ಶಿಗ್ಗಾಂವಿಗಿಂದು ಬಿ.ಎಸ್. ಯಡಿಯೂರಪ್ಪ ಭೇಟಿ
ಶಿಗ್ಗಾಂವಿ: ಶಿಗ್ಗಾವಿ-ಸವಣೂರು ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಾಪುಗೌಡ ಪಾಟೀಲ ಪರ ಮತ ಯಾಚನೆ ಮಾಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏ. 29ರಂದು ಮಧ್ಯಾಹ್ನ 2.30ಕ್ಕೆ ಪಟ್ಟಣದ ಸಂತೆ ಮೈದಾನಕ್ಕೆ ಆಗಮಿಸುವರು. ಕೆಜೆಪಿ ಮುಖಂಡರಾದ ಜಬ್ಬರಖಾನ್ ಹೊನ್ನಾಳಿ, ಸಿ.ಎಂ. ಉದಾಸಿ, ಶಿವರಾಜ ಸಜ್ಜನರ, ನೆಹರು ಓಲೇಕಾರ, ಸುರೇಶಗೌಡ ಪಾಟೀಲ, ಯು.ಬಿ. ಬಣಕಾರ ಇನ್ನಿತರ ಮುಖಂಡರು ಆಗಮಿಸುವರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ತಾಲೂಕು ಕೆಜೆಪಿ ಅಧ್ಯಕ್ಷ ಟಾಕನಗೌಡ್ರ ಪಾಟೀಲ ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಪಕ್ಷ ಮುಖಂಡರಿಂದ ಪೊಳ್ಳು ಭರವಸೆ: ಬಳ್ಳಾರಿ
ಬ್ಯಾಡಗಿ: ಮುಂದಿನ 20 ವರ್ಷ ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸಲಿದೆ. ಹೀಗಾಗಿ ರಾಜಕೀಯ ಸನ್ಯಾಸ ಅನುಭವಿಸುವ ಭಯದಲ್ಲಿರುವ ವಿಪಕ್ಷಗಳ ಮುಖಂಡರು ಪೊಳ್ಳು ಭರವಸೆ ನೀಡುತ್ತಿರುವುದಾಗಿ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಡಗಿ ಮತಕ್ಷೇತ್ರದ ದೇವಿಹೊಸೂರು ಗ್ರಾಮದಲ್ಲಿ ಚುನಾವಣೆ ಪ್ರಚಾರ ನಡೆಸಿ ಬಳಿಕ ಮಾತನಾಡಿದರು. ಈವರೆಗೂ ಭರವಸೆಗಳ ಮೇಲೆ ಆಡಳಿತ ನಡೆಸಿದ ಕಾಂಗ್ರೆಸ್ ಕಾರ್ಯವೈಖರಿಯಿಂದ ರಾಜ್ಯದ ಮತದಾರರಿಗೆ ಭ್ರಮನಿರಸನವಾಗಿದ್ದು, ಮತದಾರರು ವಿಶ್ವಾಸ ಕಳೆದುಕೊಂಡಿದ್ದಾರೆ. ಆದರೆ, ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದರು. ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್‌ನಿಂದ ರಾಜ್ಯದ ಜನರು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ದೇಶದೆಲ್ಲೆಡೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಒಂದು ರಾಜಕೀಯ ಶಕ್ತಿಯಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ನಡೆಸಿದ ದುರಾಡಳಿತ ಹಾಗೂ ಪೊಳ್ಳು ಭರವಸೆಗಳಿಂದ ರಾಜ್ಯದ ಜನತೆ ಬಡತನದಿಂದ ಮುಕ್ತವಾಗಲು ಸಾಧ್ಯವಾಗಿಲ್ಲ. ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ ಇನ್ನಿತರ ಮೂಲಸೌಕರ್ಯಗಳನ್ನು ನೀಡದಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳಲು ನೈತಿಕ ಹಕ್ಕಿಲ್ಲ ಎಂದರು. ಜನರ ಬಳಿ ಹೇಳಿಕೊಳ್ಳಲು ಅಭಿವೃದ್ಧಿ ಕಾರ್ಯಗಳನ್ನು ಮಾಡದಿರುವ ಕಾಂಗ್ರೆಸ್ ಜಾತಿ ಆಧಾರಿತ ರಾಜಕಾರಣ ನಡೆಸುತ್ತಿದ್ದು, ಪಕ್ಷದ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕುರುಬ ಸಮುದಾಯದ ಆರಾದ್ಯದೈವ ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ಅಭಿವೃದ್ಧಿಪಡಿಸದೇ ಕೇವಲ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳುತ್ತಿದೆ ಎಂದರು. ಚಂದ್ರಪ್ಪ ಮುಚ್ಚಟ್ಟಿ, ಶಂಕರಗೌಡ ಪಾಟೀಲ, ವೀರಭದ್ರಪ್ಪ ಹೊಂಬರಡಿ, ಬಸನಗೌಡ ಗ್ಯಾರನಗೌಡ್ರ, ನಿಂಗಪ್ಪ ನಿಂಬಕ್ಕನವರ, ಈಶ್ವರ ಪಾಟೀಲ, ಜಯಪ್ಪ ಗುಂಡೇನಹಳ್ಳಿ ಇನ್ನಿತರರು ಇದ್ದರು.
ಬನ್ನಿಕೋಡ ಪ್ರಚಾರ
ಹಿರೇಕೆರೂರು: ತಾಲೂಕಿನ ಚಿಕ್ಕಬೂದಿಹಾಳ, ರಟ್ಟೀಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಎಚ್. ಬನ್ನಿಕೋಡ ಮತ ಯಾಚಿಸಿದರು. ಅಶೋಕ ಪಾಟೀಲ, ಎಸ್.ಎಚ್. ಕೋಣನವರ, ನಾರಾಣಪ್ಪ ಗೌರಕ್ಕನವರ, ಎಲ್.ವಿ. ಸಂಕೋಳ್ಳಿ, ಕೆಂಚಪ್ಪ ಕುರಿಯವರ, ಇಬ್ರಾಹಿಂಸಾಬ್ ಮುಲ್ಲಾ, ಬಿ.ಆರ್. ಪುಟ್ಟಣ್ಣನವರ, ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

