ಹಾವೇರಿ

ಬೆಳೆ ವಿಮೆ: ರೈತರಿಗೆ ಮಾರ್ಗಸೂಚಿಗಳು

Published On :

ಹಾವೇರಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಲ್ಲಿ ಬೆಳೆಸಾಲ ಪಡೆಯದ ರೈತರು ಬಿತ್ತಿದ ಅಥವಾ ನಾಟಿ ಮಾಡಿದ ಬಳಿಕ 30 ದಿನಗಳ ಒಳಗಾಗಿ ಬ್ಯಾಂಕಿಗೆ ಘೋಷಣೆ ಸಲ್ಲಿಸಬೇಕು. ಮಳೆ ಆಶ್ರಿತ ಬತ್ತ, ಮುಸುಕಿನಜೋಳ, ಜೋಳ, ರಾಗಿ, ಸಜ್ಜೆ,ನವಣೆ, ಸಾಸಿವೆ, ಉದ್ದು, ಹೆಸರು, ಸೂರ್ಯಕಾಂತಿ, ಹುರುಳಿ, ಎಳ್ಳು, ಶೇಂಗಾ, ನೀರಾವರಿ ಆಶ್ರಿತ ಬತ್ತ, ಮುಸುಕಿನ ಜೋಳ, ಜೋಳ, ರಾಗಿ, ಸಜ್ಜೆ, ಸೋಯಾ ಅವರೆ, ಶೇಂಗಾ ಇವುಗಳನ್ನು ಬೆಳೆದ ರೈತರು ಆ. 31ರೊಳಗೆ ವಿಮೆ ವ್ಯಾಪ್ತಿಗೆ ಒಳಪಡಲು ಸೂಚಿಸಲಾಗಿದೆ.
ಮಳೆಆಶ್ರಿತ ರಾಗಿ, ಮುಸುಕಿನ ಜೋಳ, ಜೋಳ, ತೊಗರಿ, ಹೆಸರು, ಉದ್ದು, ಸೋಯಾ ಅವರೆ, ಸೂರ್ಯಕಾಂತಿ ಮತ್ತು ಶೇಂಗಾ ಇವುಗಳನ್ನು ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಹಾಗೂ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆವಿಮಾ ಯೋಜನೆ ಈ ಎರಡರಲ್ಲೂ ಕೆಲವು ಹೋಬಳಿಗಳಲ್ಲಿ ಒಳಪಡಿಸಲಾಗಿದೆ. ಬೆಳೆಸಾಲ ಪಡೆಯದ ರೈತರು ಈ ಪೈಕಿ ಯಾವುದಾದರೂ ಒಂದು ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ಕೊನೆಯ ದಿನಾಂಕ ಆ. 31.
ಬೆಳೆ ಸಾಲ ಪಡೆಯುವ ರೈತರ ಮಳೆ ಆಶ್ರಿತ ರಾಗಿ, ಮುಸುಕಿನಜೋಳ, ಜೋಳ, ತೊಗರಿ, ಹೆಸರು, ಉದ್ದು, ಸೋಯಾ ಅವರೆ, ಸೂರ್ಯಕಾಂತಿ ಮತ್ತು ಶೇಂಗಾ ಈ ಬೆಳೆಗಳನ್ನು ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಒಳಪಡಿಸಬಾರದು ಎಂದು ಹಾವೇರಿಯ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.