ಬಿಜೆಪಿ ಅಭ್ಯರ್ಥಿ ಪಾಲಾಕ್ಷಗೌಡ ನಾಮಪತ್ರ ಸಲ್ಲಿಕೆ
ಹಿರೇಕೆರೂರು: ಸೋಮವಾರ ಹಿರೇಕೆರೂರು ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪಾಲಾಕ್ಷಗೌಡ ಪಾಟೀಲ ಸೋಮವಾರ ಪಕ್ಷದ ಕಚೇರಿಯಿಂದ ಕಾರ್ಯಕರ್ತರೊಂದಿಗೆ ಪಾದಯಾತ್ರೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಚಳಗೇರಿ, ಭಾವನಾ ಪಾಟೀಲ, ಜಿ.ಪಂ. ಸದಸ್ಯ ಬಸವರಾಜ ಬೇವಿನಹಳ್ಳಿ, ಬಸಮ್ಮ ಅಬಲೂರ, ವಕೀಲ ಎಸ್.ಆರ್.ಅಂಗಡಿ, ಶ್ರೀಕಾಂತ ಕುಲಕರ್ಣಿ, ಗಂಗಾಧರ ಮಾಗನೂರ, ಗಂಗಾಧರ ಮಲೆಬೆನ್ನೂರ, ರಾಜು ಲಮಾಣಿ ಮೊದಲಾದವರು ಹಾಜರಿದ್ದರು.
ಇಂದು ಅಭಿಮಾನಿಗಳ ಸಭೆ
ಹಿರೇಕೆರೂರು: ತಾಲೂಕಿನ ರಟ್ಟೀಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ, ಜಿಪಂ ಮಾಜಿ ಸದಸ್ಯ ಪಿ.ಡಿ. ಬಸನಗೌಡರ ತಮ್ಮ ಅಭಿಮಾನಿಗಳ ಹಾಗೂ ಹಿತೈಷಿಗಳ ಸಭೆಯನ್ನು ಏ. 16ರ ಬೆಳಗ್ಗೆ 11ಗಂಟೆಗೆ ತಮ್ಮ ತೋಟದಲ್ಲಿ ಕರೆಯಲಾಗಿದ್ದು, ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.
ಚುನಾವಣಾಧಿಕಾರಿಗಳ ಕಚೇರಿಗೆ ಸೀಮಿತ ಪ್ರವೇಶ
ಹಾವೇರಿ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗಾಗಿ ಚುನಾವಣಾಧಿಕಾರಿಗಳ ಕೊಠಡಿಗೆ ಆಗಮಿಸಿದ ಸಮಯದಲ್ಲಿ ಅಭ್ಯರ್ಥಿ ಸೇರಿದಂತೆ ಐವರಿಗೆ ಮಾತ್ರ ಪ್ರವೇಶವಿದೆ. ಆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು, ಛಾಯಾಗ್ರಾಹಕರಿಗೆ ಕೊಠಡಿಯೊಳಗೆ ಪ್ರವೇಶವಿಲ್ಲ. ಈ ನಿಬಂಧನೆಗಳನ್ನು ಚುನಾವಣಾಧಿಕಾರಿಗಳ ಕೈಪಿಡಿಯಲ್ಲಿ ಸ್ಪಷ್ಟಪಡಿಸಿದೆ. ಚುನಾವಣಾಧಿಕಾರಿಗಳು ಈ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕೆಂದು ಚುನಾವಣಾ ಆಯೋಗ ನಿರ್ದೇಶಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ. ಚುನಾವಣಾಧಿಕಾರಿಗಳು ಅನುಮತಿಸಿದಲ್ಲಿ ಮಾತ್ರ ಅಭ್ಯರ್ಥಿಯ ಛಾಯಾಚಿತ್ರವನ್ನು ಚುನಾವಣಾಧಿಕಾರಿಗಳ ಕೊಠಡಿ ಹೊರಗಡೆ ತೆಗೆಯಬಹುದು ಎಂದು ತಿಳಿಸಿರುವ ಜಿಲ್ಲಾಧಿಕಾರಿ, ಅಗತ್ಯವೆನಿಸಿದಲ್ಲಿ ಅಧಿಕೃತವಾಗಿ ನೇಮಿಸಲ್ಪಟ್ಟ ಛಾಯಾಗ್ರಾಹಕರು ಛಾಯಾಚಿತ್ರ ಇಲ್ಲವೇ ವಿಡಿಯೋ ಕ್ಲಿಪ್ಪಿಂಗ್ ನೀಡುವರೆಂದು ಸ್ಪಷ್ಟಪಡಿಸಿದ್ದಾರೆ.
ಖಾದ್ರಿ ನಾಮಪತ್ರ ಸಲ್ಲಿಕೆ
ಶಿಗ್ಗಾಂವಿ: ಸೋಮವಾರ ಪಟ್ಟಣದ ಪುರಸಭೆ ವೃತ್ತ, ಹೊಸ ಬಸ್ ನಿಲ್ದಾಣದ ಮೂಲಕ ಬೆಂಬಲಿಗರು, ಸಾರ್ವಜನಿಕರೊಂದಿಗೆ ಮಾಜಿ ಶಾಸಕ ಅಜ್ಜಂಪ್ಪೀರ ಖಾದ್ರಿ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಎಮ್.ಎನ್. ವೆಂಕೋಜಿ, ನಾಗಪ್ಪ ತಿಪ್ಪಕ್ಕನವರ, ಹನುಮರಡ್ಡಿ ನಡುವಿನಮನಿ, ಎಸ್.ಎಫ್. ಮಣಕಟ್ಟಿ, ಎನ್.ಸಿ. ಪಾಟೀಲ್, ಪ್ರದೀಪ್ ಗಿರಡ್ಡಿ, ರಾಮಣ್ಣ ರಾಣೋಜಿ, ಮಜೀದ ಮಾಳಗಿಮನಿ, ಗುಡ್ಡಪ್ಪ ಜಲ್ದಿ, ಚಂದ್ರಣ್ಣ ನಡುವಿನಮನಿ, ಸುಧೀರ ಲಮಾಣಿ, ಪ್ರಕಾಶ ಹಾದಿಮನಿ, ಶಿವಾನಂದ ರಾಮಗೇರಿ, ವಿ.ವೈ. ಪಾಟೀಲ್, ಎಸ್.ವೈ. ಪಾಟೀಲ್ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

