ಕಾಂಗ್ರೆಸ್ ಕಾರ್ಯಕರ್ತರು ಕೆಜೆಪಿ ಸೇರ್ಪಡೆ
ಕನ್ನಡಪ್ರಭ ವಾರ್ತೆ, ಹಾನಗಲ್, ಏ. 14
ತಾಲೂಕಿನ ಅಕ್ಕಿಆಲೂರಿನ ಮೆಹಬೂಬ ನಗರದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಹಾಗೂ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ನೇತೃತ್ವದಲ್ಲಿ ಕೆಜೆಪಿ ಸೇರ್ಪಡೆಯಾದರು.
ಈ ಸಂದರ್ಭ ಅನೇಕ ಮುಖಂಡರು ಮಾತನಾಡಿ, ಐದು ವರ್ಷ ಅವಧಿಯಲ್ಲಿ ಉದಾಸಿ ಅವರು ಸಚಿವರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ಕ್ಷೇತ್ರದಲ್ಲಿ ಆರಂಭಗೊಂಡಿರುವ ಅಭಿವೃದ್ಧಿ ಪರ್ವ ಮುಂದುವರೆಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ತಾವು ಕಾಂಗ್ರೆಸ್ ತೊರೆದು ಕೆಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ಹೇಳಿಕೊಂಡರು.
ಸೇರ್ಪಡೆ: ಮೆಹಬೂಬಸಾಬ್ ಮುಲ್ಲಾ, ರಫೀಕಅಹ್ಮದ ಹರಕುಣಿ, ನಿಸಾರಅಹ್ಮದ ಓಣಿಕೇರಿ, ಅಬ್ದುಲಕರೀಂ ಸಿಲಾರ್, ಮೆಹಬೂಬಲಿ ಆಲದಕಟ್ಟಿ, ಅಬ್ದುಲ್ರೆಹಮಾನ ಅತ್ತಾರ, ಜಾಫರ್ ಆಲದಕಟ್ಟಿ, ಹಸನಬಾನ್ ಪಠಾಣ, ಮಹ್ಮದಸಾಧಿಕ ಕೂಸನೂರ, ಮಹ್ಮದಬಾಷಾ ಹಾನಗಲ್, ರಫೀಕಅಹ್ಮದ ಓಣಿಕೇರಿ, ಅಷ್ಪಾಕ ಹರಕುಣಿ, ಮಹ್ಮದಜಾಫರ್ ಬಾಳಂಬೀಡ, ಖ್ವಾಜಾಮೊದ್ದೀನ್ ಕಾರಡಗಿ, ಜಬಿವುಲ್ಲಾ ಓಣಿಕೇರಿ, ಮಕಬೂಲ ಪಾಟೀಲ, ಮೌಲಾಲಿ ಹಿತ್ತಲಮನಿ, ಸೈಯದ್ ತಾಷದ, ಮನಸೂರಖಾನ ಪಠಾಣ, ಫಾಜಿಲ್ ಅತ್ತಾರ, ಮಕಬೂಲಅಹ್ಮದ ಕೂಸನೂರ, ಮಹ್ಮದಗೌಸ್ ಹಿತ್ತಲಮನಿ ಸೇರಿದಂತೆ ಮತ್ತಿತರರು ಕಾಂಗ್ರೆಸ್ ತೊರೆದು ಕೆಜೆಪಿ ಸೇರ್ಪಡೆಯಾದರು.
ಕೆಜೆಪಿ ನಗರ ಘಟಕದ ಅಧ್ಯಕ್ಷ ರಾಜು ಗೌಳಿ, ಮುಖಂಡರಾದ ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ್, ಮಕಬೂಲ ತಂಡೂರ, ಭಾಸ್ಕರ್ ಹುಲಮನಿ, ಮತ್ತಿತರರು ಉಪಸ್ಥಿತರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

