ಪ್ರತಿಭೆ, ಶ್ರದ್ಧೆ, ಶ್ರಮ ಸದ್ಬಳಕೆಯಾಗಲಿ
ಶಿಗ್ಗಾಂವಿ: ಬದುಕಿನ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಯುವಕರು ಕ್ರಿಯಾಶೀಲತೆ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ತಮ್ಮ ಪ್ರತಿಭೆ, ಶ್ರದ್ಧೆ, ಶ್ರಮ ಸದುಪಯೋಗ ಮಾಡಿಕೊಳ್ಳಬೇಕು ಎಂದು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ತಿಳಿಸಿದರು.
ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭವಿಷ್ಯದ ದಿನಗಳು ಸ್ಪರ್ಧಾತ್ಮಕವಾಗಿವೆ. ದುಡಿಮೆಗೆ ತಕ್ಕ ಪ್ರತಿಫಲ ನೀಡುವ ಕಾಲ ಈಗ ಆರಂಭವಾಗಿದೆ. ಯುವಕರು ಸರ್ಕಾರದ ಉದ್ಯೋಗವನ್ನು ನೆಚ್ಚಿ ಕೂಡ್ರುವ ಸಂದರ್ಭವಿದಲ್ಲ. ಆದರೆ ದುಡಿಯುವ ಪ್ರತಿಭಾವಂತ, ಶ್ರಮವಂತರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳು ಖಾಸಗಿ ವಲಯದಲ್ಲಿವೆ. ನಾವು ಪಡೆದ ಶಿಕ್ಷಣವನ್ನಾಧರಿಸಿಯೇ ಉದ್ಯೋಗ ಸಿಗುವ ಸಾಧ್ಯತೆಗಳೂ ಈಗ ವಿರಳ. ಬದುಕಿಗಾಗಿ ಅಗತ್ಯವಿರುವ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವುದು ಇಂದಿನ ಅಗತ್ಯ ಎಂದರು.
ದೇವರು ಧರ್ಮದ ನಂಬುಗೆ ಈಗ ಕ್ಷೀಣಿಸುತ್ತಿದೆ. ಎಲ್ಲೆಡೆ ತಾಂಡವವಾಡುವ ಭ್ರಷ್ಟಾಚಾರ ಧಾರ್ಮಿಕ ಕ್ಷೇತ್ರವನ್ನು ಆವರಿಸಿದೆ. ಜನರನ್ನು ಕಾಯುವ ಧರ್ಮವೇ ಜನರಿಂದ ದೂರವಾಗುತ್ತಿದೆ. ಆದರೆ ನಂಬಿಕೆ ವಿಶ್ವಾಸಗಳು ಎಲ್ಲ ಸಂದರ್ಭಗಳಲ್ಲೂ ನಿರಾಸೆ ತರಲು ಸಾಧ್ಯವಿಲ್ಲ. ನಮ್ಮ ನಿಷ್ಕಲ್ಮಶ ನಂಬುಗೆ ಹುಸಿಯಾಗುವುದೂ ಇಲ್ಲ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ನಾಳೆಗಾಗಿ ನಮ್ಮ ದಾರಿ ಸರಿಯಾಗಿರಬೇಕು ಎಂದರು.
ಮಂಗಳೂರಿನ ಸ್ಮಾಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನ ಕಾರ್ಯನಿರ್ವಾಹಕ ಅಧಿಕಾರಿ ಕೆ. ಪುಷ್ಪರಾಜ್ ಭಾರತೀಯರಲ್ಲಿರುವ ವಿದ್ಯೆ ಆಲಸ್ಯದಿಂದಾಗಿ ಪೋಲಾಗುತ್ತಿದೆ. ಸಾಮಾಜಿಕ ಜೀವನ ಮಾನವೀಯ ಮೌಲ್ಯಗಳನ್ನು ತ್ಯಜಿಸುತ್ತಿದೆ. ಇಂಥದರಲ್ಲಿಯೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಸೃಜನಶೀಲವಾಗಿ ನಮ್ಮ ಬದುಕು ರೂಪಿಸಿಕೊಳ್ಳುವ ಅಗತ್ಯವಿದೆ. ಬದುಕಿಗೆ ಸುಂದರ ಕನಸುಗಳಿರಬೇಕು. ಅದರ ಸಾಕಾರಕ್ಕೆ ಶ್ರಮ ಬೇಕು. ಆದರ್ಶ ವ್ಯಕ್ತಿತ್ವ ನಮ್ಮದಾಗಬೇಕು. ಉಪಕರಿಸಿದವರನ್ನು ಮರೆಯದಿರಿ, ಉಪಕಾರ ಮಾಡುವ ಮನೋಬಲ, ಆಸಕ್ತಿ ನಿಮ್ಮದಾಗಿರಲಿ ಎಂದರು.
ಉಪನ್ಯಾಸಕರಾದ ಕೆ. ಬಸಣ್ಣ, ಕೆ.ಎಸ್. ಬರದೆಲಿ, ಎಂ.ಎಸ್. ಕುರಂದವಾಡ, ಕೆ.ಸಿ. ಹೂಗಾರ, ಆರ್.ಜಿ. ಹಿರೇಮಠ ಮಾತನಾಡಿದರು. ಸೌಮ್ಯಾ ಹುತ್ತನಗೌಡ್ರ ಪ್ರಾಸ್ತಾವಿಕಮಾತನಾಡಿದರು, ಯಶೋದಾ ಜಿರಾಳ ಸ್ವಾಗತಿಸಿದರು. ವೀಣಾ ಚವಟೇರ ನಿರೂಪಿಸಿದರು. ಕಿರಣ ಕಾರಡಗಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

