ಹಾವೇರಿ

ಈ ಬಾರಿಯೂ ಬಿಎಸ್‌ವೈ ನೇತೃತ್ವದ ಸರ್ಕಾರ

Published On :

ಬ್ಯಾಡಗಿ: ಕೆಜೆಪಿ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬ್ಯಾಂಕ್ ತೆರೆಯುವ ಮೂಲಕ ಆರ್ಥಿಕವಾಗಿ ಸದೃಢಗೊಳ್ಳಲು ಚಿಂತನೆ ನಡೆಸಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ಈ ಬಾರಿ ರಾಜ್ಯದಲ್ಲಿ ಸರ್ಕಾರ ರಚಿಸಲಿದ್ದಾರೆ ಎಂದು ಹೇಮಲತಾ ಸಜ್ಜನರ ಹೇಳಿದರು.
ಬುಧವಾರ ಪಟ್ಟಣದ ಕೊಳೂರು ಕ್ಯಾಂಪ್‌ನಲ್ಲಿ ಪತಿ ಶಿವರಾಜ ಸಜ್ಜನರ ಪರ ಮತಯಾಚನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹಿಳೆಯರ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾರಿಗೊಳಿಸಿದ ಯೋಜನೆಗಳು ಸ್ವಾವಲಂಬಿಯತ್ತ ಯಶಸ್ವಿ ಜೀವನ ಸಾಗಿಸುವಲ್ಲಿ ಅನುಕೂಲವಾಗಿದ್ದು, ಹೀಗಾಗಿ ಮಹಿಳೆಯರು ಕೆಜೆಪಿಯತ್ತ ತಮ್ಮ ಒಲವು ತೋರುತ್ತಿದ್ದಾರೆ.
ಭಾಗ್ಯಲಕ್ಷ್ಮೀ ಯೋಜನೆ, ಸ್ತ್ರೀ-ಶಕ್ತಿ ಸಂಘಗಳಿಗೆ ಸುತ್ತು ನಿಧಿ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಸೇರಿ ಬಹುತೇಕ ಯೋಜನೆಗಳನ್ನು ಜಾರಿಗೊಳಿಸಿದ ಯಡಿಯೂರಪ್ಪ ಜನಪರ ಕಾರ್ಯಗಳ ಮೂಲಕ ಉತ್ತಮ ಆಡಳಿತ ನೀಡಿದ್ದಾರೆ ಎಂದರು. ಕೆಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮೂಲಕ ಎರಡು ಸಾವಿರ ಕೋಟಿ ಕಾಯ್ದಿರಿಸಲಾಗುವುದು ಎಂದರು.
ಪಟ್ಟಣದ ಅಭಿವೃದ್ದಿ ಸೇರಿದಂತೆ ಸಾಕಷ್ಟು ಯೋಜನೆಗಳಿಗೆ ಹಿಂದಿನ ಶಾಸಕರು ಸಾಕಷ್ಟು ಅನುದಾನ ಒದಗಿಸಿದ್ದಾರೆ. ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸುಧಾ ಕಳ್ಳಿಹಾಳ, ರತ್ಮಮ್ಮ ಬೂದಿಹಾಳಮಠ, ರೋಹಿಣಿ ಹುಣಶೀ ಮರದ ಕೆಜೆಪಿ ಮುಖಂಡರಾದ ಗಂಗಣ್ಣ ಎಲಿ, ಬಾಬುಸಾಬ ಬಡಿಗೇರ, ಪರಶುರಾಮ ಉಜ್ಜನಿಕೊಪ್ಪ, ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.