ಹತಾಶೆಯಿಂದ ಬಸನಗೌಡ ಹೇಳಿಕೆ: ಆಕ್ಷೇಪ
ಹಿರೇಕೆರೂರು: ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ನ ಜಿಪಂ ಮಾಜಿ ಸದಸ್ಯ ಪಿ.ಡಿ. ಬಸನಗೌಡ್ರ ಟಿಕೆಟ್ ಸಿಗದೆ ಹತಾಶೆರಾಗಿ ಶಾಸಕ ಬಿ.ಸಿ. ಪಾಟೀಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಚಾರಿತ್ರ್ಯ ವಧೆ ಮಾಡಿದ್ದಾರೆ ಎಂದು ರಟ್ಟೀಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಆರೋಪಿಸಿದರು.
ಪಕ್ಷದ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿ ಬಡವರಿಗೆ ಮತ್ತು ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಸಮಾನ ದೃಷ್ಟಿಯಿಂದ ಶ್ರಮಿಸಿದ ಶಾಸಕರ ವಿರುದ್ಧ ಹೇಳಿಕೆ ನೀಡಿ ಕಾರ್ಯಕರ್ತರನ್ನು ಗೊಂದಲಕ್ಕೆ ತಳ್ಳುತ್ತಿದ್ದಾರೆ ಎಂದು ದೂರಿದರು. ಪಿ.ಡಿ. ಬಸನಗೌಡ್ರ ಪಕ್ಷದ ಹೆಸರಿನಲ್ಲಿ ಬೆಳೆದು, ಈಗ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವುದು ಖಂಡನೀಯ.
ಬಸನಗೌಡರು ಪಕ್ಷದ ಹೆಸರಿಲ್ಲದೆ ಗ್ರಾಪಂ ಚುನಾವಣೆ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ವರಿಷ್ಠರು ಬಸನಗೌಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ಬಿ.ಎನ್. ಬಣಕಾರ, ಇಸ್ಮಾಯಿಲಸಾಬ ಖಾಜಿ, ರಾಮಣ್ಣ ವಾಲ್ಮೀಕಿ, ಹಿರೇಮೊರಬ ಗ್ರಾಪಂ ಅಧ್ಯಕ್ಷ ಹಾಲನಗೌಡ ಮುದಿಗೌಡ್ರ, ಮಂಜಪ್ಪ ಮಡಿವಾಳರ, ಗ್ರಾಪಂ ಸದಸ್ಯ ಶಿವು ದ್ಯಾವಕ್ಕಳವರ, ಪ್ರಭು ಹುಲ್ಲತ್ತಿ, ರಮೇಶ ಬಾಗೋಡಿ, ರಾಮಣ್ಣ ಕಾಟಪ್ಪನವರ, ಶಮ್ಮು ಗೋಡಿಹಾಳ, ಅಬ್ಬಾಸ ಗೋಡಿಹಾಳ, ನಾರಾಣಪ್ಪ ಅಸ್ವಾಲಿ, ರಿಯಾಜಹ್ಮದ ತಡಕನಹಳ್ಳಿ, ರಾಜಶೇಖರ ತಹಶೀಲ್ದಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

