ಕೇಂದ್ರದಿಂದ ಜನಸಾಮಾನ್ಯರು, ರೈತರಿಗೆ ಮೋಸ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 16
ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಾಗದೇ ಸಾಮಾನ್ಯ ಜನರಿಗೆ ಹಾಗೂ ಕೃಷಿ ಉಪಕರಣಗಳಿಗೆ ಸಹಾಯಧನ ವಿತರಿಸದೇ ರೈತರಿಗೆ ಮೋಸ ಮಾಡಿದೆ ಎಂದು ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ಮಂಗಳವಾರ ಬ್ಯಾಡಗಿ ಮತಕ್ಷೇತ್ರದ ಕಬ್ಬೂರು, ಹೊಸೂರು, ಬೆಂಚಳ್ಳಿ ಗ್ರಾಮಗಳಲ್ಲಿ ಮತ ಯಾಚನೆ ನಡೆಸಿ ಬಳಿಕ ಮಾತನಾಡಿದರು. ಬಿಜೆಪಿ ಸರ್ಕಾರ ಮೊದಲ ಬಾರಿಗೆ ರೈತರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ದೇಶದ ಅನ್ನದಾತನ ಕೈಹಿಡಿದಿದೆ. ಆದರೆ, ಕೇಂದ್ರದಲ್ಲಿನ ಕೇಂದ್ರ ಸರ್ಕಾರದ ತಪ್ಪು ಕೃಷಿ ನೀತಿಯಿಂದಾಗಿ ಇಂದು ರೈತ ಆತ್ಮಹತ್ಯೆ ಪ್ರಯತ್ನಕ್ಕೆ ಮುಂದಾಗಿದ್ದು ವಿಷಾದನೀಯ ಎಂದರು.
ರಾಜ್ಯದ 17 ಲಕ್ಷ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಿದ್ದಲ್ಲದೇ, ಸುವರ್ಣಭೂಮಿ ಯೋಜನೆಯಡಿ ಪ್ರತಿ ಕೃಷಿಕರನಿಗೆ ರು. 10 ಸಾವಿರ ಸಹಾಯಧನ ವಿತರಿಸ್ಟಿ ಹೆಗ್ಗಳಿಕೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಬಹುತೇಕ ರೈತಪರ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಜಾರಿಗೊಳಿಸಿದೆ ಎಂದರು. ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದ ಶೇ. 80ರಷ್ಟು ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಬಿಜೆಪಿಯ ಜನಪ್ರಿಯ ಕಾರ್ಯಕ್ರಮಗಳಿಂದ ಮತದಾರರು ಈ ಬಾರಿ ಪುನಃ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ, ಕಳೆದ 60 ವರ್ಷಗಳಿಂದ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳು ಅಭಿವೃದ್ಧಿ ನಿರ್ಲಕ್ಷ್ಯ ಮಾಡಿವೆ ಎಂದರು.
ಮೋಸ ಮಾಡಿದರಿಗೆ ಪಾಠ ಕಲಿಸಿ
ಬಿಜೆಪಿಯಲ್ಲಿದ್ದುಕೊಂಡು ಪಕ್ಷದ ಚಿಹ್ನೆ ಬಳಸಿ ಸಾಕಷ್ಟು ಲಾಭ ಪಡೆದ ಕೆಲವರು ಇದೀಗ ಅಧಿಕಾರದಾಸೆಗಾಗಿ ಪಕ್ಷ ತೊರೆದಿದ್ದಾರೆ. ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸುವ ಮೂಲಕ ಎಚ್ಚರ ಮೂಡಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಣ್ಣ ಉಕ್ಕುಂದ, ತಾಲೂಕು ಘಟಕದ ಅಧ್ಯಕ್ಷ ಚಂದ್ರಪ್ಪ ಮುಚ್ಚಟ್ಟಿ, ಎಪಿಎಂಸಿ ಸದಸ್ಯ ಶಂಕರಗೌಡ ಪಾಟೀಲ, ನಿಂಗಪ್ಪ ಮೋಟೆಬೆನ್ನೂರು. ಸಿ.ಎಸ್. ಹಿರೇಮಠ, ಉಮೇಶ ಕಮ್ಮಾರ, ಗಣೇಶ ಬಂಕಾಪುರ, ಬಸಣ್ಣ ದೇವಿಹೊಸೂರು, ರಿಯಾಜ್ ಅಲ್ಲಿಗೌಡ, ಶಂಭಣ್ಣ ಮತ್ತೀಹಳ್ಳಿ, ಸಂಜೀವ ದಿಡೆ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

