಂಡರೆ ಮಾತ್ರ ಸಮಾನತೆ ಸಾಧ್ಯ. ಮೇಲು ಕೀಳೆಂಬುದು ಕೇವಲ ಭಾರತಕ್ಕೆ ಸೀಮಿತವಲ್ಲ. ಆದರೆ, ಭಾರತದಲ್ಲಿ ಇದು ಅತಿರೇಕದ ಸಂಗತಿ. ಜಾತಿ ವ್ಯವಸ್ಥೆ ದೂರ ಮಾಡಲು ಹೆಣಗಿದ ಮಾಹಾಪುರುಷರು ದುರಂತ ಕಥೆಯಾಗಿ ಹೋದ ಸಂಗತಿಗಳು ನಿಜಕ್ಕೂ ವಿಷಾದಕರ ಎಂದರು.
ಎಷ್ಟೇ ಎಚ್ಚತ್ತರೂ ನಮ್ಮ ದೌರ್ಬಲ್ಯಗಳು ಜಾತಿ ವ್ಯವಸ್ಥೆಯನ್ನು ಇನ್ನೂ ಜೀವಂತವಾಗಿಡುವ ವಾಹಕ ಶಕ್ತಿಯಾಗಿವೆ. ನಾವು ನಮ್ಮನ್ನು ಅರಿತು ಉತ್ತಮ ಶಿಕ್ಷಣ ಪಡೆದು ರಾಷ್ಟ್ರೀಯತೆ ರೂಢಿಸಿಕೊಂಡರೆ ಮಾತ್ರ ಜಾತಿ ಮತದ ಹೆಸರಿನ ಕಚ್ಚಾಟ ಹಾಗೂ ಭಿನ್ನತೆಗಳು ದೂರವಾಗಲು ಸಾಧ್ಯ ಎಂದರು.
ತಾಪಂ ಇಓ ಮನೋಜಕುಮಾರ ಗಡಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಿಎಸ್ಎಸ್ ಅಧ್ಯಕ್ಷ ನಿಂಗಪ್ಪ ಗಾಳೆಮ್ಮನವರ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭ ಕಲಾವಿದ ರವಿ ಲಕ್ಷ್ಮೇಶ್ವರ, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ ಬಡಿಗೇರ, ನಿಂಗಪ್ಪ ಕಾಳೇರ, ಹನುಮಂತಪ್ಪ ಯಳ್ಳೂರ ಅವರನ್ನು ಸನ್ಮಾನಿಸಲಾಯಿತು.
ಡಾ ಎನ್.ಎಫ್. ಕಮ್ಮಾರ, ಡಾ ಚಂದ್ರಪ್ಪ ನರಸಗೊಂಡರ, ಸಿಪಿಐ ಬಸವರಾಜ ಮಂಟೂರ ಮುಖ್ಯ ಅತಿಥಿಗಳಾಗಿದ್ದರು. ದಲಿತ ಸಂಘಟನೆ ಮುಖಂಡ ನಿಂಗಪ್ಪ ಕಾಳೇರ, ಹನುಮಂತಪ್ಪ ಯಳ್ಳೂರ, ಪರಶುರಾಮ ಹುಳ್ಳಿಕಾಶಿ, ಮಹದೇವಪ್ಪ ಪೂಜಾರ, ಫಕ್ಕೀರಪ್ಪ ಕಾಳೇರ, ಪುರಸಭಾ ಅಧಿಕಾರಿ ಶಿವಾನಂದ ಕ್ಯಾಲಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಿರೀಶ ಪುರೋಹಿತ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

