ಕಂಬಳಿ ಹಾಕಿ ಮತಯಾಚನೆ ಹಾಲುಮತಸ್ಥರಿಗೆ ಅವಮಾನ
ಶಿಗ್ಗಾಂವಿ: ಹಾಲುಮತಸ್ಥರು(ಕುರುಬ ಜನಾಂಗ) ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ. ಅಂತಹದರಲ್ಲಿ ಕಂಬಳಿ ಹಾಕಿಕೊಂಡು ಮತ ಯಾಚಿಸುವುದು, ಬಿಕ್ಷೆ ಬೇಡುವುದು ಹಾಲುಮತಸ್ಥರಿಗೆ ಅವಮಾನ ಮಾಡಿದಂತೆ ಜಾತಿಯ ಹೆಸರಿನಲ್ಲಿ ಕ್ಷುಲ್ಲಕದಿಂದ ಮತ ಕೇಳಿ ನಾಟಕವಾಡುತ್ತಿದ್ದಾರೆ. ಅಂತಹವರಿಗೆ ತಕ್ಕಪಾಠ ಕಲಿಸಬೇಕೆಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಅಜ್ಜಂಪೀರ್ ಖಾದ್ರಿ ವಿರುದ್ಧ ಹರಿಹಾಯ್ದರು.
ಸೋಮವಾರ ಪಟ್ಟಣದ ಹುಲಗೂರು ರಸ್ತೆಯಲ್ಲಿರುವ ಗ್ರಾಮದೇವಿ ಪಾದಗಟ್ಟೆಗೆ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಹಣ-ಹೆಂಡ, ಭ್ರಷ್ಟಾಚಾರ ಪ್ರಾರಂಭ ಮಾಡಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರ. ಕೂಲಿಗಾಗಿ ಕಾಳು ಮಾಡಿ ಬಡವರ ಕಾಳನ್ನು ಬಹಿರಂಗವಾಗಿ ಲೂಟಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಮೊಸಳೆ ಕಣ್ಣೀರು ಹಾಕುವವರಿಗೆ ಮತ ಹಾಕಬೇಡಿ. ಅದು ಕಣ್ಣೀರಲ್ಲ ಕಣ್ಣೀರು ಒರೆಸುವ ತಂತ್ರ. ನಿಜವಾಗಿ ಕಣ್ಣೀರು ಒರೆಸುವರಿಗೆ ಮತ ಹಾಕಿ ಎಂದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ 666 ಕಿಮೀ ರಸ್ತೆ ಅಭಿವೃದ್ಧಿ ಮಾಡಿದೆ. ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಐಟಿಐ, ಡಿಪ್ಲೋಮಾ, ಎನ್ಟಿಟಿಎಫ್, ರಾಣಿಚನ್ನಮ್ಮ, ವಾಜಪೇಯಿ ವಸತಿ ನಿಲಯ, ಮೊರಾರ್ಜಿ ವಸತಿ ಶಾಲೆ, ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ ಮೆಲ್ದರ್ಜೆಗೇರಿಸಿದೆ. 2008ರಲ್ಲಿ ಬಿಜೆಪಿ ಸರ್ಕಾರ ಜನರಿಗೆ ಯಾವ ಭರವಸೆಗಳನ್ನು ಕೊಟ್ಟಿತ್ತೋ ಅವುಗಳನ್ನೆಲ್ಲ ಈಡೇರಿಸಿದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.
ಮಾಜಿ ಶಾಸಕ ರಾಜಶೇಖರ ಸಿಂಧೂರ, ಸರೋಜಾ ಆಡಿನ, ಜಿಪಂ ಸದಸ್ಯ ಸಿ.ಎಸ್. ಪಾಟೀಲ, ಬಿ.ಟಿ. ಇನಾಮತಿ ಮೋಹನ ಮೇಣಸಿನಕಾಯಿ, ಮಹೇಶ ಸಾಲಿಮಠ, ದೇವಣ್ಣ ಚಾಕಲಬ್ಬಿ, ರವಿ ಕುಡವಕ್ಕಲಿಗರ, ಶಿವಾನಂದ ಸೊಬರದ, ವಿ.ಎ. ಪೂಜಾರ, ಆನಂದ ದಾನಿ, ಗುಡ್ಡಪ್ಪ ಮತ್ತೂರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

