ಕಾಂಗ್ರೆಸ್‌ನಿಂದ ಮತಕ್ಕಾಗಿಸಾಮಾಜಿಕ ನ್ಯಾಯ ಘೋಷಣೆ
ಬ್ಯಾಡಗಿ: ಬಿಎಸ್‌ವೈ ಮಠಗಳಿಗೆ ಅನುದಾನ ನೀಡಿದ್ದನ್ನು ಪ್ರಶ್ನಿಸುವ ಕಾಂಗ್ರೆಸ್ ಮುಖಂಡರು ಯುಪಿಎ ಅಧ್ಯಕ್ಷ ಸೋನಿಯಾ ಅವರನ್ನು ಸಿದ್ಧಗಂಗಾಶ್ರೀ ಬಳಿ ಕರೆದೊಯ್ದಿದ್ದೇಕೆ.. ಕೇವಲ ಮತ ಸೆಳೆಯಲು ಸಾಮಾಜಿಕ ನ್ಯಾಯದ ಘೋಷಣೆ ಮಾಡುವ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ ಎಂದು ಕೆಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ ಟೀಕಿಸಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಡಗಿ ಮತಕ್ಷೇತ್ರದ ಗುಮ್ಮನಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿ ಬಳಿಕ ಅವರು ಮಾತನಾಡಿದರು. ಬಿಎಸ್‌ವೈ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿಯನ್ನು ಸಹಿಸದ ವಿಪಕ್ಷಗಳು ಅಧಿಕಾರದಿಂದ ಶಾಶ್ವತವಾಗಿ ದೂರ ಉಳಿಯುವ ಭಯದಿಂದ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಇಂತಹ ಸುಳ್ಳು ಆರೋಪಗಳಿಂದ ಮತದಾರರನ್ನು ನಂಬಿಸಲು ಸಾಧ್ಯವಿಲ್ಲ ಎಂದರು.
ಮಾಜಿ ಸಿಎಂ ಯಡಿಯೂರಪ್ಪರ ಕ್ರೀಯಾಶೀಲ ಹಾಗೂ ದೂರದೃಷ್ಟಿಯ ಆಡಳಿತ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರಿಗೆ ಇಲ್ಲಸಲ್ಲದ ತೇಜೋವಧೆ ಮಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಮೂಲಕ 17 ಲಕ್ಷ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ ಅಭಿವೃದ್ಧಿಯ ಹರಿಕಾರ ಬಿಎಸ್‌ವೈ ಮೇಲೆ ಗೋಲಿಬಾರ ಪ್ರಕರಣಕ್ಕೆ ತಲೆ ಕಟ್ಟುವಲ್ಲಿ ವಿರೋಧಪಕ್ಷಗಳು ವಿಫಲ ಯತ್ನ ನಡೆಸಿವೆ ಎಂದು ಆರೋಪಿಸಿದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ತಮ್ಮ ಅವಧಿಯಲ್ಲಿ ಗ್ರಾಮವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದೇನೆ. ಗ್ರಾಮದ ಕೆರೆಗೆ ನದಿ ನೀರು ಮುಂತಾದ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಬ್ಯಾಡಗಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಗಮನಿಸಿದ ಜನತೆ ಈಗ ಕೆಜೆಪಿ ಆಯ್ಕೆಗೆ ಸಹಕರಿಸಿ ಶಿವರಾಜ ಸಜ್ಜನರನ್ನು ಆಯ್ಕೆ ಮಾಡುವಂತೆ ವಿನಂತಿಸಿದರು.
ಕೆಜೆಪಿ ಜಿಲ್ಲಾಧ್ಯಕ್ಷ ಮೈಲೆಪ್ಪ ಗುಡಗೂರ, ತಾಲೂಕಾಧ್ಯಕ್ಷ ಮುರಿಗೆಪ್ಪ ಶೆಟ್ಟರ, ನಗರ ಘಟಕದ ಅಧ್ಯಕ್ಷ ಗಂಗಣ್ಣ ಎಲಿ, ನಾಗರಾಜ ಮಲ್ಲಾಡದ, ಸುರೇಶ ಹಾಡೋರ, ಮಲ್ಲಯ್ಯ ಒಡೆಯರ, ಹನುಮಂತಪ್ಪ ಹೊಳೆಯಣ್ಣನವರ ಬೀರಪ್ಪ ಸಂಶಿ, ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

