ನಾಳೆ ಮತದಾರರ ಜಾಗೃತಿ
ಹಾವೇರಿ: ಮತದಾರರ ಜಾಗೃತಿಗಾಗಿ ಚುನಾವಣಾ ಆಯೋಗ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅದರಲ್ಲಿ ಗಾಳಿಯಲ್ಲಿ ಹಾರಾಡುವ ಪ್ಯಾರಾಗ್ಲೈಡರ್ ಮೂಲಕ ಗಮನ ಸೆಳೆಯಲು ಯೋಜಿಸಿದೆ. ಬೆಂಗಳೂರಿನ ಮೇಗಲಾ ಪ್ಯಾರಾಗ್ಲೈಡರ್ ಅಸೋಸಿಯೇಶನ್ ಸಂಸ್ಥೆ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಕಾರ್ಯದಲ್ಲಿ ತೊಡಗಿದ್ದು, ಏ. 30ರಂದು ಹಾವೇರಿಯಲ್ಲಿ ಬೆಳಗ್ಗೆ 8ರಿಂದ 11ರ ವರೆಗೆ ಹಾವೇರಿ ನಗರ ಹಾಗೂ ಸುತ್ತಲಿನ ಪ್ರದೇಶಗಳ ವ್ಯಾಪ್ತಿಯಲ್ಲಿ ಪ್ಯಾರಾಗ್ಲೈಡರ್ ತನ್ನ ಹಾರಾಟ ನಡೆಸಿ, ಮತದಾನದ ಬಗ್ಗೆ ಅರಿವು ಮೂಡಿಸಲು ಜಿಲ್ಲಾಧಿಕಾರಿಗಳ ಸಂದೇಶದ ಭಿತ್ತಿಪತ್ರಗಳನ್ನು ನಗರ ಹಾಗೂ ಸುತ್ತಣ ಗ್ರಾಮಗಳ ಮೇಲೆ ಸುರಿಮಳೆಗೈಯಲಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ. ಪ್ಯಾರಾಗ್ಲೈಡರ್ ಗಾಳಿಯಲ್ಲಿ ತೇಲಿಬರುವದನ್ನು ನೋಡುವುದು ನೋಡುಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಪ್ಯಾರಾಗ್ಲೈಡರ ತಂಡ ಏ. 29ರಂದು ಸಂಜೆ ಹಾವೇರಿಗೆ ಆಗಮಿಸಿ, ಪ್ಯಾರಾಗ್ಲೈಡರ್ ಹಾರಾಟಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡಲಿದೆ. ನಂತರ 30ರಂದು ಬೆಳಗ್ಗೆ 8ಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮತದಾರರ ಜಾಗೃತಿ ಸಮಿತಿ ಅಧ್ಯಕ್ಷರಾದಿಯಾಗಿ ಅಧಿಕಾರಿಗಳು, ಸಾರ್ವಜನಿಕರು ಪ್ಯಾರಾಗ್ಲೈಡರ್ ಹಾರಾಟಕ್ಕೆ ಸಾಕ್ಷಿಯಾಗಲಿದ್ದಾರೆ.
ರೇವಣಸಿದ್ಧೇಶ್ವರ ಜಾತ್ರೆ
ಹಾವೇರಿ: ಇಲ್ಲಿನ ಶ್ರೀ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏ. 29 ಮತ್ತು 30 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏ. 29ರಂದು ಸಂಜೆ ಶ್ರೀ ರೇವಣಸಿದ್ಧೇಶ್ವರನಿಗೆ ಅಕ್ಷತಾರೋಪಣ, ನಂತರ ಝಾಂಜ್ ಮೇಳಗಳೊಂದಿಗೆ ದೇವರ ರಥೋತ್ಸವ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

