ಹಾವೇರಿ

ಮತಗಟ್ಟೆ ನೀಡದಿದ್ರೆ ಮತದಾನ ಬಹಿಷ್ಕಾರ

Published On :

ರಾಣಿಬೆನ್ನೂರು: ಚುನಾವಣೆ ಮೂಲಕ ಮತ ಚಲಾಯಿಸಿ ಪ್ರಜಾಪ್ರತಿನಿಧಿಯನ್ನಾರಿಸುವ ಹಕ್ಕನ್ನು ಪಡೆದಿರುವ ಮತದಾರರ ಅನುಕೂಲಕ್ಕಾಗಿ ಮತಗಟ್ಟೆಯನ್ನು ತೆರೆಯುವ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಮತ್ತು ತಾಲೂಕು ಚುನಾವಣಾಧಿಕಾರಿಗಳು ಮತಗಟ್ಟೆ ವಂಚಿತ ವಿವಿಧ ಗ್ರಾಮಗಳಲ್ಲಿ ಮತಗಟ್ಟೆ ತೆರೆಯದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ತಹಸೀಲ್ದಾರ್ ಕಚೇರಿ ಪಕ್ಕದಲ್ಲಿರುವ ಸಿದ್ದೇಶ್ವರ ದೇವಸ್ಧಾನದ ಹತ್ತಿರ ಸೇರಿದ್ದ ಮತಗಟ್ಟೆ ವಂಚಿತ ಗ್ರಾಮಗಳ ನೂರಾರು ಜನರು ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕಾಗಿ ತಮ್ಮ ಗ್ರಾಮಗಳಲ್ಲಿ ಮತಗಟ್ಟೆ ತೆರೆಯದಿದ್ದಲ್ಲಿ ಮತದಾನ ಬಹಿಷ್ಕರಿಸುವುದಾಗಿ ಘೋಷಣೆಗಳನ್ನು ಕೂಗಿ ತಹಸೀಲ್ದಾರ್ ಕಚೇರಿಗೆ ತೆರಳಿದರು.
ತಹಸೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಂದ್ರಗೌಡ ಪಾಟೀಲ ಮಾತನಾಡಿ, ತಾಲೂಕಿನ ಮಲಕನಹಳ್ಳಿ, ಕೂಸಗಟ್ಟಿ, ಮಾದುರಾಯಪುರ(ನೂಕಾಪುರ ತಾಂಡಾ), ಕೃಷ್ಣಾಪುರ, ಗೋವಿಂದ ಬಡಾವಣೆ, ಹುಲ್ಲತ್ತಿ ತಾಂಡಾ ಹಾಗೂ ಹುವಿನಮರಡಿ ತಾಂಡಾದಲ್ಲಿ 1 ಕ್ಲಾಸ್‌ನಿಂದ 5 ವರ್ಗದವರೆಗೆ ಶಾಲೆ ನಡೆಯುತ್ತಿದ್ದು, 2 ಅಥವಾ 3 ಕೊಠಡಿಗಳನ್ನು ಹೊಂದಿರುವ ಸರ್ಕಾರಿ ಶಾಲಾ ಕಟ್ಟಡ ಮತ್ತು ಪ್ರತಿಯೊಂದು ಗ್ರಾಮಗಳಲ್ಲಿ 200ರಿಂದ 250 ಮತದಾರರಿದ್ದಾರೆ. ಗ್ರಾಮಗಳಲ್ಲೇ ಮತದಾನ ಕೇಂದ್ರದ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.       
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ತಹಸೀಲ್ದಾರ್ ಶಿವಕುಮಾರ, ಮತಗಟ್ಟೆ ವಂಚಿತ ತಾಲೂಕಿನ 8 ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮತಗಟ್ಟೆ ತೆರೆಯಲು ಅನುಮತಿಗಾಗಿ ಡಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು.
ಮತಗಟ್ಟೆ ವಂಚಿತ ಗ್ರಾಮಗಳ ಮುಖಂಡರಾದ ರವಿ ಮಲ್ಲಳ್ಳಿ, ಶಿವಾನಂದ ದೊಡ್ಮನಿ, ಹುಚ್ಚೇಶ್ವರ ಕುಂಬಾರ, ಶಿರಾರಾಜ್ ರಾಣಿಬೆನ್ನೂರು, ಶಿವಪ್ಪ ಜಾನಪ್ಪನವರ, ಹರಿಹರಗೌಡ ಪಾಟೀಲ, ಪುನಿತಕುಮಾರ ಲಕ್ಕಳ್ಳಿ, ಬಸಪ್ಪ ಓಲೇಕಾರ, ಶಿವಾನಂದ ಲಿಂಗದಹಳ್ಳಿ ಉಪಸ್ಧಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.