ಹಾವೇರಿ

ಮಹಾವೀರ ಜಯಂತಿ

Published On :

ಶಿಗ್ಗಾಂವಿ: ತಾಲೂಕಿನ ಹೊಸೂರು ಎತ್ತನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಹಾವೀರ ಜಯಂತಿ ಆಚರಿಸಲಾಯಿತು. ಪಾರಸನಾಥ ದಿಗಂಬರ ಜೈನ ಸಮಾಜದವರು ಗ್ರಾಮದ ಪ್ರಮುಖ ಬೀದಿಯಲ್ಲಿ ಮಹಾವೀರ ಭಾವಚಿತ್ರವನ್ನು ಮೆರವಣಿಗೆ ಮಾಡಿದರು. ಜಿನ್ನಪ್ಪ ಧಾರವಾಡ, ಅನಂತಪ್ಪ, ಮಹಾವೀರ ಧಾರವಾಡ, ದೇವರಾಜ ಭದ್ರಾಪುರ, ದೇವಪ್ಪ ಪಾಯಣ್ಣವರ, ಮಂಜುನಾಥ ಕಠಾರಿ ಮುಂತಾದವರು ಪಾಲ್ಗೊಂಡಿದ್ದರು.
ಪತ್ನಿ ಮೇಲೆ ಹಲ್ಲೆ: ಪತಿ ಸೇರಿ 8 ಜನರ ಬಂಧನ
ಶಿಗ್ಗಾಂವಿ:  ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮೊದಲ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಪತಿ ಸೇರಿದಂತೆ ಹಲ್ಲೆಗೆ ಕಾರಣರಾಗಿದ್ದ ಎಂಟು ಜನರನ್ನು ಶಿಗ್ಗಾಂವಿ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಯತ್ನಳ್ಳಿ ಗ್ರಾಮದ ಬಸವರಾಜ ಸವಣೂರ ತನ್ನ ಮೊದಲ ಪತ್ನಿ ಗದಿಗೆವ್ವಳಿಗೆ ಆಸ್ತಿ ನೀಡಲು ನಿರಾಕರಿಸಿದ್ದರಿಂದ ಇಬ್ಬರ ಮಧ್ಯೆ ವಿವಾದ ಉಂಟಾಗಿತ್ತು. ಶಿಗ್ಗಾಂವಿಯ ಸಾಯಿನಗರದಲ್ಲಿ ವಾಸಿಸುವ ಗದಿಗೆವ್ವ ಮತ್ತು ಆಕೆಯ ಇಬ್ಬರು ಸಹೋದರರು ದೂರು ನೀಡಿದ್ದು, ಮಗಳ ಮೇಲೆ ಬಸವರಾಜ ಸವಣೂರ ಎಂಟು ಜನರನ್ನು ಕರೆದೊಯ್ದು ಹಲ್ಲೆ ಮಾಡಿದ್ದಾನೆ ಎಂದು ದೂರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಶಂಭುಲಿಂಗ ಸವಣೂರ, ಶಂಭು ಬೂಶೆಟ್ರ, ಶಂಕರ ಬೂಶೆಟ್ರ, ಹುತ್ತಯ್ಯ ಸವಣೂರ, ಶಕುಂತಲಾ ಸವಣೂರ, ಚನ್ನಪ್ಪ ಸವಣೂರ, ಶಿವರುದ್ರಪ್ಪ ಸವಣೂರ, ಲಕ್ಷ್ಮವ್ವ ಬೂಶೆಟ್ರ ಅವರನ್ನು ಬಂಧಿಸಲಾಗಿದೆ. ಹಲ್ಲೆಯಲ್ಲಿ ಗಾಯಗೊಂಡಿರುವ ಗದಿಗೆವ್ವ ಸವಣೂರ, ಗುರಪ್ಪ ಹುಬ್ಬಳ್ಳಿ, ವೀರಭದ್ರಪ್ಪ, ಸುಧಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಗ್ಗಾವಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.