ಕೆಜೆಪಿಯಿಂದ ಕೈ, ಕಮಲ ವಿಚಲಿತ
ಕನ್ನಡಪ್ರಭ ವಾರ್ತೆ, ಹಾವೇರಿ, ಏ. 28
ಕರ್ನಾಟಕ ಜನತಾ ಪಕ್ಷಕ್ಕೆ ರಾಜ್ಯಾದ್ಯಂತ ವ್ಯಕ್ತವಾಗುತ್ತಿರುವ ಅಭೂತಪೂರ್ವ ಬೆಂಬಲ ನೋಡಿ ವಿಚಲಿತರಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ಸಿಗರು, ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವ ಮೂಲಕ ಮತಯಾಚಿಸುತ್ತಿದ್ದಾರೆ ಎಂದು ಕೆಜೆಪಿ ಅಭ್ಯರ್ಥಿ ನೆಹರು ಓಲೇಕಾರ ಹೇಳಿದರು.
ತಾಲೂಕಿನ ಅಗಡಿ, ತೆರದಹಳ್ಳಿ, ಮೇವುಂಡಿ, ಗುಯಿಲ್ಗೊಂದಿ ಮತ್ತು ನೀರಲಗಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಕೈಗೊಂಡ ನಂತರ ಮಾತನಾಡಿದರು.
ರಾಷ್ಟ್ರೀಯ ಪಕ್ಷಕ್ಕೆ ಲಾಭವಿಲ್ಲ: ಬಿಜೆಪಿ ಹಾಗೂ ಕಾಂಗ್ರೆಸ್ನ ಈ ಪ್ರಕ್ರಿಯೆಯಿಂದ ಕೆಜೆಪಿಗೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲದೇ, ರಾಷ್ಟ್ರೀಯ ನಾಯಕರುಗಳ ಭಾಷಣದಿಂದ ಎರಡು ಪಕ್ಷಗಳಿಗೆ ಹೇಳಿಕೊಳ್ಳುವಂತಹ ಲಾಭ ಆಗುವುದಿಲ್ಲ ಎಂದು ಓಲೇಕಾರ ಅಭಿಪ್ರಾಯಪಟ್ಟರು.
ಅಭಿವೃದ್ಧಿ ಶ್ರೀರಕ್ಷೆ: ರಾಜ್ಯದಲ್ಲಿ ಕೆಜೆಪಿಗೆ ಪೈಪೋಟಿ ನೀಡುವ ಪಕ್ಷಗಳಿಲ್ಲ. ಬಿಎಸ್ವೈ ಸಿಎಂ ಆಗಿದ್ದ ಸಂದರ್ಭದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಈಗಲೂ ಜನರ ಮನದಲ್ಲಿವೆ. ಇದುವೇ ಕೆಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಪ್ರಸಕ್ತ ಚುನಾವಣೆಯಲ್ಲಿ ಬಹುಮತ ಗಳಿಸಿ ಕೆಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನೂ ಓಲೇಕಾರ ವ್ಯಕ್ತಪಡಿಸಿದರು.
ಬಿಜೆಪಿಯ ಸಣ್ಣಹನುಮಪ್ಪ ಮಲ್ಲಾಡದ, ಕಾಂಗ್ರೆಸ್ ಮುಖಂಡ ಸಿ.ಡಿ. ಬಡಲಿಂಗನವರ ಸೇರಿದಂತೆ ನೂರಾರು ಕಾರ್ಯಕರ್ತರು ಕೆಜೆಪಿಗೆ ಸೇರ್ಪಡೆಯಾದರು.
ಕೆಜೆಪಿ ರಾಜ್ಯ ಕಾರ್ಯಕಾಣಿ ಸದಸ್ಯೆ ಅನಿತಾ ಸುಬ್ರಹ್ಮಣ್ಯ, ಜಿಲ್ಲಾ ವಕ್ತಾರ ಸುರೇಶ ಹೊಸಮನಿ, ತಾಲೂಕು ಘಟಕದ ಅಧ್ಯಕ್ಷ ಕೆ.ಸಿ. ಕೋರಿ, ಮಲ್ಲಪ್ಪ ಬಣಕಾರ, ಗುಡ್ಡಪ್ಪ ಅಂಬಿಗೇರ, ಮಹಾದೇವಪ್ಪ ಡಂಕೆಪ್ಪನವರ, ಕಬೀರ್ ಮಾಡಳ್ಳಿಕರ, ಈರಣ್ಣ ಇಚ್ಚಂಗಿ, ರುದ್ರಗೌಡ ಪಾಟೀಲ, ಅಪ್ಪಣ್ಣ ಇಚ್ಚಂಗಿ, ರಾಜನಗೌಡ ಪಾಟೀಲ, ಶಿವು ಅಂಬಿಗೇರ, ಚಿನ್ನಪ್ಪ ಬಣಕಾರ, ವಿ.ವಿ. ಇಚ್ಚಂಗಿ, ವೆಂಕಣ್ಣ ಚಪ್ಪರದ, ಅಶೋಕರಡ್ಡಿ ಮರಚರಡ್ಡೇರ, ನಿಂಗನಗೌಡ ಹೊನ್ನನಗೌಡ್ರ, ರುದ್ರಯ್ಯ ಹಿರೇಮಠ, ಫಕ್ಕಿರಪ್ಪ ಹರಿಜನ, ಪರಮೇಶಪ್ಪ ಕುರವತ್ತಿಗೌಡ್ರ, ವಸಂತ ಕಳಸಣ್ಣನವರ, ಹಾಲೇಶಪ್ಪ ಮುದ್ದಿ, ನೂರಾರು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

