ಹಾವೇರಿ: 6 ಕ್ಷೇತ್ರಗಳಲ್ಲಿ 71 ಅಭ್ಯರ್ಥಿಗಳು
ಹಾವೇರಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಅಂತಿಮವಾಗಿ 71 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ.
ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದ ಶನಿವಾರ (ಏ. 20)ರಂದು ಸಿಂಧುವಾಗಿದ್ದ ಒಟ್ಟು 98 ನಾಮಪತ್ರಗಳಲ್ಲಿ ಏ. 19 ಮತ್ತು 20ರಂದು ಒಟ್ಟು 27 ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲಾಗಿದ್ದು, 71 ಅಭ್ಯರ್ಥಿಗಳು ಅಂತಿಮವಾಗಿ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಸ್ಪರ್ಧೆಯಲ್ಲಿ ಉಳಿದಿರುವ 71 ಅಭ್ಯರ್ಥಿಗಳ ಪೈಕಿ 70 ಪುರುಷ ಹಾಗೂ ಶಿಗ್ಗಾಂವಿ ಕ್ಷೇತ್ರದಲ್ಲಿ ಒಬ್ಬ ಮಹಿಳಾ ಅಭ್ಯರ್ಥಿ ಇದ್ದಾರೆ.
ಪಕ್ಷವಾರು ವಿವರ ಇಂತಿದೆ: ಬಹುಜನ ಸಮಾಜ ಪಕ್ಷ-6, ಭಾರತೀಯ ಜನತಾ ಪಕ್ಷ- 6, ಕಾಂಗ್ರೆಸ್ ಪಕ್ಷ-6, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)-1, ಜನತಾದಳ (ಜಾತ್ಯತೀತ)-6,
ನೋಂದಾಯಿತ ರಾಜಕೀಯ ಪಕ್ಷಗಳಿಂದ -17 ಮತ್ತು 29 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಕ್ಷೇತ್ರವಾರು ಅಭ್ಯರ್ಥಿಗಳ ವಿವರ
ಹಾನಗಲ್ಲ: (7) ಬಿಎಸ್‌ಪಿ-1, ಬಿಜೆಪಿ-1, ಕಾಂಗ್ರೆಸ್-1, ಜೆಡಿಎಸ್-1, ಕೆಜೆಪಿ-1 ಹಾಗೂ ಪಕ್ಷೇತರರು-2.
ಶಿಗ್ಗಾಂವಿ: (11) ಬಿಎಸ್‌ಪಿ-1, ಬಿಜೆಪಿ-1, ಕಾಂಗ್ರೆಸ್-1, ಜೆಡಿಎಸ್-1, ಎನ್‌ಸಿಪಿ-1, ಸಂಯುಕ್ತ ಜನತಾದಳ-1, ರಾಣಿ ಚನ್ನಮ್ಮ ಪಕ್ಷ-1, ಕೆಜೆಪಿ-1 ಹಾಗೂ ಪಕ್ಷೇತರರು-3.
ಹಾವೇರಿ (ಪ.ಜಾ.): (10) ಬಿಎಸ್‌ಪಿ-1, ಬಿಜೆಪಿ-1, ಕಾಂಗ್ರೆಸ್-1, ಜೆಡಿಎಸ್-1, ಕೆಜೆಪಿ-1, ಬಿಎಸ್‌ಆರ್ ಕಾಂಗ್ರೆಸ್ ಪಕ್ಷ-1, ಸಂಯುಕ್ತ ಜನತಾದಳ-1, ಪಕ್ಷೇತರರು-3.
ಬ್ಯಾಡಗಿ: (13) ಬಿಎಸ್‌ಪಿ-1, ಬಿಜೆಪಿ-1, ಕಾಂಗ್ರೆಸ್-1, ಜೆಡಿಎಸ್-1, ಬಿಎಸ್‌ಆರ್ ಕಾಂಗ್ರೆಸ್ ಪಕ್ಷ-1, ಕೆಜೆಪಿ-1, ಜನತಾ ಪಕ್ಷ-1, ಪಕ್ಷೇತರರು-6.
ಹಿರೇಕೆರೂರು: (16) ಬಿಎಸ್‌ಪಿ-1, ಬಿಜೆಪಿ-1, ಕಾಂಗ್ರೆಸ್-1, ಜೆಡಿಎಸ್-1, ಬಿಎಸ್‌ಆರ್ ಕಾಂಗ್ರೆಸ್ ಪಕ್ಷ-1, ಕೆಜೆಪಿ-1, ಲೋಕಸತ್ತಾ ಪಕ್ಷ-1, ಪಕ್ಷೇತರರು-9.
ರಾಣಿಬೆನ್ನೂರು: (14) ಬಿಎಸ್‌ಪಿ-1, ಬಿಜೆಪಿ-1, ಕಾಂಗ್ರೆಸ್-1, ಜೆಡಿಎಸ್-1, ಬಿಎಸ್‌ಆರ್ ಕಾಂಗ್ರೆಸ್ ಪಕ್ಷ-1, ಕೆಜೆಪಿ-1, ಸಮಾಜವಾದಿ ಪಕ್ಷ-1, ಜೆಡಿ(ಯು)-1, ಪಕ್ಷೇತರರು-6 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

