ಹಣ, ವಸ್ತುರೂಪದ ಲಂಚಕ್ಕೆ ಶಿಕ್ಷೆ: ಡಿಸಿ
ಹಾವೇರಿ: ಪ್ರಸಕ್ತ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಣ, ಹೆಂಡ, ಉಡುಗೊರೆ, ವಸ್ತುಗಳು ಹಾಗೂ ಉಚಿತ ಆಹಾರ ಪದಾರ್ಥಗಳನ್ನು ನೀಡುವ ಇಲ್ಲವೇ ಹಂಚುವಂತಹ ಆಮಿಷಗಳನ್ನು ಲಂಚ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಲಂಚ ಕೊಡುವ ಅಥವಾ ತೆಗೆದುಕೊಳ್ಳುವ ವ್ಯಕ್ತಿಗಳು ದಂಡ ಹಾಗೂ ಒಂದು ವರ್ಷದವರೆಗಿನ ಜೈಲು ಶಿಕ್ಷೆಗೆ ಒಳಗಾಗುವರು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಎಚ್ಚರಿಸಿದ್ದಾರೆ. ಮತದಾರರಿಗೆ ಈ ರೀತಿಯ ಆಮಿಷ ಒಡ್ಡುವ ಚಟುವಟಿಕೆಯನ್ನು ತಡೆ ಹಿಡಿಯಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಿಗಾವಹಿಸಲು ತಂಡಗಳನ್ನು ರಚಿಸಲಾಗಿದೆ. ಇಂತಹ ಲಂಚ ಪ್ರಕರಣಗಳು ಸಾರ್ವಜನಿಕರ ಗಮನಕ್ಕೆ ಬಂದ ಕೂಡಲೇ ಹಾವೇರಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ದೂರು ನಿರ್ವಹಣಾ ಕೋಶಕ್ಕೆ ದೂರವಾಣಿ ಸಂಖ್ಯೆ-08375-249041, 249051 ಹಾಗೂ 249061ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಜಿಲ್ಲಾ ಚನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬಕುಮಾರ ವಿನಂತಿಸಿದ್ದಾರೆ.
ಉಂಗುರ ಬೆರಳಿಗೆ ಶಾಯಿ
ಹಾವೇರಿ: ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರಿಗೆ ಈ ಬಾರಿ ಎಡಗೈನ ತೋರು ಬೆರಳು ಬದಲಿಗೆ, ಉಂಗುರ ಬೆರಳಿಗೆ ಶಾಯಿ (ಮಸಿ) ಹಾಕಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ರಾಜ್ಯದಲ್ಲಿನ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾ. 7ರಂದು ನಡೆದ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗಿತ್ತು. ಅದು ಇನ್ನೂ ಮಾಸದ ಕಾರಣ, ಈ ಬಾರಿ ಉಂಗುರ ಬೆರಳಿಗೆ ಶಾಯಿ ಹಾಕಲು ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ವೆಚ್ಚ ವೀಕ್ಷಕರು
ಹಾವೇರಿ: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿಸಿದ ಚುನಾವಣಾ ವೆಚ್ಚ ವೀಕ್ಷಕರು ಹಾಗೂ ಲೈಜನ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. 82- ಹಾನಗಲ್ಲ ಕ್ಷೇತ್ರಕ್ಕೆ ಅನೀಲ್ ಢಾಕಾ(ಮೊ- 9480673234). ಲೈಜನ್ ಅಧಿಕಾರಿ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ ಆನಂದ ಪಾಲೇಕರ(ಮೊ- 99800 99150), 83-ಶಿಗ್ಗಾಂವಿ ಕ್ಷೇತ್ರಕ್ಕೆ ಡಾ ವೇದಂಶು ತ್ರಿಪಾಠಿ (ಮೊ- 9481248234), ಲೈಜನ್ ಅಧಿಕಾರಿ ರಾಣಿಬೆನ್ನೂರು ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತ ಬಿ.ವಿ. ಜಗದೀಶ (ಮೊ- 77600 75916), 84- ಹಾವೇರಿ ಹಾಗೂ 85- ಬ್ಯಾಡಗಿ ಕ್ಷೇತ್ರಕ್ಕೆ ರಿಷಿ ಗೋಯಲ್(ಮೊ- 9481247234), ಲೈಜನ್ ಅಧಿಕಾರಿ ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಪುತ್ರಪ್ಪ (ಮೊ-98801 63211), 86-ಹಿರೇಕೆರೂರು ಹಾಗೂ 87-ರಾಣಿಬೆನ್ನೂರು ಕ್ಷೇತ್ರಕ್ಕೆ ಅಭಿನವ್ ಚಿಂಚೋಲಿ (ಮೊ-9481347234) ಹಾಗೂ ಲೈಜನ್ ಅಧಿಕಾರಿ ಜಿಲ್ಲಾ ಪರಿಶಿಷ್ಟ, ವರ್ಗ ಅಭಿವೃದ್ಧಿ ಅಧಿಕಾರಿ ಡಾ ರಾಜು ಕೂಲೇರ (ಮೊ- 97422 30268) ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮಂಜುನಾಥ ನಾಮಪತ್ರ
ರಾಣಿಬೆನ್ನೂರು: ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದ ಕೆಇಬಿ ಗಣೇಶ ದೇವಸ್ಧಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸಿ.ಸಿ. ಸಣ್ಣಗೌಡ್ರ, ಬಿ.ಬಿ. ಸಕ್ರಿ, ಜಿ.ಜಿ. ಹೊಟ್ಟಿಗೌಡ್ರ, ಅಶೋಕ ಗಂಗನಗೌಡ್ರ, ಎಫ್.ಬಿ. ಹೊನ್ನಳ್ಳಿ, ರವಿಕುಮಾರ ಬತ್ತದ, ಚನ್ನಮ್ಮ ಗುರುಪಾದದೇವರಮಠ, ಸುರೇಶ ಬಾಣಾವರ, ರಾಜು ಚಲವಾದಿ, ಅಪಾರ ಬೆಂಬಲಿಗರು ಮೆರವಣಿಗೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

